Saturday, 16th November 2024

Durga Puja: ಜಿಜಿಯಾ ಟ್ಯಾಕ್ಸ್‌, ನಮಾಜ್‌ ವೇಳೆ ಪೂಜೆ ಮಾಡುವಂತಿಲ್ಲ; ಬಾಂಗ್ಲಾದಲ್ಲಿ ದುರ್ಗಾ ಪೂಜೆಗೆ ನೂರೆಂಟು ವಿಘ್ನ

durga puja

ಢಾಕಾ: ಬಾಂಗ್ಲಾದೇಶ(Bangladesh)ದಲ್ಲಿ ಕಳೆದ ಹಲವು ತಿಂಗಳುಗಳಿಂದ ಹಿಂದೂಗಳ ಸ್ಥಿತಿ ಬಹಳ ಹದಗೆಟ್ಟಿದೆ. ಪ್ರತಿವರ್ಷ ಸಂಭ್ರಮದಿಂದ ಆಚರಿಸುವ ದುರ್ಗಾ ಪೂಜೆ(Durga Puja)ಗೂ ಬಾಂಗ್ಲಾದಲ್ಲಿ ನೂರೆಂಟು ವಿಘ್ನಗಳು ಎದುರಾಗಿವೆ. ಭದ್ರತಾ ಸಮಸ್ಯೆ, ಶಾಂತಿ ಸುವ್ಯವ‍ಸ್ಥೆ ಹದಗೆಡುವ ನೆಪವೊಡ್ಡಿ, ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ದುರ್ಗಾ ಪೂಜೆಗೆ ಸರ್ಕಾರ ಮತ್ತು ಮುಸ್ಲಿಂ ಮುಖಂಡರು ಅನುಮತಿ ನಿರಾಕರಿಸಿದೆ. ಪೂಜೆ ಆಚರಿಸಲೇಬೇಕೆಂದಿದ್ದರೆ 5ಲಕ್ಷ ರೂ. ಜಿಜಿಯಾ ತೆರಿಗೆ ಭರಿಸುವಂತೆ ಬಾಂಗ್ಲಾದೇಶ ಸರ್ಕಾರ ತಾಕೀತು ಮಾಡಿದೆ.

ದುರ್ಗಾ ಪೂಜಾ ಆಯೋಜಕರಿಗೆ ಬೆದರಿಕೆ ಪತ್ರ

ಸ್ಥಳೀಯ ಮಾಧ್ಯಮಗಳ ಪ್ರಕಾರ ಹಲವಾರು ಕಡೆಗಳಲ್ಲಿ ದುರ್ಗಾ ಪೂಜಾ ಸಮಿತಿಗೆ ಬೆದರಿಕೆ ಪತ್ರಗಳು ಬಂದಿವೆ ಎನ್ನಲಾಗಿದೆ. ಪತ್ರದಲ್ಲಿ ಒಂದು ವೇಳೆ ದುರ್ಗಾ ಪೂಜೆ ಆಚರಿಸಬೇಕೆಂದಿದ್ದರೆ ಐದು ಲಕ್ಷ ರೂ. ಪಾವತಿಸುವಂತೆ ಬೆದರಿಕೆವೊಡ್ಡಲಾಗಿದೆ. ಖುಲ್ನಾ ಪ್ರದೇಶದ ಡಾಕೋಪ್‌ನಲ್ಲಿರುವ ಹಲವಾರು ದೇವಸ್ಥಾನಗಳು ಈ ಬಗ್ಗೆ ಪೊಲೀಸ್‌ ದೂರು ದಾಖಲಿಸಿವೆ.

ದುರ್ಗಾ ಮೂರ್ತಿಗಳು ಧ್ವಂಸ

ರಾಷ್ಟ್ರದಾದ್ಯಂತ ಹಲವಾರು ಸ್ಥಳಗಳಲ್ಲಿ ದುರ್ಗಾ ಮೂರ್ತಿಗಳನ್ನು ಕಿಡಿಗೇಡಿಗಳನ್ನು ಧ್ವಂಸಗೊಳಿಸಿದ್ದಾರೆ. ಕಿಶೋರ್‌ಗಂಜ್‌ನ ಬತ್ರಿಶ್ ಗೋಪಿನಾಥ್ ಜಿಯುರ್ ಅಖಾರಾದಲ್ಲಿ ಗುರುವಾರ ಮುಂಜಾನೆ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಬಾಂಗ್ಲಾದೇಶದ ಕೊಮಿಲ್ಲಾ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ದುರ್ಗಾ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ ಮತ್ತು ದೇವಾಲಯದ ಹುಂಡಿಯನ್ನು ಲೂಟಿ ಮಾಡಲಾಗಿದೆ. ನರೈಲ್ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಮಿರಾಪಾರದಲ್ಲಿರುವ ದುರ್ಗಾ ದೇವಸ್ಥಾನದ ಮೇಲೆ ಮುಸ್ಲಿಮರು ದಾಳಿ ನಡೆಸಿದ್ದರು.

ಹಿಂದೂಗಳ ಅತ್ಯಂತ ಸಂಭ್ರಮದ ಹಬ್ಬವಾದ ನವರಾತ್ರಿಯಲ್ಲಿ ದುರ್ಗಾ ಪೂಜೆ ಮಾಡುವಂತಿಲ್ಲ ಎಂದು ಬಾಂಗ್ಲಾದೇಶದ ಮತಾಂಧ ಮುಸ್ಲಿಮರು ತಾಕೀತು ಮಾಡುತ್ತಿದ್ದಾರೆ. ಇದು ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಆತಂಕದ ವಿಷಯವಾಗಿದೆ. ತೀವ್ರಗಾಮಿ ಇಸ್ಲಾಮಿಕ್ ಗುಂಪುಗಳು ಹಬ್ಬದ ಮುಕ್ತ ಆಚರಣೆಯನ್ನು ವಿರೋಧಿಸುತ್ತಿವೆ ಮತ್ತು ಹಬ್ಬದ ಸಮಯದಲ್ಲಿ ರಾಷ್ಟ್ರವ್ಯಾಪಿ ರಜಾದಿನಗಳನ್ನು ನೀಡಬಾರದು ಎಂದು ಒತ್ತಾಯಿಸುತ್ತಿದೆ.

ಢಾಕಾದ ಸೆಕ್ಟರ್ 13 ರಲ್ಲಿ ಉಗ್ರಗಾಮಿ ಗುಂಪುಗಳು ಮೆರವಣಿಗೆ ನಡೆಸಿದ್ದು ಹಿಂದೂಗಳು ದುರ್ಗಾಪೂಜೆಗಾಗಿ ಆಟದ ಮೈದಾನವನ್ನು ಬಳಸುವುದನ್ನು ವಿರೋಧಿದ್ದಾರೆ. ಅವರು ಈ ಸ್ಥಳದಲ್ಲಿ ವರ್ಷಗಳಿಂದ ದುರ್ಗಾ ಪೂಜೆ ಆಚರಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Bangladesh Government : ಭಾರತದ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಬಾಂಗ್ಲಾದೇಶ