Monday, 25th November 2024

Rashid Khan: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ​​ ರಶೀದ್​ ಖಾನ್

Rashid Khan

ಕಾಬೂಲ್​: ಅಫಘಾನಿಸ್ತಾನ ತಂಡದ ಸ್ಟಾರ್‌ ಸ್ಪಿನ್ನರ್‌ ರಶೀದ್​ ಖಾನ್(Rashid Khan)​ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ(rashid khan marriage). ರಶೀದ್​ ಖಾನ್​ ಮದುವೆಯನ್ನು ಪಶ್ತೂನ್ ಪದ್ಧತಿಗಳ ಪ್ರಕಾರ ನಡೆಸಲಾಯಿತು. ಹಸೆಮಣೆ ಏರಿದ(rashid khan wedding) ರಶೀದ್‌ ಖಾನ್‌ಗೆ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌, ಸಚಿನ್‌ ತೆಂಡೂಲ್ಕರ್‌, ಇರ್ಫಾನ್‌ ಪಠಾನ್‌ ಸೇರಿದಂತೆ ಹಲವು ಆಟಗಾರರು ಶುಭ ಹಾರೈಸಿದ್ದಾರೆ.

ರಾಜಧಾನಿ ಕಾಬೂಲ್​ನಲ್ಲಿರುವ ಐಷಾರಾಮಿ ಹೋಟೆಲ್​ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯಿತು. ಈ ಸಮಾರಂಭಕ್ಕೆ ಅಫಘಾನಿಸ್ತಾನ ತಂಡದ ಎಲ್ಲ ಕ್ರಿಕೆಟಿಗರು ಹಾಜರಾಗಿದ್ದರು. ರಶೀದ್ ಮದುವೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ರಶೀದ್​ ಖಾನ್​ ಕೈಹಿಡಿದಿರುವ ವಧು ಯಾರೆಂಬುದರ ಬಗ್ಗೆ ಮಾಹಿತಿ ಇನ್ನು ತಿಳಿದುಬಂದಿಲ್ಲ. ಆದರೆ, ತಮ್ಮ ಸಂಬಂಧಿಯನ್ನೇ ಮದುವೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾತು ತಪ್ಪಿದ ರಶೀದ್‌

ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ರಶೀದ್‌ ಖಾನ್‌ ಅಫಘಾನಿಸ್ತಾನ ತಂಡ ಐಸಿಸಿ ವಿಶ್ವಕಪ್ ಗೆಲ್ಲಬೇಕು. ಆ ಬಳಿಕ ಮದುವೆಯಾಗುತ್ತೇನೆ ಎಂದು ಹೇಳಿದ್ದರು. ಆದರೆ ರಶೀದ್‌ ಈ ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರು ಮದುವೆಯಾಗಿದ್ದಾರೆ.

ಇದನ್ನೂ ಓದಿ IND vs BAN: ಬಾಂಗ್ಲಾದ ಶಕೀಬ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ವಿರಾಟ್‌ ಕೊಹ್ಲಿ

ರಶೀದ್ ಖಾನ್ ಅವರ ಮದುವೆಯಲ್ಲಿ ಆಲ್‌ರೌಂಡರ್ ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್, ನಜೀಬುಲ್ಲಾ ಜದ್ರಾನ್, ರಹಮತ್ ಶಾ, ಮುಜೀಬ್ ಉರ್ ರೆಹಮಾನ್ ಸೇರಿದಂತೆ ಹಲವು ಆಟಗಾರರು ಪಾಲ್ಗೊಂಡಿದ್ದರು. ಆಫ್ಘಾನ್‌ ಕ್ರಿಕೆಟ್ ಮಂಡಳಿಯ ಸಿಇಒ ನಸೀಬ್ ಖಾನ್ ಕೂಡ ಕಾಣಿಸಿಕೊಂಡಿದ್ದರು.

ರಶೀದ್ ಖಾನ್ ನಾಯಕತ್ವದಲ್ಲಿ ಆಫ್ಘಾನ್‌ ತಂಡವು ಇದೇ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬಲಿಷ್ಠ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ ತಂಡವನ್ನು ಮಣಿಸಿ ಸೆಮಿಫೈನಲ್‌ ತಲುಪಿ ಐತಿಹಾಸಿಕ ಸಾಧನೆ ಮಾಡಿತ್ತು. ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿಯೂ ತಂಡ ಅಮೋಘ ಪ್ರದರ್ಶನ ತೋರಿತ್ತು.

ರಶೀದ್‌ ಖಾನ್‌ ಅಫಘಾನಿಸ್ತಾನ ತಂಡದ ಪರ 93 ಟಿ20 ಪಂದ್ಯಗಳನ್ನಾಡಿ 152 ವಿಕೆಟ್‌ ಮತ್ತು 460 ರನ್‌ ಬಾರಿಸಿದ್ದಾರೆ. ಏಕದಿನದಲ್ಲಿ 105 ಪಂದ್ಯಗಳಿಂದ 1322 ರನ್‌ ಮತ್ತು 190 ವಿಕೆಟ್‌ ಕೆಡವಿದ್ದಾರೆ. 5 ಟೆಸ್ಟ್‌ ಪಂದ್ಯಗಳಿಂದ 34 ವಿಕೆಟ್‌ ಪಡೆದಿದ್ದಾರೆ. ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡುವ ಮೂಲಕ ಐಪಿಎಲ್‌ ಪದಾರ್ಪಣೆ ಮಾಡಿದ ರಶೀದ್‌ ಈವರೆಗೆ 121 ಪಂದ್ಯಗಳನ್ನಾಡಿ 149 ವಿಕೆಟ್‌ ಕಲೆಹಾಕಿದ್ದಾರೆ. ಪ್ರಸಕ್ತ ಗುಜರಾತ್‌ ಟೈಟಾನ್ಸ್‌ ತಂಡದ ಆಟಗಾರನಾಗಿದ್ದಾರೆ.