Saturday, 16th November 2024

Superstar Rajinikanth: ಸೂಪರ್‌ ಸ್ಟಾರ್‌ ಆರೋಗ್ಯದಲ್ಲಿ ಚೇತರಿಕೆ; ಆಸ್ಪತ್ರೆಯಿಂದ ಡಿಸ್ಚಾರ್ಜ್‌

Rajinikanth

ಚೆನೈ: ತೀವ್ರ ಅನಾರೋಗ್ಯದಿಂದ ಅಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ನಟ ರಜನಿಕಾಂತ್(Superstar Rajinikanth) ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಹೀಗಾಗಿ ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ನಟ ರಜನಿಕಾಂತ್ ಡಿಸ್ಚಾರ್ಜ್ ಆಗಿದ್ದಾರೆ .

ನಟ ರಜನಿಕಾಂತ್ ಅವರಿಗೆ ಕಳೆದ ಸೋಮವಾರ ತಡರಾತ್ರಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪೋಲೋ ಆಸ್ಪತ್ರೆಯ ಎರಡರಿಂದ ಮೂವರು ವೈದ್ಯರ ತಂಡ ರಜನಿಕಾಂತ್ ಅವರಿಗೆ ಚಿಕಿತ್ಸೆ ನೀಡಿತ್ತು. ಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖರಾದ ಹಿನ್ನೆಲೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

2020 ರಲ್ಲಿ ಅಧಿಕ ರಕ್ತದೊತ್ತಡ ನಂತರ ಅವರನ್ನು ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ತಮ್ಮ ರಾಜಕೀಯ ಪಕ್ಷವನ್ನು ಪ್ರಾರಂಭಿಸುವ ಒಂದೆರಡು ದಿನಗಳ ಮೊದಲು ಆಸ್ಪತ್ರೆ ಸೇರಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಆರೋಗ್ಯದ ದೃಷ್ಟಿಯಿಂದ ರಾಜಕೀಯಕ್ಕೆ ಬರುವುದಿಲ್ಲ ಎಂದು ಘೋಷಿಸಿದ್ದರು. ರಜನಿಕಾಂತ್ ಮೂರು ದಿನಗಳ ಕಾಲ ಚಿಕಿತ್ಸೆಗೆ ಒಳಗಾದ ನಂತರ ಅವರು ತಮ್ಮ ಚೆನ್ನೈ ನಿವಾಸಕ್ಕೆ ಮರಳಿದ್ದರು.

ರಜನಿ ಅವರ ಹೃದಯಕ್ಕೆ ಸಂಪರ್ಕಿಸುವ ಪ್ರಮುಖ ರಕ್ತನಾಳದಲ್ಲಿ ಊತವಿದ್ದು ಮತ್ತು ಅದನ್ನು ಸರಿಪಡಿಸಲು ವೈದ್ಯರು ಶಸ್ತ್ರಚಿಕಿತ್ಸೆಯೇತರ ಕಾರ್ಯವಿಧಾನ ಮಾಡಬೇಕಾಗಿತ್ತು. ಅದನ್ನು ಪೂರ್ಣಗೊಳಿಸಲಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಅಪೊಲೊ ಆಸ್ಪತ್ರೆ ಬಿಡುಗಡೆ ಮಾಡಿದ ಬುಲೆಟಿನ್‌ನಲ್ಲಿ ಊತ ಕಡಿಮೆ ಮಾಡಲು ಹೃದಯದೊಳಗೆ ಸ್ಟೆಂಟ್ ಹಾಕಲಾಗಿದೆ ಎಂದು ಹೇಳಲಾಗಿದೆ. ರಜನಿಕಾಂತ್ ಆರೋಗ್ಯವಾಗಿದ್ದಾರೆ ಮತ್ತು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಅದು ಹೇಳಿದೆ.

ತಲೈವರ್” ಎಂದು ಪ್ರೀತಿಯ ಹೆಸರು ಹೊಂದಿರುವ ರಜನಿಕಾಂತ್ ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ನಟರಲ್ಲಿ ಒಬ್ಬರು. ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನವನ್ನು ಹೊಂದಿದ್ದರು. ಅವರ ಇತ್ತೀಚಿನ ಸಿನಿಮಾ ಆಕ್ಷನ್-ಕಾಮಿಡಿ ಜೈಲರ್. ಆಗಸ್ಟ್ 9, 2023 ರಂದು ಬಿಡುಗಡೆಯಾಗಿತ್ತು. ಅದು ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿತ್ತು.

ರಜನಿಕಾಂತ್ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ‘ವೆಟ್ಟೈಯಾನ್’ ನ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. .ಅವರು ವೈರಲ್ ಡಾನ್ಸ್ ಮಾಡಿದ್ದರು. ಟಿಜೆ ಜ್ಞಾನವೇಲ್ ನಿರ್ದೇಶನದ ವೆಟ್ಟೈಯನ್ ಆಕ್ಷನ್ ಪ್ಯಾಕ್ಡ್ ಮನರಂಜನಾ ಚಿತ್ರವಾಗಿದೆ. ಅಕ್ಟೋಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Superstar Rajinikanth : ಎರಡು ದಿನದಲ್ಲಿ ರಜಿನಿಕಾಂತ್‌ ಡಿಸ್ಚಾರ್ಜ್‌; ಆಸ್ಪತ್ರೆಯ ಬುಲೆಟಿನ್ ಬಿಡುಗಡೆ