Sunday, 6th October 2024

Kick 2: ಡೆವಿಲ್ ಈಸ್ ಬ್ಯಾಕ್: ಸಿಕಂದರ್ ಸೆಟ್‌ನಲ್ಲಿ ಕಿಕ್ 2 ಘೋಷಣೆ, ಸಲ್ಲು ಡ್ಯಾಶಿಂಗ್ ಲುಕ್​ಗೆ ಫ್ಯಾನ್ಸ್ ಫಿದಾ

Kick 2

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಸದ್ಯ ತಮ್ಮ ‘ಸಿಕಂದರ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಬಹುನಿರೀಕ್ಷಿತ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಇದೀಗ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಸದ್ದಿಲ್ಲದೆ ಸಲ್ಮಾನ್ ಖಾನ್ ಅವರ ಮತ್ತೊಂದು ಹೊಸ ಚಿತ್ರ ಘೋಷಣೆಯಾಗಿದೆ. ಅದುವೇ ‘ಕಿಕ್ 2’ (Kick 2). ಸಲ್ಮಾನ್ ಸಿಕಂದರ್ ನಂತರ ‘ಕಿಕ್’ ಚಿತ್ರದ ಸೀಕ್ವೆಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಈ ಸಿನಿಮಾದ ಅಧಿಕೃತವಾಗಿ ಘೋಷಣೆಯಾಗಿದೆ.

ವಿಶೇಷ ಎಂದರೆ ‘ಸಿಕಂದರ್’ ಸಿನಿಮಾ ಸೆಟ್‌ನಿಂದಲೇ ಸಲ್ಲು ಅವರ ಫಸ್ಟ್ ಲುಕ್ ಫೋಟೋಶೂಟ್‌ನ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋದಲ್ಲಿನ ಸಲ್ಮಾನ್ ಬಾಡಿ ಮತ್ತು ಡ್ಯಾಶಿಂಗ್ ಲುಕ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಈ ಬಾರಿ ಭಾಯ್​ಜಾನ್ ಅಬ್ಬರದ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಕಿಕ್‌ನ ಮುಂದುವರಿದ ಭಾಗವಾದ ಕಿಕ್ 2 ಅನ್ನು ಅಕ್ಟೋಬರ್ 4 ರಂದು ಅಧಿಕೃತವಾಗಿ ಘೋಷಿಸಲಾಯಿತು. ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಈ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರ 2014 ರ ಚಲನಚಿತ್ರ ಕಿಕ್, ಇದು ನಾಡಿಯಾಡ್ವಾಲಾ ಅವರ ಚೊಚ್ಚಲ ನಿರ್ದೇಶನವಾಗಿತ್ತು. ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. 200 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಸಲ್ಮಾನ್ ಖಾನ್ ಅವರ ಮೊದಲ ಚಿತ್ರವಾಯಿತು. ಈ ಚಿತ್ರದಲ್ಲಿ ಸಲ್ಮಾನ್ ಹೊರತಾಗಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನವಾಜುದ್ದೀನ್ ಸಿದ್ದಿಕಿ ಕಾಣಿಸಿಕೊಂಡಿದ್ದರು. ಆ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಕಿಕ್ ಕೂಡ ಒಂದಾಗಿತ್ತು.

ಸದ್ಯ ಕಿಕ್ 2 ಸಿನಿಮಾದ ಸ್ಕ್ರಿಪ್ಟ್ ಯಾರು ಬರೆಯುತ್ತಿದ್ದಾರೆ ಅಥವಾ ಜಾಕ್ವೆಲಿನ್, ರಣದೀಪ್ ಹೂಡಾ ಮತ್ತು ನವಾಜುದ್ದೀನ್ ಸಿದ್ದಿಕಿ ತಮ್ಮ ಪಾತ್ರಗಳನ್ನು ಮುಂದುವರೆಸುತ್ತಾರೆಯೆ ಎಂಬುದರ ಕುರಿತು ಇನ್ನೂ ಯಾವುದೇ ಅಪ್‌ಡೇಟ್ ಇಲ್ಲ. ಏತನ್ಮಧ್ಯೆ, ಸಲ್ಮಾನ್ ಎಆರ್ ಮುರುಗದಾಸ್ ಅವರ ಸಿಕಂದರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಆಕ್ಷನ್ ಚಿತ್ರ ‘ಸಿಕಂದರ್’ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಈದ್ 2025 ರಂದು ಬಿಡುಗಡೆಗೆ ಸಿದ್ಧವಾಗಿದೆ.

ನಾನು ಕಂಡವರ ಹೆಣ್ಮಕ್ಕಳನ್ನು, ಕಂಡವರ ಮಂಚವನ್ನು ಯಾವತ್ತು ಮುಟ್ಟಿಲ್ಲ-ನಾನು ರಿಯಲ್ ಹೀರೋ: ಲಾಯರ್ ಜಗದೀಶ್