ತಿರುವನಂತಪುರ: ಕೆಲವೇ ಕ್ಷಣದಲ್ಲಿ ಹಾರಾಟ ಆರಂಭಿಸಬೇಕಿದ್ದ ಏರ್ ಇಂಡಿಯಾ ವಿಮಾನ(Air India Flight)ದಲ್ಲಿ ಏಕಾಏಕಿ ಹೊಗೆ(Smoke alert) ಕಾಣಿಸಿಕೊಂಡ ಘಟನೆ ಕೇರಳದ ತಿರುವನಂತಪುರಂ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ತಿರುವನಂತಪುರಂ ನಿಂದ ಒಮನ್‌ನಲ್ಲಿರುವ ಮಸ್ಕತ್‌ಗೆ ತೆರಳಲು ಸಜ್ಜಾಗಿದ್ದ IX549 ವಿಮಾನದ ಟೇಕ್ ಆಫ್ ಆಗುವ ಮುನ್ನ ದಟ್ಟ ಹೊಗೆ ಕಾಣಿಸಿಕೊಂಡಿದೆ. ಒಳಗಿದ್ದ ಪ್ರಯಾಣಿಕರೆಲ್ಲರೂ ಒಂದು ಕ್ಷಣಕ್ಕೆ ಆಘಾತಗೊಂಡಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ವಿಮಾನ ರನ್ ವೇನಲ್ಲಿ ಚಲಿಸುತ್ತಿದ್ದಾಗಲೇ ಈ ಹೊಗೆ ಕಾಣಿಸಿಕೊಂಡಿದ್ದು, ವಿಮಾನ ಸಿಬ್ಬಂದಿ ಅದನ್ನು ಗಮನಿಸಿದ ಕಾರಣ ಬಹುದೊಡ್ಡ ದುರಂತವೊಂದು ತಪ್ಪಿದೆ.
ಇನ್ನು ವಿಮಾನದಲ್ಲಿ148 ಪ್ರಯಾಣಿಕರಿದ್ದು, ಯಾರಿಗೂ ಯಾವುದೇ ಅಪಾಯಗಳಾಗಿಲ್ಲ. ಹೇಳಿಕೆಯಲ್ಲಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘಟನೆಯನ್ನು ಒಪ್ಪಿಕೊಂಡಿದೆ ಮತ್ತು ಪ್ರಯಾಣಿಕರಿಗೆ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಲಾಗಿದೆ ಮತ್ತು ತನಿಖೆಯನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
ನಮ್ಮ ಕಾರ್ಯಾಚರಣೆಗಳ ಪ್ರತಿಯೊಂದು ಅಂಶಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡುವಾಗ ನಾವು ಅನಾನುಕೂಲತೆಗಾಗಿ ವಿಷಾದಿಸುತ್ತೇವೆ. ಟೇಕ್-ಆಫ್ ಆರಂಭದ ಸಮಯದಲ್ಲಿ ಕಂಡುಬಂದ ಹೊಗೆಯ ಶಂಕೆಯಿಂದಾಗಿ, ನಮ್ಮ ವಿಮಾನವೊಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕೊಲ್ಲಿಗೆ ಮರಳಿತು. ನಮ್ಮ ಪ್ರಯಾಣಿಕರ ಮುಂದಿನ ಪ್ರಯಾಣಕ್ಕಾಗಿ ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ. ಸಮಸ್ಯೆಯ ನಿಖರ ಸ್ವರೂಪವನ್ನು ನಿರ್ಧರಿಸಲು ತನಿಖೆ ನಡೆಸಲಾಗುವುದು ಎಂದು ಅದು ಹೇಳಿದೆ.
ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಹೆಲಿಕಾಪ್ಟರ್(Helicopter Crash)ವೊಂದು ಪುಣೆಯಲ್ಲಿ ಪತನಗೊಂಡಿದ್ದು, ಮೂರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುಣೆ ಸಮೀಪದ ಬವ್‌ಧಾನ್‌ನಲ್ಲಿ ಈ ದುರಂತ ಸಂಭವಿಸಿದ್ದು, ಇದು ಸರ್ಕಾರಿ ಹೆಲಿಕಾಪ್ಟರ್ ಅಥವಾ ಖಾಸಗಿ ಹೆಲಿಕಾಪ್ಟರ್ ಎಂದು ತಿಳಿದಿಲ್ಲ. ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್‌ಗಳು ಮತ್ತು ಎಂಜಿನಿಯರ್ ಇದ್ದರು ಎನ್ನಲಾಗಿದೆ.
ಇಂದು ಬೆಳಗ್ಗೆ 6.45ರ ಸುಮಾರಿಗೆ ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಪುಣೆಯ ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ. “ಪುಣೆ ಜಿಲ್ಲೆಯ ಬವ್ಧಾನ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಇದು ಯಾರ ಹೆಲಿಕಾಪ್ಟರ್ ಎಂದು ಇನ್ನೂ ತಿಳಿದಿಲ್ಲ ಎಂದು ಹಿರಿಯ ಇನ್ಸ್‌ಪೆಕ್ಟರ್ ಕನ್ಹಯ್ಯಾ ಥೋರಟ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಆಕ್ಸ್‌ಫರ್ಡ್ ಗಾಲ್ಫ್ ಕ್ಲಬ್‌ನ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಟೇಕಾಫ್ ಆಗಿದ್ದು, ಆ ಪ್ರದೇಶದಲ್ಲಿ ದಟ್ಟವಾದ ಮಂಜಿನಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಈ ಸುದ್ದಿಯನ್ನೂ ಓದಿ: Helicopter Crash: ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ನೆಲಕ್ಕಪ್ಪಳಿಸಿದ ಹೆಲಿಕಾಪ್ಟರ್; ಮೂವರು ಬಲಿ