Sunday, 6th October 2024

ಮಾಯಾಬಜಾರ್‌ನಿಂದ ರಾಕೆಟ್‌ರಿ ವರೆಗೆ: ಜಿಯೋ ಸಿನಿಮಾದಲ್ಲಿದೆ IMDbನಲ್ಲಿ ಟಾಪ್ ರೇಟಿಂಗ್ ಪಡೆದ ಸಿನಿಮಾಗಳು

IMDb movies

ಸಿನಿಮಾ, ಟಿವಿ ಮತ್ತು ಸೆಲೆಬ್ರಿಟಿಗಳ ವಿಷಯವನ್ನು ತಿಳಿಯಲು ವಿಶ್ವದ ಅತ್ಯಂತ ಜನಪ್ರಿಯ ಮತ್ತು ಅಧಿಕೃತ ಮೂಲವಾದ IMDb, ಇದೀಗ ಎಲ್ಲಾ ಕೆಟಗರಿಯ ಮತ್ತು ಭಾಷೆಯ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಟಾಪ್ 50 ಅತ್ಯಧಿಕ-ರೇಟ್ ಪಡೆದ ಸಿನಿಮಾಗಳ ಪಟ್ಟಿಯನ್ನು ಇತ್ತೀಚೆಗೆ ಅನಾವರಣಗೊಳಿಸಿದೆ.

ಎಲ್ಲಾ ವಯಸ್ಸಿನವರು ನೋಡುವಂತಹ ಸಿನಿಮಾ, ಧಾರಾವಾಹಿ, ಕ್ರೀಡೆ ಸೇರಿದಂತೆ ಅನೇಕ ಕಂಟೆಂಟ್​ಗಳನ್ನು ಒಳಗೊಂಡಿರುವ ಭಾರತದ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಜಿಯೋ ಸಿನಿಮಾದಲ್ಲಿ ಅನೇಕ ಅತ್ಯುತ್ತಮ ಚಲನಚಿತ್ರಗಳು ಕೂಡ ಇವೆ. ನೀವು ಮಿಸ್ ಮಾಡದೆ ನೋಡಬೇಕಾದ ಅನೇಕ ಸಿನಿಮಾಗಳು ಇದರಲ್ಲಿದೆ. ಸದ್ಯ ಜಿಯೋ ಸಿನಿಮಾದಲ್ಲಿ ಲಭ್ಯವಿರುವ ಟಾಪ್ ರೇಟಿಂಗ್ ಸಿನಿಮಾಗಳ ವಿವರ ನೋಡೋಣ.

1. ಮಾಯಾಬಜಾರ್ 1957

ನಿರ್ದೇಶಕ ಕೆ.ವಿ. ರೆಡ್ಡಿ ಅವರ ಮಾಯಾಬಜಾರ್ ತೆಲುಗಿನ ಫ್ಯಾಂಟಸಿ ಚಿತ್ರವಾಗಿದ್ದು, ಪುರಾಣ, ಪ್ರೀತಿ ಮತ್ತು ಹಾಸ್ಯವನ್ನು ಒಳಗೊಂಡಿದೆ. 9.1 ರ IMDb ರೇಟಿಂಗ್‌ನೊಂದಿಗೆ, ಈ ಚಲನಚಿತ್ರವು ಮಹಾಭಾರತದ ಪಾತ್ರಗಳನ್ನು ಒಳಗೊಂಡಿರುವ ಭಗವಾನ್ ಕೃಷ್ಣನ ತವರು ದ್ವಾರಕಾದ ಕಥೆಯನ್ನು ಹೊಂದಿದೆ. ಬಲರಾಮನು ತನ್ನ ಮಗಳನ್ನು ಸುಭದ್ರೆಯ ಮಗ ಅಭಿಮನ್ಯುವಿಗೆ ಮದುವೆ ಮಾಡಿಕೊಡುವುದಾಗಿ ಪ್ರತಿಜ್ಞೆ ಮಾಡುತ್ತಾನೆ, ಆದರೆ ಪಾಂಡವರು ತಮ್ಮ ರಾಜ್ಯವನ್ನು ಕಳೆದುಕೊಂಡಾಗ ಏನೆಲ್ಲ ಆಗುತ್ತದೆ ಎಂಬ ಕುರಿತು ಚಿತ್ರದಲ್ಲಿ. ಮೋಡಿಮಾಡುವ ಸಂಗೀತ ಮತ್ತು ರೋಮಾಂಚಕ ದೃಶ್ಯಗಳು ಒಂದುಕಡೆಯಾದರೆ- N.T. ರಾಮರಾವ್ ಮತ್ತು ಸಾವಿತ್ರಿ ಅವರ ನಟನೆ ಭಾರತೀಯ ಚಿತ್ರರಂಗದಲ್ಲಿ ಒಂದು ಹೆಗ್ಗುರುತಾಗಿದೆ.

2. ಸಂದೇಶಂ 1991

ಈ ಮಲಯಾಳಂ ಸಿನಿಮಾ IMDb ನಲ್ಲಿ 9 ರೇಟಿಂಗ್ ಅನ್ನು ಹೊಂದಿದೆ. ಇದನ್ನು ಸತ್ಯನ್ ಅಂತಿಕಾಡ್ ನಿರ್ದೇಶಿಸಿದ್ದಾರೆ. ಹಾಸ್ಯದ ಜೊತೆ ಭಾರತದ ರಾಜಕೀಯದ ವ್ಯವಸ್ಥೆ ಕುರಿತು ಈ ಸಿನಿಮಾದಲ್ಲಿದೆ. ಇಬ್ಬರು ಸಹೋದರರಾದ ವೇಣು ಮತ್ತು ಕೃಷ್ಣನ್ ಅವರ ಕುರಿತು ಇರುವ ಕಥೆ ಇದಾಗಿದೆ. ಅವರು ತಮ್ಮ ರಾಜಕೀಯದ ಕುರಿತು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅವರ ನಡುವಿನ ಜಗಳ, ಅವರ ರಾಜಕೀಯ ಮತ್ತು ಚುನಾವಣಾ ವ್ಯವಸ್ಥೆ, ಹಾಸ್ಯ, ಪ್ರಚೋದಿಸುವ ಘಟನೆಗಳು ಜನರನ್ನು ರಂಚಿಸುತ್ತದೆ.

3. ಮಣಿಚಿತ್ರತಾಝು

ಮೋಹನ್‌ಲಾಲ್, ಸುರೇಶ್ ಗೋಪಿ ಮತ್ತು ಶೋಬನಾ ಅಭಿನಯದ 1993 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ‘ಮಣಿಚಿತ್ರತಝು’, IMDB ನಲ್ಲಿ 8.7 ರೇಟಿಂಗ್‌ ಹೊಂದಿದೆ. ಇದು ಹಾರರ್-ಕಾಮಿಡಿ ಸಿನಿಮಾ ಆಗಿದೆ. ಮಧು ಮುತ್ತಮ್ ಅವರು ಚಿತ್ರಕಥೆ ಬರೆದಿರುವ ಫಾಜಿಲ್ ನಿರ್ದೇಶನದ ಈ ಸಿನಿಮಾ ಶ್ರೀಮಂತ ಕುಟುಂಬ ಮತ್ತು ಅವರ ಮೂಢನಂಬಿಕೆಗಳ ಸುತ್ತ ಸುತ್ತುತ್ತದೆ.

4. ರಾಕೆಟ್ರಿ: ನಂಬಿ ಎಫೆಕ್ಟ್

8.7 ರ ಸ್ಕೋರ್‌ನೊಂದಿಗೆ, ಆರ್ ಮಾಧವನ್ ಅಭಿನಯದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಕಥೆ ಇದಾಗಿದೆ. ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಸ್ಪೂರ್ತಿದಾಯಕ ನೈಜ ಕಥೆಯನ್ನು ಇದು ಹೇಳುತ್ತದೆ. ಅವರು ಎದುರಿಸಿದ ಸವಾಲುಗಳು ಮತ್ತು ಅವರ ಬಂಧನಕ್ಕೆ ಕಾರಣ, ಪರಿಶ್ರಮ ಮತ್ತು ದೇಶಭಕ್ತಿಯ ವಿಷಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

5. 777 ಚಾರ್ಲಿ

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಕನ್ನಡ ಸಿನಿಮಾ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದ ಪಟ್ಟಿಗೆ ಸೇರಿದೆ. ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 777 ಚಾರ್ಲಿಯು ಧರ್ಮ ಎಂಬವನ ಹೃದಯಸ್ಪರ್ಶಿ ಪ್ರಯಾಣ ಮತ್ತು ಚಾರ್ಲಿ ಎಂಬ ಬೀದಿನಾಯಿಯೊಂದಿಗಿನ ಸ್ನೇಹದ ಕಥೆ ಹೇಳುತ್ತದೆ. ಅವರು ತಮ್ಮ ಜೀವನವನ್ನು ಬದಲಾಯಿಸಲು ಏನೆಲ್ಲ ಸಾಹಸ ಮಾಡುತ್ತಾರೆ ಎಂಬುದು ಸಿನಿಮಾದಲ್ಲಿದೆ.