Saturday, 23rd November 2024

Viral Video: ಗೂಗಲ್‌ನಿಂದ 65 ಲಕ್ಷ ರೂ. ಸಂಬಳದ ಆಫರ್ ಪಡೆದ ಉದ್ಯೋಗಿ; ಪೋಸ್ಟ್ ವೈರಲ್

Viral Video

ಗೂಗಲ್ (google) ಯಾವಾಗಲೂ ಲಾಭದಾಯಕ ಉದ್ಯೋಗ ಆಫರ್‌ಗಳನ್ನು (job offer) ನೀಡುವಲ್ಲಿ ಹೆಸರುವಾಸಿಯಾಗಿದೆ. ಆದರೆ ಇದೀಗ ಕಂಪೆನಿಯ ಇತ್ತೀಚಿನ ಆಫರ್ ಲೆಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ. ಅಮೆರಿಕನ್ ಬಹುರಾಷ್ಟ್ರೀಯ ಹಣಕಾಸು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹತ್ತು ವರ್ಷಗಳ ಅನುಭವವಿರುವ ಉದ್ಯೋಗಿಯೊಬ್ಬರಿಗೆ ಬೆಂಗಳೂರಿನಲ್ಲಿ ವಾರ್ಷಿಕ 65 ಲಕ್ಷ ರೂ. ಪ್ಯಾಕೇಜ್‌ನ ಆಫರ್ ನೀಡಲಾಗಿದೆ.

ಎಕ್ಸ್ ನಲ್ಲಿ ಕಾರ್ತಿಕ್ ಜೋಲಾಪರಾ ಎಂಬವರು ಅನಾಮಧೇಯ ವ್ಯಕ್ತಿಯ ಆಫರ್ ಲೆಟರ್ ಅನ್ನು ಹಂಚಿಕೊಂಡಿದ್ದು ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಮೆರಿಕನ್ ಎಂಎನ್‌ಸಿ ಪನಿ ಬೆಂಗಳೂರಿನ ಜೆಪಿ ಮೋರ್ಗಾನ್‌ನಲ್ಲಿ ಕೆಲಸ ಮಾಡುವ ಡೆವಲಪರ್ 10 ವರ್ಷಗಳ ಅನುಭವ ಹೊಂದಿದ್ದಾರೆ. ಆದರೆ ಇವರಿಗೆ ಕೇವಲ ವಾರ್ಷಿಕ 65 ಲಕ್ಷ ರೂ. ಪ್ಯಾಕೇಜ್ ಆಫರ್ ಮಾಡಲಾಗಿದೆ. ಇದನ್ನು ಕಾರ್ತಿಕ್ ಅವರು ಅನಾಮಧೇಯ ವ್ಯಕ್ತಿಯ ಪ್ರೊಫೈಲ್‌ನೊಂದಿಗೆ ಹಂಚಿಕೊಂಡಿದ್ದಾರೆ.

“10 ವರ್ಷಗಳ ಹಳೆಯ ಅನುಭವ ? ಅಪೂರ್ವ ಕೊಡುಗೆಗಳು ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಕಾರ್ತಿಕ್ ಅವರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಉದ್ಯೋಗ ಪಡೆದ ವ್ಯಕ್ತಿಯು ಬಿಇ ಪದವಿ ಪಡೆದಿದ್ದಾನೆ. ಆದರೆ ಬೆಂಗಳೂರಿನಲ್ಲಿ ಕಂಪೆನಿಯಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾನೆ. ಗೂಗಲ್ ಅವನಿಗೆ ವಾರ್ಷಿಕ 65 ಲಕ್ಷ ರೂ. ಸಂಬಳ ಮತ್ತು 9 ಲಕ್ಷ ರೂ. ವಾರ್ಷಿಕ ಬೋನಸ್, 19 ಲಕ್ಷ ರೂ.ಪ್ರೋತ್ಸಾಹಕ ಬೋನಸ್, 5 ಲಕ್ಷ ರೂ. ವರ್ಗಾವಣೆ ಬೋನಸ್‌ಗಳು ಸೇರಿದೆ. ವ್ಯಕ್ತಿಗೆ ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ ಪೋಸ್ಟ್ ಅನ್ನು ನೀಡಲಾಗಿದೆ. ಇದನ್ನು ಅವರು ಮನಸಾರೆ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಒಬ್ಬರು ಪ್ರತಿಕ್ರಿಯಿಸಿ, ಈ ಸಂಖ್ಯೆಗಳನ್ನು ನೋಡುವಾಗ ರೋಮಾಂಚನವಾಗುತ್ತದೆ. ನನ್ನ ಪ್ರಕಾರ ಅವರು ತಂತ್ರಜ್ಞಾನದಲ್ಲಿ ಸಾಮಾನ್ಯರು ಎಂದಿದ್ದಾರೆ.

ಇನ್ನೊಬ್ಬರು, ನೀವು ಎಲ್ಲವನ್ನೂ ಸೇರಿಸಿದರೆ ಮೊದಲ ವರ್ಷಕ್ಕೆ ಗೂಗಲ್ ಕೊಡುಗೆ 1.64 ಕೋಟಿ ರೂ. ಎಂದಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ ಬಹಳ ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಸಂಖ್ಯೆಗಳಿಂದ ಖುಷಿಯಾಗಿಲ್ಲ. ನಾನು ಅದೇ ಕಂಪನಿಯಿಂದ ಉತ್ತಮ ಪ್ಯಾಕೇಜ್ ನೀಡಿರುವುದನ್ನು ನೋಡಿದ್ದೇನೆ. 10 ವರ್ಷಗಳ ಅನುಭವ ಮತ್ತು ಎಲ್ 5 ಗೆ ಸಾಕಷ್ಟು ಪರಿಣತಿಯ ಅಗತ್ಯವಿದೆ ಎಂದಿದ್ದಾರೆ.

Viral Video: ರೈಲಿನ ಕಿಟಕಿಯಿಂದ ಬಾಲಕಿಯ ಫೋನ್ ಕಿತ್ತು ಪರಾರಿಯಾದ ಕಳ್ಳ! ವಿಡಿಯೊ ನೋಡಿ

ಇನ್ನೊಬ್ಬರು ಪ್ರತಿಕ್ರಿಯಿಸಿ ಈ ಸಂಖ್ಯೆಗಳನ್ನು 6- 8 ವರ್ಷಗಳ ಅನುಭವ ಹೊಂದಿರುವ ಜನರೊಂದಿಗೆ ನೋಡಬಹುದು. ಜನರು ಒಂದೇ ರೀತಿ ಅಥವಾ ಇನ್ನೂ ಹೆಚ್ಚಿನದನ್ನು ಪಡೆಯುವುದನ್ನು ನಾನು ನೋಡಿದ್ದೇನೆ ಎಂದಿದ್ದಾರೆ. ಇನ್ನೊಬ್ಬರು ಅವನಿಗೆ ಶುಭ ಹಾರೈಸುವುದಾಗಿ ಹೇಳಿದ್ದಾರೆ.