ನವರಾತ್ರಿ (Navaratri 2024) ಒಂಬತ್ತು ದಿನಗಳ ಕಾಲ ನಡೆಯುವಂತಹ ಒಂದು ಪವಿತ್ರವಾದ ಹಬ್ಬವಾಗಿದೆ. ಈ ವರ್ಷ ಅಕ್ಟೋಬರ್ 3ರಿಂದ ನವರಾತ್ರಿ ಆರಂಭವಾಗಿದೆ. ಈ ನವರಾತ್ರಿಗಳಲ್ಲಿ ಪಾರ್ವತಿ ದೇವಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿಧಾತ್ರಿ ಹೀಗೆ ಒಂಭತ್ತು ರೂಪಗಳಲ್ಲಿ ಪೂಜಿಸಲಾಗುತ್ತದೆ. ಇದೀಗ ನವರಾತ್ರಿಯ ಮೂರನೇ ದಿನದಂದು ತಾಯಿ ಚಂದ್ರಘಂಟಾಳನ್ನು ಪೂಜಿಸಿ. ಹಾಗೇ ಆಕೆ ಯಾರು? ಆಕೆಯ ಪೂಜಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ.
ಚಂದ್ರಘಂಟಾ ಯಾರು? ಮಹತ್ವ ಏನು?
ಪಾರ್ವತಿ ದೇವಿಯ ವಿವಾಹಿತ ಅವತಾರ ಈ ಚಂದ್ರಘಂಟಾ ದೇವಿ. ದೃಕ್ ಪಂಚಾಂಗದ ಪ್ರಕಾರ, ಮಹಾಗೌರಿ ಶಿವನನ್ನು ಮದುವೆಯಾದ ನಂತರ, ಅವಳು ತನ್ನ ಹಣೆಯನ್ನು ಅರ್ಧಚಂದ್ರಾಕಾರದ ಬೊಟ್ಟನ್ನು ಇಡಲು ಪ್ರಾರಂಭಿಸಿದ್ದಾಳೆ. ಹಾಗಾಗಿ ಅವಳು ಚಂದ್ರಘಂಟಾ ದೇವಿ ಎಂದು ಪ್ರಸಿದ್ಧಳಾದಳು. 10 ಕೈಗಳನ್ನು ಹೊಂದಿರುವ ದೇವಿ ಅದರಲ್ಲಿ ನಾಲ್ಕು ಬಲಗೈಗಳಲ್ಲಿ ಕಮಲದ ಹೂವು, ಬಾಣ, ಧನುಷ್ ಮತ್ತು ಜಪಮಾಲೆ, ಐದನೇ ಬಲಗೈಯಲ್ಲಿ ಅಭಯ ಮುದ್ರೆಯನ್ನು ಮತ್ತು ಐದನೇ ಎಡಗೈಯಲ್ಲಿ ವರದಾ ಮುದ್ರೆಯನ್ನು ಹಿಡಿದಿದ್ದಾಳೆ.
ಚಂದ್ರಘಂಟಾಳನ್ನು ಪ್ರಶಾಂತ ರೂಪದಲ್ಲಿರುವ ಪಾರ್ವತಿ ದೇವಿ ಎಂದು ಹೇಳಲಾಗುತ್ತದೆ. ಚಂದ್ರನ ಶಬ್ದ ಮತ್ತು ಅವಳ ಹಣೆಯ ಮೇಲಿನ ಗಂಟೆಯು ಅವಳ ಭಕ್ತರಲ್ಲಿದ್ದ ಎಲ್ಲಾ ರೀತಿಯ ನಕರಾತ್ಮಕತೆಯನ್ನು ಓಡಿಸುತ್ತದೆ ಎಂದು ನಂಬಲಾಗುತ್ತದೆ. ದಂತಕಥೆಯ ಪ್ರಕಾರ, ಅವಳ ಗಂಟೆಯ ಶಬ್ದವು ಯುದ್ಧಗಳಲ್ಲಿ ಅನೇಕ ರಾಕ್ಷಸರನ್ನು ಸೋಲಿಸಿ, ಅವರಿಗೆ ಮುಕ್ತಿ ನೀಡಿದೆ ಎನ್ನಲಾಗಿದೆ.
ಚಂದ್ರಘಂಟಾ ದೇವಿಯ ಪೂಜಾ ವಿಧಿ ಮತ್ತು ಆಚರಣೆಗಳು:
ದೃಕ್ ಪಂಚಾಂಗದ ಪ್ರಕಾರ, ಈ ದಿನ ಭಕ್ತರು ಶಿವನೊಂದಿಗೆ ಚಂದ್ರಘಂಟಾ ಮಾತೆಯನ್ನು ಪೂಜಿಸುತ್ತಾರೆ ಮತ್ತು ಅವರ ಆಶೀರ್ವಾದವನ್ನು ಪಡೆಯಲು ಉಪವಾಸವನ್ನು ಆಚರಿಸುತ್ತಾರೆ. ಸಾಂಪ್ರದಾಯಿಕ ಆಚರಣೆಗಳಲ್ಲಿ ಚಂದ್ರಘಂಟಾ ಮಾತೆಗೆ ಮಲ್ಲಿಗೆ ಹೂವುಗಳು, ಅಕ್ಕಿ ಮತ್ತು ಶ್ರೀಗಂಧವನ್ನು ಕಲಶದಲ್ಲಿ ಅರ್ಪಿಸುವುದು, ನಂತರ ಹಾಲು, ಮೊಸರು ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡಲಾಗುತ್ತದೆ. ನವರಾತ್ರಿಯ ಈ ದಿನ ಭಕ್ತರು ದೇವಿಗೆ ವಿಶೇಷವಾದ ಸಕ್ಕರೆಯಿಂದ ತಯಾರಿಸಿದ ಸಿಹಿಯನ್ನು ನೈವೇದ್ಯವಾಗಿಡುತ್ತಾರೆ.
ಇದನ್ನೂ ಓದಿ:ನವರಾತ್ರಿ ಎರಡನೇ ದಿನ ಪೂಜಿಸುವ ತಾಯಿ ಬ್ರಹ್ಮಚಾರಿಣಿಯ ಬಗ್ಗೆ ಇಲ್ಲಿದೆ ಮಾಹಿತಿ
ಈ ರೀತಿಯಲ್ಲಿ ದೇವಿ ಚಂದ್ರಘಂಟಾ ಬಗ್ಗೆ ಹಾಗೂ ಆಕೆಯನ್ನು ಪೂಜಿಸುವ ವಿಧಾನವನ್ನು ತಿಳಿದುಕೊಂಡು ನವರಾತ್ರಿಯ 3ನೇ ದಿನ ಚಂದ್ರಘಂಟಾ ಪೂಜಿಸಿ ನಿಮ್ಮಲ್ಲಿರುವ ನಕರಾತ್ಮಕತೆಯನ್ನು ಹೊಡೆದೊಡಿಸಿ.
.