Wednesday, 23rd October 2024

FASTag Recharge : ಫಾಸ್ಟ್ಯಾಗ್ ರೀಚಾರ್ಚ್‌ ಇನ್ನಷ್ಟು ಸುಲಭ; ನಿಯಮದಲ್ಲಿ ಆದ ಬದಲಾವಣೆಯೇನು?

FASTag Recharge

ಬೆಂಗಳೂರು: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI) ಎನ್ಇಟಿಸಿ ಫಾಸ್ಟ್ಟ್ಯಾಗ್ (FASTag Recharge) ಮತ್ತು ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಗಾಗಿ ಸ್ವಯಂಚಾಲಿತ ಟಾಪ್-ಅಪ್ ಸೌಲಭ್ಯವನ್ನು ಘೋಷಿಸಿದೆ. ಇನ್ನು ಮುಂದೆ, ಯುಪಿಐ ಆಟೋಪೇ ವ್ಯವಸ್ಥೆಯಲ್ಲಿ ಆಟೊಮ್ಯಾಟಿಕ್‌ ಟಾಪ್-ಅಪ್‌ಗಾಗಿ 24 ಗಂಟೆಗಳ ಮುಂಚಿತವಾಗಿ ಪೂರ್ವ-ಡೆಬಿಟ್ ನೋಟಿಫಿಕೇಷನ್‌ ಪಡೆಯುವ ಅಗತ್ಯವಿಲ್ಲ. ಹೀಗಾಗಿ ಇನ್ನು ಮುಂದೆ ಫಾಸ್ಟ್ಯಾಗ್ ರೀಚಾರ್ಜ್‌ ಮಾಡುವುದು ಸುಲಭ. ಫಾಸ್ಟ್ಯಾಗ್ ರೀಚಾರ್ಚ್ ಮಾಡುವ ಪ್ರಕ್ರಿಯೆ ಇದರಿಂದಾಗಿ ಸರಳವಾಗಲಿದೆ.

ಈ ಎರಡು ಕಾರ್ಡ್‌ಗಳ ಬ್ಯಾಲೆನ್ಸ್ ಗ್ರಾಹಕರು ನಿಗದಿಪಡಿಸಿದ ಕನಿಷ್ಠ ಮಿತಿಗಿಂತ ಕಡಿಮೆಯಾದಾಗ, ಸ್ವಯಂಚಾಲಿತವಾಗಿ ಆಗಲಿದೆ. ಇದಕ್ಕೆ ನೋಟಿಫೀಕೇಷನ್ ಅಥವಾ ಅನುಮತಿ ಬೇಕಾಗಿಲ್ಲ. ಹೀಗಾಗಿ ಬ್ಯಾಲೆನ್ಸ್ ಕೊರತೆಯ ಸಮಸ್ಯೆ ಎದುರಿಸಬೇಕಾಗಿಲ್ಲ.

ಈ ಹಿಂದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈ ಬ್ಯಾಲೆನ್ಸ್‌ಗಳನ್ನು ಆಟೊಮ್ಯಾಟಿಕ್‌ ಟಾಪ್-ಅಪ್ ಮಾಡಲು ಅನುಕೂಲವಾಗುವಂತೆ ಇ-ಮ್ಯಾಂಡೇಟ್ ವ್ಯವಸ್ಥೆ ಘೋಷಿಸಿತ್ತು. ಜೂನ್ 7, 2024 ರಂದು ಆರ್‌ಬಿಐ ಈ ಕುರಿತು ಪ್ರಕಟಣೆ ಹೊರಡಿಸಿತ್ತು. ಅಂತೆಯೇ ಬ್ಯಾಲೆನ್ಸ್ ಕಡಿಮೆ ಇದ್ದಾಗ ತಕ್ಷಣ ಟಾಪ್-ಅಪ್ ಆಗಿ ಬಳಕೆದಾರರಿಗೆ ಕೆಲಸ ಸುಲಭವಾಗಿಸುವ ಗುರಿಯನ್ನು ಹೊಂದಲಾಗಿತ್ತು.

ಪೂರ್ವ-ಡೆಬಿಟ್ ನೋಟಿಫಿಕೇಷನ್‌ ತೆಗೆದುಹಾಕಲಾಗಿದ್ದರೂ, ಇ-ಮ್ಯಾಂಡೇಟ್ ಚೌಕಟ್ಟಿನ ಅಡಿಯಲ್ಲಿ ಇತರ ಎಲ್ಲಾ ನಿಯಮಗಳು ಅನ್ವಯವಾಗುತ್ತವೆ. ಇದರರ್ಥ ಬಳಕೆದಾರರು ತಮ್ಮ ಎನ್ಇಟಿಸಿ ಫಾಸ್ಟ್ಯಾಗ್ ಮತ್ತು ರುಪೇ ಎನ್ಸಿಎಂಸಿಗೆ ಸುರಕ್ಷಿತ ವಹಿವಾಟುಗಳನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: Government employees Association : ಸರ್ಕಾರಿ ನೌಕರರ ಸಂಘದ ಚುನಾವಣಾ ಪ್ರಕ್ರಿಯೆ ಮುಂದುವರಿಕೆ

ಈ ಬದಲಾವಣೆಯನ್ನು ಕಾರ್ಯಗತಗೊಳಿಸಲು, ಎನ್ಇಟಿಸಿ ಫಾಸ್ಟ್ಯಾಗ್ ಮತ್ತು ರುಪೇ ಎನ್ಸಿಎಂಸಿಯನ್ನು ನೀಡುವ ಬ್ಯಾಂಕುಗಳಿಗೆ ಅದರ ನಿಗದಿತ ಉದ್ದೇಶಗಳ ಪ್ರಕಾರ ಸ್ವಯಂಚಾಲಿತ ಟಾಪ್-ಅಪ್ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶಿಸಲಾಗಿದೆ. ಇನ್ನು ಯುಪಿಐ ಲೈಟ್ ಬಳಕೆದಾರರು ಅಕ್ಟೋಬರ್ 31ರಿಂದ ತಮ್ಮ ಖಾತೆಗಳನ್ನು ಮರುಭರ್ತಿ ಮಾಡಲು ಸ್ವಯಂ ಟಾಪ್-ಅಪ್ ಅನ್ನು ಸಕ್ರಿಯಗೊಳಿಸುವ ಆಯ್ಕೆಯನ್ನು ಪಡೆಯುತ್ತಾರೆ. ಈ ಹೊಸ ವೈಶಿಷ್ಟ್ಯವು ಸಣ್ಣ ಮೌಲ್ಯದ ವಹಿವಾಟುಗಳನ್ನು ಸುಲಭಗೊಳಿಸುವ ಉದ್ದೇಶ ಹೊಂದಿದೆ.

ಯುಪಿಐ ಲೈಟ್ ಆಟೋ ಟಾಪ್-ಅಪ್ ಬಳಕೆದಾರರು ಆಯ್ಕೆ ಮಾಡಿದ ಮೊತ್ತದೊಂದಿಗೆ ಖಾತೆಯನ್ನು ಸ್ವಯಂಚಾಲಿತವಾಗಿ ಮರುಭರ್ತಿ ಮಾಡುತ್ತದೆ. 500 ರೂ.ಗಿಂತ ಕಡಿಮೆ ತ್ವರಿತ, ಪಿನ್ ರಹಿತ ಪಾವತಿಗೆ ನೆರವಾಗುತ್ತದೆ.