Friday, 22nd November 2024

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್ ಪತಿಗೆ ಜಾಮೀನು ನಿರಾಕರಣೆ

ಮುಂಬೈ: ಹಣಕಾಸಿನ ಅಕ್ರಮ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ  ಬಂಧಿತರಾಗಿರುವ ಉದ್ಯಮಿ ದೀಪಕ್ ಕೊಚ್ಚಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಶೇಷ ಕೋರ್ಟ್ ಗುರುವಾರ ತಿರಸ್ಕರಿಸಿದೆ.

ಕೊಚ್ಚಾರ್​ ಐಸಿಐಸಿಐ ಬ್ಯಾಂಕ್​ನ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರ ಪತಿ. ಚಂದಾ ಕೊಚ್ಚಾರ್  ಕೂಡ ಮನಿ ಲಾಂಡ ರಿಂಗ್ ಕೇಸ್​ನಲ್ಲಿ ಆರೋಪಿ.

ಐಸಿಐಸಿಐ ಬ್ಯಾಂಕ್ ಮತ್ತು ವಿಡಿಯೋಕಾನ್ ನಡುವಿನ ಹಣಕಾಸಿನ ವಹಿವಾಟಿನಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಪಿಎಂಎಲ್​ಎ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ದೀಪಕ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ನಿಗದಿತ ಅವಧಿಯೊಳಗೆ ತನಿಖಾ ಸಂಸ್ಥೆ ಆರೋಪ ಪಟ್ಟಿ ಸಲ್ಲಿಸುವಲ್ಲಿ ವಿಫಲವಾಗಿದ್ದರಿಂದ ಕಕ್ಷಿದಾರನಿಗೆ ಜಾಮೀನು ನೀಡಬೇಕು ಎಂದು ದೀಪಕ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ಪಿಎಂಎಲ್​ಎ, ಮುಂದಿನ ವಿಚಾರಣೆಯನ್ನು ನ.23ಕ್ಕೆ ನಿಗದಿ ಮಾಡಿದೆ. ತನಿಖಾ ಸಂಸ್ಥೆ ಆರೋಪ ಪಟ್ಟಿಯನ್ನು ನವೆಂಬರ್ 3ರಂದೇ ಸಲ್ಲಿಸಿದ್ದು, ಪರಿಶೀಲನೆಯ ಹಂತದಲ್ಲಿ ಬಾಕಿ ಇದೆ ಎಂಬ ಅಂಶದತ್ತ ಜಾರಿ ನಿರ್ದೇಶನಾಲಯ ಪರ ವಕೀಲ ಹಿತೇನ್ ವೆನೆಗಾಂವ್ಕರ್ ತಿಳಿಸಿದ್ದಾರೆ.