Saturday, 23rd November 2024

Post Office Competition: ಅಂಚೆ ಇಲಾಖೆಗೆ ಪತ್ರ ಬರೆಯಿರಿ ಸಾವಿರಾರು ರೂಪಾಯಿ ಬಹುಮಾನ ಗೆಲ್ಲಿರಿ

Post Office Competition

ಬೆಂಗಳೂರು : ಮೊದಲು ಜನರು ಪತ್ರಗಳನ್ನು ಬರೆಯುವ ಮೂಲಕ ತಮ್ಮ ಪ್ರೀತಿಪಾತ್ರರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಆದರೆ ಮೊಬೈಲ್ ಬಂದ ಬಳಿಕ ಜನರು ಪತ್ರ ಬರೆಯುವ ಅಭ್ಯಾಸವನ್ನು ಬಿಟ್ಟುಬಿಟ್ಟಿದ್ದಾರೆ. ಆದರೆ ಇಂದಿಗೂ ಕೆಲವರಿಗೆ ಪತ್ರಗಳನ್ನು ಬರೆಯುವುದೆಂದರೆ ತುಂಬಾ ಇಷ್ಟ. ಹಾಗಾಗಿ ಅಂತವರಿಗೆ  ಇದೀಗ ಅಂಚೆ ಇಲಾಖೆ ಭರ್ಜರಿ ಆಫರ್‌ವೊಂದು ಘೋಷಿಸಿದೆ. ಭಾರತೀಯ ಅಂಚೆ (Post Office Competition) ಇಲಾಖೆಯು ಪತ್ರ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಅತ್ಯುತ್ತಮವಾಗಿ ಪತ್ರ ಬರೆಯುವವರಿಗೆ ನಗದು ಬಹುಮಾನವನ್ನು ನೀಡಲಿದೆ. ಅಷ್ಟೇ ಅಲ್ಲದೇ ರಾಜ್ಯ ಮಟ್ಟದಲ್ಲಿ ಗೆದ್ದವರು ರಾಷ್ಟ್ರಮಟ್ಟದಲ್ಲೂ ಭಾಗಿಯಾಗಲು ಅವಕಾಶವಿದೆ. ಹಾಗಾಗಿ ಈ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಿ.

ಭಾರತೀಯ ಅಂಚೆ ಇಲಾಖೆ  ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪತ್ರ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಿದೆ. ವಿವಿಧ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಯಲಿದ್ದು, ಇಲ್ಲಿ ಗೆದ್ದವರು ರಾಷ್ಟ್ರ ಮಟ್ಟದಲ್ಲೂ ಭಾಗಿಯಾಗಿ ಅಲ್ಲಿಯೂ ಬಹುಮಾನ ಪಡೆಯಬಹುದು.

ಈ ಸ್ಪರ್ಧೆಯಲ್ಲಿ 18 ವರ್ಷದ ಒಳಗಿನವರು ಮತ್ತು  ಮೇಲ್ಪಟ್ಟವರು ಎಂದು ಎರಡು ವಿಭಾಗದಲ್ಲಿ ನಡೆಸಲಾಗುವುದು. ಪ್ರತಿ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ಮೊದಲ ಬಹುಮಾನ ರೂ.25 ಸಾವಿರ, ಎರಡನೇ ಬಹುಮಾನ ರೂ.10 ಸಾವಿರ, ಮೂರನೇ ಬಹುಮಾನ ರೂ.5 ಸಾವಿರ ಆಗಿರುತ್ತದೆ. ಹಾಗೆಯೇ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಮೊದಲ ವಿಜೇತರಿಗೆ ರೂ.50 ಸಾವಿರ, ಎರಡನೇ ವಿಜೇತರಿಗೆ ರೂ.25 ಸಾವಿರ ಮತ್ತು ತೃತೀಯ ಬಹುಮಾನ ರೂ.10 ಸಾವಿರ ನಗದು ನೀಡಲಾಗುವುದು.

ಪ್ರತಿಯೊಬ್ಬ ಸ್ಪರ್ಧಿಯು  ‘ದಿ ಜಾಯ್ ಆಫ್ ರೈಟಿಂಗ್: ಇಂರ್ಪಾಟೆಂಟ್ಸ್ ಆಪ್ ಲೆಟರ್ಸ್ ಇನ್ ಎ ಡಿಜಿಟಲ್ ಏಜ್’ ಎಂಬ ವಿಷಯದ ಮೇಲೆ ಪತ್ರ ಬರೆಯಬೇಕಾಗುತ್ತದೆ. ಹಾಗೇ ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಪತ್ರ ಬರೆಯಲು ಅಂಚೆ ಕಚೇರಿಯಲ್ಲಿ ದೊರೆಯುವ ಇನ್ ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್‍ವಲಪ್‍ಗಳನ್ನು ಉಪಯೋಗಿಕೊಳ್ಳಬೇಕು ಎಂಬುದು ಸ್ಪರ್ಧಾಳುಗಳಿಗೆ  ಭಾರತೀಯ ಅಂಚೆ ಇಲಾಖೆಯು ನೀಡಿರುವ ಸೂಚನೆಯಾಗಿದೆ. ಅಲ್ಲದೇ ಇನ್‍ಲ್ಯಾಂಡ್ ಲೆಟರ್ ಕಾರ್ಡ್‍ನಲ್ಲಿ ಬರೆಯುವವರು 500 ಪದಗಳಿಗೆ ಮೀರದಂತೆ ಮತ್ತು ಎನ್‍ವಲಪ್‍ನಲ್ಲಿ ಬರೆಯುವವರು1000 ಪದಗಳಿಗೆ ಮೀರದಂತೆ ಎ4 ಶೀಟ್‍ನಲ್ಲಿ ಬರೆದು ಎನ್‍ವಲಪ್ ಒಳಗೆ ಹಾಕಿ ಕಳುಹಿಸಬೇಕು. ಹಾಗೇ ಪತ್ರಗಳನ್ನು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ‘ಇಂಡಿಯಸ್ ಬೆಸ್ಟ್ ಡ್ಯಾನ್ಸರ್’ ಕಾರ್ಯಕ್ರಮದಲ್ಲಿ ಕರೀನಾ ಕಪೂರ್‌ ಹಾಡು ನೋಡಿ ಸಿಟ್ಟಿಗೆದ್ದು ಹೊರನಡೆದ ಕರಿಷ್ಮಾ ಕಪೂರ್!

ಸ್ಪರ್ಧಾಳುಗಳು ಬರೆದ ಪತ್ರದ ಇನ್ ಲ್ಯಾಂಡ್ ಲೆಟರ್ ಕಾರ್ಡ್ ಅಥವಾ ಎನ್‍ವಲಪ್ ಮೇಲೆ ಸೂಪರ್‍ಡೆಂಟ್ ಆಪ್ ಪೋಸ್ಟ್ ಆಫಿಸಸ್ ಎಂದು ಬರೆದು ಆಯಾ ಜಿಲ್ಲೆಯ ಅಂಚೆ ಕಚೇರಿಯ ಮುಖ್ಯ ಅಧೀಕ್ಷಕರ ಹೆಸರು ಬರೆದು, ‘ಪತ್ರ ಬರೆಯುವ ಸ್ಪರ್ಧೆ’ ಎಂದು ವಿಳಾಸ ಬರೆದು ಅದರ ಜೊತೆಗೆ ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ನಂತರ ಎನ್‍ವಲಪ್ ಅನ್ನು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ತಲುಪಿಸಬೇಕು. ನಿಮ್ಮ ಪತ್ರವನ್ನು ಅಂಚೆ ಕಚೇರಿಗೆ ತಲುಪಿಸಲು ಕೊನೆಯ ದಿನಾಂಕ  ಡಿಸೆಂಬರ್, 14 ಆಗಿದೆ. ಹೆಚ್ಚಿನ ಮಾಹಿತಿಗಾಗಿ www.karnatakapost.gov.in ನ್ನು ಸಂಪರ್ಕಿಸಿ ಅಥವಾ ಜಿಲ್ಲಾ ಅಂಚೆ ಅಧೀಕ್ಷಕರ ಕಚೇರಿಗೆ ತೆರಳಿ ಮಾಹಿತಿ ಪಡೆಯಬಹುದು.