Sunday, 24th November 2024

Murder Case: ಅಪ್ಪನನ್ನು ಕೊಂದವನನ್ನು 22 ವರ್ಷದ ಬಳಿಕ ಅದೇ ರೀತಿ ಹತ್ಯೆ ಮಾಡಿದ ಮಗ

Murder Case

ಗುಜರಾತ್‍ : ಗುಜರಾತ್‍ನ ಅಹ್ಮದಾಬಾದ್‍ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 30 ವರ್ಷದ ಯುವಕನೊಬ್ಬ ತನ್ನ ತಂದೆಯನ್ನು ಟ್ರಕ್‍ ಗುದ್ದಿಸಿ ಕೊಂದ ಆರೋಪಿಯ ಮೇಲೆ ಸೇಡು ತೀರಿಸಿಕೊಳ್ಳಲು ಆತನ ಮೇಲೆ ಟ್ರಕ್ ಹಾಯಿಸಿ ಕೊಲೆ ಮಾಡಿದ್ದಾನೆ. ಮಾಹಿತಿಯ ಪ್ರಕಾರ, ಆರೋಪಿ ಗೋಪಾಲ್‌ 8 ವರ್ಷದವನಿದ್ದಾಗ, ಅಂದರೆ 22 ವರ್ಷದ ಹಿಂದೆ ಆತನ ತಂದೆ ಮೇಲೆ ಟ್ರಕ್ ಹಾಯಿಸಿ  ಕೊಲೆ ಮಾಡಲಾಗಿತ್ತು. ಹಾಗಾಗಿ ತನ್ನ ತಂದೆಯನ್ನು ಕೊಂದ  (Murder Case)ಕೊಲೆಗಾರನನ್ನು 22 ವರ್ಷದ ನಂತರ ಅದೇರೀತಿಯಲ್ಲಿ ಸಾಯಿಸಿ ಸೇಡು ತೀರಿಸಿಕೊಂಡಿದ್ದಾನೆ.

ಅಹಮದಾಬಾದ್‍ನ ಥಾಲ್ಟೆಜ್‍ನಲ್ಲಿರುವ ಕಾಲೋನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನಖತ್ ಸಿಂಗ್ ಭಾಟಿ (50) ಎಂಬಾತ ಮಂಗಳವಾರ ಸೈಕಲ್‍ನಲ್ಲಿ ಬರುತ್ತಿದ್ದಾಗ ಹಿಂದಿನಿಂದ ಬಂದ ಟ್ರಕ್ ಹರಿದಿದೆ. ನಖತ್ ಸಿಂಗ್ ಅಲ್ಲೇ ಸಾವನಪ್ಪಿದ್ದಾನೆ. ಇದು ಅಪಘಾತ ಎಂದು ಪೊಲೀಸರು ನಂಬಿದ್ದರು. ಆದರೆ  ಆರೋಪಿ ಘಟನಾ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಅನುಮಾನಗೊಂಡ ಪೊಲೀಸರು  ಅವನನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.

ತನ್ನ ತಂದೆಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಪ್ಲ್ಯಾನ್‍ ಮಾಡಿ ಆರೋಪಿ ಈ ಅಪಘಾತ ಸೃಷ್ಟಿ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ವಿವರಗಳನ್ನು ನೀಡಿದ ಪೊಲೀಸರು, 2002 ರಲ್ಲಿ ಆರೋಪಿ ಗೋಪಾಲ್ ಅವರ ತಂದೆ ಹರಿ ಸಿಂಗ್ ಭಾಟಿಯನ್ನು ಈಗ ಮೃತಪಟ್ಟಿರುವ ನಖರ್ ಕೊಲೆ ಮಾಡಿದ್ದ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಟ್ರಕ್ ಅಪಘಾತ ಮಾಡಿಸಿ ಕೊಂದಿದ್ದರು. ಆತನ ನಾಲ್ವರು ಸಹೋದರರನ್ನು ಹೊಣೆಗಾರರನ್ನಾಗಿ ಮಾಡಲಾಯಿತು ಮತ್ತು ನಂತರ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಕೂಡ ವಿಧಿಸಲಾಗಿತ್ತು. ಅಂದಿನಿಂದ ಹರಿಸಿಂಗ್ ಮಗನಾದ ಗೋಪಾಲ್ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಮೊಬೈಲ್ ಕಸಿದುಕೊಂಡ ತಾಯಿಯ ತಲೆಗೆ ಬ್ಯಾಟ್‌ನಿಂದ ಬಾರಿಸಿದ ಬಾಲಕ!

ಗೋಪಾಲ್ ಕಳೆದ ವಾರ ಪಿಕ್ ಅಪ್ ಟ್ರಕ್ ಅನ್ನು 8 ಲಕ್ಷ ರೂ.ಗೆ ಖರೀದಿಸಿದ್ದ. ಇದಕ್ಕಾಗಿ ಅವನು 1.25 ಲಕ್ಷ ರೂ.ಗಳ ಡೌನ್ ಪೇಮೆಂಟ್ ಸಹ ಮಾಡಿದ್ದ. ಗೋಪಾಲ್ ಮೊಬೈಲ್ ರೆಕಾರ್ಡಿಂಗ್‍ಗಳಲ್ಲಿ ಕಳೆದ ವಾರದಲ್ಲಿ ಅವನು ಹಲವಾರು ಬಾರಿ ನಖತ್  ಮನೆಗೆ ಭೇಟಿ ನೀಡಿದ್ದಾನೆ ಎಂದು ತೋರಿಸಿದೆ. ನಖತ್ ಮತ್ತು ಗೋಪಾಲ್ ಅವರ ಕುಟುಂಬಗಳು ಹಿಂದಿನಿಂದಲೂ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.