Friday, 22nd November 2024

Viral News: ಈ ನಗರದಲ್ಲಿ ಪುರುಷರು ಮಹಿಳೆಯರಂತೆ ಸೀರೆ ಉಡುತ್ತಾರೆ! ಇದೆಂಥಾ ಶಾಪ ಗೊತ್ತಾ?

Viral News

ಅಹ್ಮದಾಬಾದ್: ನವರಾತ್ರಿ ಉತ್ಸವ ಅಕ್ಟೋಬರ್ 3ರಿಂದ ಆರಂಭವಾಗಿದೆ. ಈ ನಡುವೆ ಅಹ್ಮದಾಬಾದ್‌ನ ನಗರವೊಂದರಲ್ಲಿನ ವಿಶೇಷ ಸಂಪ್ರದಾಯವು ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿ 200 ವರ್ಷಗಳ ಹಳೆಯ ಸಂಪ್ರದಾಯದಂತೆ ನವರಾತ್ರಿಯ ಎಂಟನೇ ರಾತ್ರಿ ಬರೋಟ್ ಸಮುದಾಯದ ಪುರುಷರು ಸೀರೆ ಉಟ್ಟು ಜಾನಪದ ನೃತ್ಯವಾದ ಗರ್ಬಾವನ್ನು ಪ್ರದರ್ಶಿಸುತ್ತಾರೆ. ಇದು ಅವರ ಸಂಪ್ರದಾಯ ಎನ್ನುವುದಕ್ಕಿಂತ ಶಾಪಕ್ಕೆ ಪ್ರಾಯಶ್ಚಿತ ಎಂದು ಹೇಳಲಾಗುತ್ತಿದೆ. ಅನೇಕ ತಲೆಮಾರಿನವರು ಮಾಡಿಕೊಂಡ ಬಂದ  ಈ  ವಿಶಿಷ್ಟ ಪದ್ಧತಿಯ ಹಿಂದೆ ಒಂದು ದಂತ ಕಥೆ ಇದೆಯಂತೆ. ಈ ಸುದ್ದಿ ಎಲ್ಲೆಡೆ ವೈರಲ್‌ (Viral News) ಆಗಿದೆ.

Viral News

ಸ್ಥಳೀಯ ದಂತಕಥೆಯ ಪ್ರಕಾರ, ಸಾದುಬೆನ್ ಎಂಬ ಮಹಿಳೆ ಮೊಘಲರಿಂದ ತನ್ನನ್ನು ರಕ್ಷಿಸಿಕೊಳ್ಳಲು ಬರೋಟ್ ಪುರುಷರ ಸಹಾಯವನ್ನು ಕೋರಿದ್ದಾದ್ದಳು. ಆದರೆ ಆಗ ಆ ಪುರುಷರು ಅವಳನ್ನು ರಕ್ಷಿಸಲು ವಿಫಲರಾದರಂತೆ, ಇನ್ನು ಆಕೆ ಈ ಸಂದರ್ಭದಲ್ಲಿ ತನ್ನ ಮಗುವನ್ನು ಕೂಡ ಕಳೆದುಕೊಂಡಳಂತೆ. ಈ ಎಲ್ಲಾ ಘಟನೆಯಿಂದ ಕೋಪಗೊಂಡ ಆಕೆ ಬರೋಟ್‌ ಪುರುಷರು ಹೇಡಿಗಳು ಎಂದು ಹೇಳಿ ಅವರನ್ನು ಶಪಿಸಿದ್ದಾಳೆ. ಹಾಗಾಗಿ ಈ ವಂಶದ ಪುರುಷರು ಆಕೆಯ ಶಾಪಕ್ಕೆ ಪ್ರಾಯಶ್ಚಿತವಾಗಿ ಹೇಡಿಗಳಂತೆ ಸೀರೆ ಧರಿಸುತ್ತಾರೆ.

Viral News

ಪ್ರತಿ ವರ್ಷ ನವರಾತ್ರಿಯ ಅಷ್ಟಮಿಯ ರಾತ್ರಿ, ಈ ಆಚರಣೆಯನ್ನು ಮಾಡಲಾಗುತ್ತದೆ. ಈ ದಿನ  ಪುರುಷರು ಸೀರೆಗಳನ್ನು ಧರಿಸಿ ತಿರುಗುವುದನ್ನು ಜನಸಮೂಹವೇ ಸೇರುತ್ತದೆಯಂತೆ. ಸಾಧು ಮಾತೆಯನ್ನು ಗೌರವಿಸಲು ಮತ್ತು ಶಾಪ ನಿವಾರಣೆಗೆ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದಿನದ ವಿಶೇಷ ರಾತ್ರಿಯಲ್ಲಿ, ಪುರುಷರು ಮಹಿಳೆಯರಂತೆ ಸೀರೆ ಉಟ್ಟು ಪ್ರಾಯಶ್ಚಿತ್ತದ ಕ್ರಿಯೆಯಾಗಿ ಗರ್ಬಾ ನೃತ್ಯ ಮಾಡುತ್ತಾರಂತೆ.

ಇದನ್ನೂ ಓದಿ: ಶಾಪಿಂಗ್ ಮಾಡುವಾಗ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ವ್ಯಕ್ತಿ ಸಾವು!

ಸಾದು ಮಾತಾಗೆ ಕೃತಜ್ಞತೆ ಸಲ್ಲಿಸಲು ಕಳೆದ ಐದು ವರ್ಷಗಳಿಂದ ಸೀರೆ ಉಟ್ಟಿದ್ದೇನೆ ಎಂದು ಸ್ಪರ್ಧಿಯೊಬ್ಬರು ಹೇಳಿಕೊಂಡಿದ್ದಾರೆ. ಈ ಆಚರಣೆಯು ಕೇವಲ ಶಾಪವನ್ನು ತೆಗೆದುಹಾಕಲು ಮಾತ್ರವಲ್ಲ, ಶತಮಾನಗಳಿಂದ ಕುಟಂಬಗಳನ್ನು ರಕ್ಷಿಸಿದ ದೇವಿಯನ್ನು ಗೌರವಿಸುವ ಸಲುವಾಗಿ ಮಾಡಲಾಗುತ್ತಿದೆ ಎನ್ನಲಾಗಿದೆ.