ಮೈಸೂರು: ಮೈಸೂರು ಅರಮನೆಯಲ್ಲಿ (Mysore palace) ನಡೆದ ಖಾಸಗಿ ದರ್ಬಾರ್‌ನಲ್ಲಿ ಯುವರಾಣಿ ತ್ರಿಶಿಕಾ ಕುಮಾರಿ (Trishikha Kumari Devi) ಅವರ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social media) ಚರ್ಚೆಗೆ ಕಾರಣವಾಗಿದೆ. ಅವರು ಮತ್ತೊಮ್ಮೆ ಗರ್ಭಿಣಿ (pregnant) ಆಗಿದ್ದಾರಾ ಎಂದು ಜನ (Mysore news) ಹುಬ್ಬೇರಿಸುತ್ತಿದ್ದಾರೆ.
ಅದಕ್ಕೆ ಕಾರಣ ಇಲ್ಲದಿಲ್ಲ. ಮೈಸೂರು ಅರಮನೆಯಲ್ಲಿ ನವರಾತ್ರಿ ಹಬ್ಬದ ಆರಂಭದ ದಿನ ವೈಭವದ ಪೂಜೆ ಹಾಗೂ ಖಾಸಗಿ ದರ್ಬಾರ್‌ನೊಂದಿಗೆ ಶುರುವಾಯಿತು. ಮೈಸೂರು ಸಂಸದ ಹಾಗೂ ಮಹಾರಾಜ ಯದುವೀರ ಶ್ರೀಕಂಠದತ್ತ ಒಡೆಯರ್ (Yaduveer Wodeyar) ಖಾಸಗಿ ದರ್ಬಾರ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಹಾರಾಜರಿಗೆ ಗೌರವ ಸಮರ್ಪಣೆ ನಡೆಯಿತು. ಯುವರಾಣಿ ತ್ರಿಶಿಕಾ ಕುಮಾರಿ ಅದನ್ನು ನೆರವೇರಿಸಿದರು. ಜೊತೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ಯುವರಾಜ ಆದ್ಯವೀರ್ ಕೂಡ ಅಲ್ಲಿದ್ದರು.
ಈ ಸಂದರ್ಭದಲ್ಲಿ ತ್ರಿಶಿಕಾ ಕುಮಾರಿ ಅವರು ತಮ್ಮ ಹೊಟ್ಟೆಯನ್ನು ಸೀರೆಯ ಸೆರಗು ಬಳಸಿ ಪೂರ್ತಿಯಾಗಿ ಮುಚ್ಚಿಕೊಂಡಿದ್ದರು. ಉಬ್ಬಿದ ಹೊಟ್ಟೆಯನ್ನು ಅವರು ಮುಚ್ಚಿಕೊಂಡಂತಿತ್ತು. ಜೊತೆಗೆ ಅವರ ನಿಧಾನ ನಡಿಗೆ ಹಾಗೂ ನಡೆನುಡಿಗಳು ಅವರು ಗರ್ಭಿಣಿ ಎಂಬುದನ್ನು ಸಾರುವಂತಿದ್ದವು. ಈ ಖಾಸಗಿ ದರ್ಬಾರ್‌ನ ಕ್ಲಿಪ್ಪಿಂಗ್‌ಗಳನ್ನು ಗಮನಿಸಿದವರು ʼತ್ರಿಶಿಕಾ ಕುಮಾರಿ ಮತ್ತೊಮ್ಮೆ ಪ್ರೆಗ್ನೆಂಟಾ?ʼ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಕುರಿತು ಅರಮನೆ ಯಾವುದೇ ಅಧಿಕೃತ ಸುದ್ದಿ ನೀಡಿಲ್ಲ. ಮಹಾರಾಜರಾಗಲೀ ರಾಣಿಯಾಗಲೀ ಮಾತನಾಡಿಲ್ಲ. ಆದರೆ ಅರಮನೆಯ ಸುದ್ದಿ ಮೂಲಗಳು ಮಾತ್ರ ಈ ವಿಚಾರದಲ್ಲಿ ಗುಸುಗುಸು ಸುದ್ದಿಯನ್ನು ಹೊರಬಿಟ್ಟಿವೆ. ಏನೇ ಇದ್ದರೂ ಅದು ಸಂತಸದ ವಿಚಾರವೇ. ಇದೀಗ ಯದುವೀರ್- ತ್ರಿಶಿಕಾ ಜೋಡಿಯ ಮೊದಲ ಮಗ ಆದ್ಯವೀರನಿಗೆ 7 ವರ್ಷ ಪ್ರಾಯ. 2017ರ ಡಿಸೆಂಬರ್ 6ರಂದು ಜನಿಸಿದ ಆದ್ಯವೀರ್ ಈಗ ಅರಮನೆಯ ಎಲ್ಲರ ಮುದ್ದಿನ ಯುವರಾಜ. ಆದ್ಯವೀರನಿಗೆ ತಮ್ಮನೋ ತಂಗಿಯೋ ಆಗಮಿಸಿದರೆ ಅರಮನೆ ಹಾಗೂ ಮೈಸೂರು ಜನತೆ ಇನ್ನಷ್ಟು ಖುಷಿಯಾಗಲಿದ್ದಾರೆ.
2016ರ ಜೂನ್ 17ರಂದು ಯದುವೀರ್- ತ್ರಿಶಿಕಾ ಮದುವೆ ನಡೆದಿತ್ತು. ಇಬ್ಬರೂ ಬಾಲ್ಯದ ಗೆಳೆಯರು ಹಾಗೂ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು.
ಇದನ್ನೂ ಓದಿ: Yuzvendra Chahal: ಯದುವೀರ್ ಭೇಟಿಯಾದ ಕ್ರಿಕೆಟಿಗ ಚಹಲ್