Monday, 25th November 2024

Suryakumar Yadav: ಕೊಹ್ಲಿಯ ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಸೂರ್ಯ

ಗ್ವಾಲಿಯರ್‌: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ(India vs Bangladesh 1st T20I) ನಾಯಕ ಸೂರ್ಯಕುಮಾರ್‌ ಯಾದವ್‌ಗೆ(Suryakumar Yadav) ವಿಶ್ವ ದಾಖಲೆ ನಿರ್ಮಿಸುವ ಅವಕಾಶವೊಂದಿದೆ. ಈ ಸರಣಿಯಲ್ಲಿ ಸೂರ್ಯಕುಮಾರ್‌ ಒಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಅತಿ ಹೆಚ್ಚು ಬಾರಿ ಈ ಪ್ರಶಸ್ತಿಗೆ ಭಾಜನರಾದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಆಗ ವಿರಾಟ್‌ ಕೊಹ್ಲಿ(Virat Kohli) ದಾಖಲೆ ಪತನಗೊಳ್ಳಲಿದೆ.

ಸದ್ಯ ಸೂರ್ಯಕುಮಾರ್‌ 16 ಬಾರಿ ಟಿ20 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ವಿರಾಟ್‌ ಕೊಹ್ಲಿ ಜತೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಸೂರ್ಯ ಈ ಮೈಲುಗಲ್ಲನ್ನು ಕೇವಲ 69 ಪಂದ್ಯಗಳಿಂದ ನಿರ್ಮಿಸಿದರೆ, ಕೊಹ್ಲಿ125 ಪಂದ್ಯಗಳಿಂದ ಈ ದಾಖಲೆ ನಿರ್ಮಿಸಿದ್ದರು.

ಅತಿ ಹೆಚ್ಚು ಟಿ20 ಪಂದ್ಯಶ್ರೇಷ್ಠ ಪಡೆದವರು

ಸೂರ್ಯಕುಮಾರ್‌ ಯಾದವ್‌-15 (69 ಪಂದ್ಯಗಳು)

ವಿರಾಟ್‌ ಕೊಹ್ಲಿ-15 (125 ಪಂದ್ಯಗಳು)

ಸಿಕಂದರ್‌ ರಾಜಾ-15 (91 ಪಂದ್ಯಗಳು)

ಮೊಹಮ್ಮದ್‌ ನಬಿ-14 (129 ಪಂದ್ಯಗಳು)

ರೋಹಿತ್‌ ಶರ್ಮಾ-14 (159 ಪಂದ್ಯಗಳು)

ಜೂನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೂರ್ಯ ಅವರು ಬೌಂಡರಿ ಲೈನ್‌ನಲ್ಲಿ ಹಿಡಿದ ಅಸಾಮಾನ್ಯ ಕಾಚ್‌ ಒಂದರ ನೆರವಿನಿಂದ ಭಾರತ ತಂಡ ವಿಶ್ವಕಪ್‌ ಗೆಲ್ಲುವಂತಾಯಿತು. ಈ ಕ್ಯಾಚ್‌ ಬಳಿಕ ಸೂರ್ಯ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ.

ಇದನ್ನೂ ಓದಿ IND vs BAN T20: ಮೊದಲ ಟಿ20ಗೆ ಬಂದ್‌ ಬಿಸಿ; ಬಿಸಿಸಿಐಗೆ ಹಿಂದು ಮಹಾಸಭಾ ಎಚ್ಚರಿಕೆ

ಸೂರ್ಯಕುಮಾರ್ ಯಾದವ್, ಮಾರ್ಚ್ 14, 2021ರಲ್ಲಿ ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ ಮಾರ್ಚ್‌ 18ರಂದು ನಡೆದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸೂರ್ಯನಿಗೆ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಈ ಪಂದ್ಯದಲ್ಲಿ ತಾನೆದುರಿಸಿದ ಮೊದಲ ಪಂದ್ಯದಲ್ಲೇ ಸೂರ್ಯಕುಮಾರ್ ಯಾದವ್ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ, ಈ ಸಾಧನೆ ಮಾಡಿದ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಗೆ ಸೂರ್ಯ ಪಾತ್ರರಾಗಿದ್ದರು.

ಕಳೆದ 2 ವರ್ಷಗಳಿಂದ ಸೂರ್ಯ ಅವರು 20 ಬ್ಯಾಟಿಂಗ್​ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲೇ ಕಾಣಿಸಿಕೊಂಡಿದ್ದಾರೆ. 109 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 3213ರನ್‌ ಬಾರಿಸಿದ್ದಾರೆ. 4ಟಿ20 ಶತಕ ಬಾರಿಸಿದ್ದಾರೆ. 71 ಟಿ20 ಪಂದ್ಯಗಳನ್ನು ಆಡಿರುವ ಸೂರ್ಯ 2432 ರನ್‌, 4 ಶತಕ ಮತ್ತು 20 ಅರ್ಧಶತಕ ಬಾರಿಸಿದ್ದಾರೆ. 117 ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಏಕದಿನದಲ್ಲಿ 37 ಪಂದ್ಯಗಳಿಂದ 773 ರನ್‌ ಗಳಿಸಿದ್ದಾರೆ. ಇದುವರೆಗೆ ಏಕೈಕ ಟೆಸ್ಟ್‌ ಮಾತ್ರ ಆಡಿದ್ದಾರೆ.