Monday, 25th November 2024

Cash Deposit Limit: ಯಂತ್ರದ ಮೂಲಕ ದಿನಕ್ಕೆ ಎಷ್ಟು ಹಣ ಬ್ಯಾಂಕ್‌ಗೆ ಠೇವಣಿ ಮಾಡಬಹುದು?

Cash Deposit Limit

ಹಣವನ್ನು ಪಡೆಯಲು ಮಾತ್ರವಲ್ಲ ಖಾತೆಗೆ ಜಮಾ (Cash Deposit Limit) ಮಾಡಲು ಕೂಡ ಬ್ಯಾಂಕ್‌ಗಳು ಠೇವಣಿ ಯಂತ್ರಗಳನ್ನು (Cash Deposit Machine) ಎಟಿಎಂಗಳಲ್ಲಿ (Automated Teller Machine ) ಇಟ್ಟಿರುತ್ತವೆ. ಬ್ಯಾಂಕ್‌ಗೆ ಹೋಗಿ, ಸರತಿಯಲ್ಲಿ ನಿಂತು, ಸ್ಲಿಪ್ ಬರೆದು ಹಣವನ್ನು ಖಾತೆಗೆ ಜಮೆ ಮಾಡಬೇಕಾದರೆ ಕನಿಷ್ಠ ಒಂದು ಗಂಟೆಯಾದರೂ ಬೇಕಾಗುತ್ತದೆ. ಆದರೆ ಈ ಠೇವಣಿ ಯಂತ್ರಗಳ ಮೂಲಕ ಐದು ಹತ್ತು ನಿಮಿಷಗಳ ಒಳಗೆ ಈ ಕಾರ್ಯವನ್ನು ಮಾಡಬಹುದು.

ದೇಶಾದ್ಯಂತ ಇರುವ ಪ್ರಮುಖ ಬ್ಯಾಂಕ್‌ಗಳಿಗೆ ಈ ನಗದು ಠೇವಣಿ ಯಂತ್ರದ ಮೂಲಕ ದಿನಕ್ಕೆ ಎಷ್ಟು ಹಣ ಠೇವಣಿ ಮಾಡಬಹುದು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಅದರ ಕುರಿತು ಮಾಹಿತಿ ಇಲ್ಲಿದೆ.

ನಗದು ಠೇವಣಿ ಯಂತ್ರವು ಎಟಿಎಂನಂತೆಯೇ ಕಾರ್ಯ ನಿರ್ವಹಿಸುವ ಯಂತ್ರವಾಗಿದೆ. ಇದರಲ್ಲಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಲು ಅವಕಾಶವಿದೆ. ಇದರಲ್ಲಿ ಗ್ರಾಹಕರು ಎಟಿಎಂ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸಿಕೊಂಡು ಠೇವಣಿದಾರರು ತಮ್ಮ ಖಾತೆಗಳಿಗೆ ಹಣವನ್ನು ಠೇವಣಿ ಮಾಡಲು ಅವಕಾಶವಿದೆ.

ಶಾಖೆಗೆ ಭೇಟಿ ನೀಡದೆ ತಮ್ಮ ಖಾತೆಗೆ ತಕ್ಷಣ ಹಣ ಜಮೆ ಮಾಡಲು ಈ ಯಂತ್ರವನ್ನು ಬಳಸಬಹುದು. ವಹಿವಾಟಿನ ರಸೀದಿಯನ್ನು ಪಡೆಯಬಹುದು. ಆದರೆ ಈ ಯಂತ್ರಗಳು ವಿವಿಧ ಬ್ಯಾಂಕ್‌ಗಳಿಗೆ ನಿಗದಿತ ಠೇವಣಿ ಮಿತಿಯನ್ನು ಹೊಂದಿರುತ್ತದೆ.

ವಿವಿಧ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ನಿಗದಿಪಡಿಸಿದ ನಗದು ಠೇವಣಿ ಮಿತಿಗಳನ್ನು ಇಂತಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (SBI) ನಗದು ಠೇವಣಿ ಮಿತಿ 49,900 ರೂ. ಒಂದು ವೇಳೆ ಖಾತೆಗೆ ಪ್ಯಾನ್‌ ಲಿಂಕ್ ನೀಡಿದ್ದರೆ 2 ಲಕ್ಷ ರೂ. ವರೆಗೆ ಠೇವಣಿ ಮಾಡುವ ಅವಕಾಶವಿದೆ.

Cash Deposit Limit

ಬ್ಯಾಂಕ್ ಆಫ್ ಬರೋಡಾದಲ್ಲಿ ಪಾನ್ ನೋಂದಣಿ ಆಗಿದ್ದರೆ 2 ಲಕ್ಷ ರೂ. ವರೆಗೆ ಇಲ್ಲವಾದರೆ 49,999 ರೂ. ವರೆಗೆ ಠೇವಣಿ ಮಾಡಬಹುದು. ಕಾರ್ಡ್‌ರಹಿತ ವಹಿವಾಟುಗಳ ಮಿತಿ ದಿನಕ್ಕೆ 20,000 ರೂ. ಆಗಿರುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಸಿಎಎ (Cash Acceptor cum ATM) ಅಥವಾ ಬಿಎನ್‌ಎ (Bulk Note Acceptor) ಮೂಲಕ ಗ್ರಾಹಕರು ಠೇವಣಿ ಮಾಡಬಹುದಾದ ಪ್ರತಿ ವಹಿವಾಟಿನ ಗರಿಷ್ಠ ಮೊತ್ತ 1,00,000 ರೂ. ಅಥವಾ ಒಟ್ಟು 200 ನೋಟುಗಳು. ಗ್ರಾಹಕರ ಖಾತೆಯಲ್ಲಿ ಪಾನ್ ನೋಂದಣಿ ಆಗಿದ್ದರೆ 1,00,000 ರೂ. ವರೆಗೆ ಠೇವಣಿ ಮಾಡಬಹುದು. ಇಲ್ಲದೇ ಇದ್ದರೆ 49,900 ರೂ. ವರೆಗೆ ಮಾತ್ರ ಠೇವಣಿ ಮಾಡಬಹುದಾಗಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ, ಉಳಿತಾಯ ಖಾತೆಯಲ್ಲಿನ (savings account) ವಹಿವಾಟಿನ ಮಿತಿ 25,000 ರೂ. ಮತ್ತು ದೈನಂದಿನ ಮಿತಿ 2 ಲಕ್ಷ ರೂ. ಆಗಿದೆ. ಚಾಲ್ತಿ ಖಾತೆಯಲ್ಲಿನ ( current account) ವಹಿವಾಟಿನ ಮಿತಿ 1 ಲಕ್ಷ ರೂ. ಮತ್ತು ಪ್ರತಿ ದಿನದ ಮಿತಿ 6 ಲಕ್ಷ ರೂ. ಇವು ಕಾರ್ಡ್‌ರಹಿತ ಠೇವಣಿ ಮಿತಿಗಳಾಗಿವೆ. ಆದರೆ ಪ್ರತಿ ವಹಿವಾಟಿಗೆ ಕಾರ್ಡ್ ಆಧಾರಿತ ಠೇವಣಿ ಮಿತಿಗಳು ಉಳಿತಾಯ ಮತ್ತು ಚಾಲ್ತಿ ಖಾತೆಗಳಿಗೆ 1 ಲಕ್ಷ ರೂ. ಆಗಿದೆ. ದೈನಂದಿನ ಮಿತಿಗಳು ಉಳಿತಾಯ ಖಾತೆಗೆ 2 ಲಕ್ಷ ರೂ. ಮತ್ತು ಚಾಲ್ತಿ ಖಾತೆಗೆ 6 ಲಕ್ಷ ರೂ. ಆಗಿದೆ.

PMs Internship Scheme: ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ ಜಾರಿ; ವರ್ಷಕ್ಕೆ 60,000 ರೂ. ಪಡೆಯುವ ಅವಕಾಶ!

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಗದು ಠೇವಣಿ ಯಂತ್ರಗಳು 49,999 ರೂ. ಮೌಲ್ಯದ ಗರಿಷ್ಠ 200 ಕರೆನ್ಸಿ ನೋಟುಗಳನ್ನು ಸ್ವೀಕರಿಸುತ್ತವೆ. ಪಾನ್ ಕಾರ್ಡ್ ನೀಡಿದ್ದರೆ ಪ್ರತಿ ವಹಿವಾಟಿಗೆ 1,49,999 ರೂ. ವರೆಗೆ ಠೇವಣಿ ಮಾಡಬಹುದು.