ಬೆಂಗಳೂರು: ಕಂದಾಯ ಇಲಾಖೆಯ ಸ್ಥಳ ನಿರೀಕ್ಷಣೆಯಲ್ಲಿರುವ ಹಾಗೂ ಸ್ಥಳ ನಿರೀಕ್ಷಣೆಗೆ ಬರಲಿರುವ ತಹಸೀಲ್ದಾರ್ ಗ್ರೇಡ್1, ಗ್ರೇಡ್-2 ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ (Tehsildar Placement) ರಾಜ್ಯ ಸರ್ಕಾರ (State Government) ಆದೇಶಿಸಿದೆ.
ಯಾರಿಗೆಲ್ಲಾ ಸ್ಥಳ ನಿಯುಕ್ತಿ?
ಗ್ರೇಡ್-1 ತಹಸೀಲ್ದಾರ್ ರೂಪ ಎಂ.ವಿ. ಅವರಿಗೆ ಬೆಂಗಳೂರಿನ ಕಂದಾಯ ಇಲಾಖೆಯ ಅಡಿಟ್ ಶಾಖೆ ತಹಸೀಲ್ದಾರ್, ಗ್ರೇಡ್-1 ತಹಸೀಲ್ದಾರ್ ಮಂಜುಳಾ ಎಂ. ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ತಹಸೀಲ್ದಾರ್ ಗ್ರೇಡ್-1, ಗ್ರೇಡ್-1 ತಹಸೀಲ್ದಾರ್ ಸಿದ್ದೇಶ್ ಎಂ. ಅವರಿಗೆ ಚಿತ್ರದುರ್ಗ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕರು, ಗ್ರೇಡ್-1 ತಹಸೀಲ್ದಾರ್ ಶಂಕರಪ್ಪ ಜಿ.ಎಸ್. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ತಹಸೀಲ್ದಾರ್ ಗ್ರೇಡ್-1, ಗ್ರೇಡ್-2 ತಹಸೀಲ್ದಾರ್ ಧನಲಕ್ಷ್ಮಿ ಅವರಿಗೆ ಬೆಂಗಳೂರಿನ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಸಂಧ್ಯಾ ಸುರಕ್ಷಾ ಯೋಜನೆ ತಹಸೀಲ್ದಾರ್, ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಅವರಿಗೆ ರೈಲು ಇನ್ಫ್ರಾಸ್ಟಕ್ಚರ್ ಡೆವೆಲಪ್‌ಮೆಂಟ್ ಕಂಪನಿ ಬೆಂಗಳೂರು (ಕೆ-ರೈಡ್), ಗ್ರೇಡ್-2 ತಹಸೀಲ್ದಾರ್ ಗೌರಮ್ಮ ಎನ್. ಅವರಿಗೆ ಬೆಂಗಳೂರು ರಾಜ್ಯ ಚುನಾವಣಾ ಆಯೋಗ ಶಾಖಾಧಿಕಾರಿ, ಗ್ರೇಡ್-2 ತಹಸೀಲ್ದಾರ್ ರೇಣುಕುಮಾರ್ ವೈ.ಎನ್. ಅವರಿಗೆ ಮಂಡ್ಯ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ತಹಸೀಲ್ದಾರ್, ಗ್ರೇಡ್-2 ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಅವರಿಗೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕು ಉಪ ವಿಭಾಗಾಧಿಕಾರಿಗಳ ಕಚೇರಿ ತಹಸೀಲ್ದಾರ್ ಗ್ರೇಡ್-2, ಗ್ರೇಡ್-2 ತಹಸೀಲ್ದಾರ್ ನೀಲಾಬಾಯಿ ಲಮಾಣಿ ಅವರಿಗೆ ಬೆಂಗಳೂರು ಕಂದಾಯ ಆಯುಕ್ತಾಲಯ, ಜಾರಿದಳದ ತಹಸೀಲ್ದಾರ್, ಗ್ರೇಡ್-2 ತಹಸೀಲ್ದಾರ್ ಅಮರೇಶ್ ಬಿರಾದಾರ್ ಅವರಿಗೆ ರಾಯಚೂರು ಜಿಲ್ಲೆ ಅರಕೆರಾ ತಾಲೂಕು ತಹಸೀಲ್ದಾರ್ ಗ್ರೇಡ್-1, ಗ್ರೇಡ್-2 ತಹಸೀಲ್ದಾರ್ ವಿನೋದ ಲಕ್ಷ್ಮಣ ಹತ್ತಳ್ಳಿ ಅವರಿಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ತಹಸೀಲ್ದಾರ್ ಗ್ರೇಡ್-1, ಗ್ರೇಡ್-2 ತಹಸೀಲ್ದಾರ್ ರಾಜೇವ್ ವಿ.ಎಸ್. ಅವರಿಗೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕು ತಹಸೀಲ್ದಾರ್ ಗ್ರೇಡ್-1, ಗ್ರೇಡ್-2 ತಹಸೀಲ್ದಾರ್ ಎಂ.ಎಸ್. ರಮೇಶ್ ಅವರಿಗೆ ಬೆಂಗಳೂರಿನ ಲ್ಯಾಂಡ್ ರೆಕಾರ್ಡ್, ಮಾರ್ಡನೈಜೇಷನ್ ತಹಸೀಲ್ದಾರ್.
ಈ ಸುದ್ದಿಯನ್ನೂ ಓದಿ | Vadderse Raghurama Shetty: ‘ವಡ್ಡರ್ಸೆ ರಘುರಾಮ ಶೆಟ್ಟಿ’ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ನಾಮನಿರ್ದೇಶನಗಳಿಗೆ ಆಹ್ವಾನ
ಸ್ಥಳ ನಿಯುಕ್ತಿಗೊಳಿಸಿರುವ ಅಧಿಕಾರಿಗಳು ಸ್ಥಳ ನಿಯುಕ್ತಿಗೊಳಿಸಿರುವ ಹುದ್ದೆಗಳಲ್ಲಿ ಕಾರ್ಯಭಾರವಹಿಸಿಕೊಂಡು ಸಿ.ಟಿ.ಸಿ. ಪ್ರತಿಯನ್ನು (e-mail: soservices3rd@gmail.com) ಇ-ಮೇಲ್ ಮೂಲಕ ಕಳುಹಿಸತಕ್ಕದ್ದು ಎಂದು ಕರ್ನಾಟಕ ರಾಜ್ಯಪಾಲರ ಆದೇಶದನುಸಾರ ಮತ್ತು ಅವರ ಹೆಸರಿನಲ್ಲಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್‌ಪಾಷ ಎಚ್.ಜಿ. ಆದೇಶ ಹೊರಡಿಸಿದ್ದಾರೆ.