Sunday, 6th October 2024

IND vs BAN: ಮೊದಲ ಟಿ20ಗೆ ಭಾರತ ಆಡುವ ಬಳಗ ಹೇಗಿರಲಿದೆ?

IND vs BAN 1st T20I

ಗ್ವಾಲಿಯರ್‌: ಪ್ರವಾಸಿ ಬಾಂಗ್ಲಾದೇಶ(IND vs BAN) ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನಾಡಲು ಸೂರ್ಯಕುಮಾರ್‌ ಸಾರಥ್ಯದ ಯಂಗ್‌ ಟೀಮ್‌ ಇಂಡಿಯಾ ಸಜ್ಜಾಗಿದೆ. ನೂತನ ಶ್ರೀಮಂತ್​ ಮಾಧವ್​ರಾವ್​ ಸಿಂಧಿಯಾ ಸ್ಟೇಡಿಯಂನಲ್ಲಿ ಇಂದು ಮೊದಲ ಕಾದಾಟ(IND vs BAN 1st T20I) ನಡೆಯಲಿದೆ. ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ ಇಲೆವೆನ್‌(India Playing XI) ಹೇಗಿರಲಿದೆ ಎಂಬ ಮಾಹಿತಿ ಇಂತಿದೆ.

ಕೇರಳದ ಸ್ಟಂಪರ್‌ ಸಂಜು ಸ್ಯಾಮ್ಸನ್‌ ಮತ್ತು ಎಡಗೈ ಬ್ಯಾಟರ್‌ ಅಭಿಷೇಕ್‌ ಶರ್ಮಾ ಭಾರತದ ಇನಿಂಗ್ಸ್‌ ಆರಂಭಿಸಬಹುದು. ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌, ನಾಲ್ಕನೇ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ, 5ನೇ ಕ್ರಮಾಂಕದಲ್ಲಿ ರಿಯಾನ್‌ ಪರಾಗ್‌, 6ನೇ ಕ್ರಮಾಂಕದಲ್ಲಿ ರಿಂಕು ಸಿಂಗ್‌ ಆಡಬಹುದು. ಸ್ಪಿನ್‌ ವಿಭಾಗದಲ್ಲಿ ರವಿ ಬಿಷ್ಣೊಯ್‌ ಮತ್ತು ವಾಸಿಂಗ್ಟನ್‌ ಸುಂದರ್‌ ಕಣಕ್ಕಿಳಿಯಬಹುದು. ಪ್ರತಿ ಗಂಟೆಗೆ 150 ಕಿಲೋಮೀಟರ್​ಗಿಂತ ವೇಗದ ಎಸೆಯಬಲ್ಲ 22 ವರ್ಷದ ಮಯಾಂಕ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ನಿಶ್ಚಿತವೆನಿಸಿದೆ. ಹರ್ಷಿತ್​ ರಾಣಾ ಕೂಡ ಪದಾರ್ಪಣೆ ನಿರೀಕ್ಷೆಯಲ್ಲಿದ್ದಾರೆ. ಅನುಭವಿ ಅರ್ಷದೀಪ್‌ ಸಿಂಗ್‌ ಬೌಲಿಂಗ್‌ ವಿಭಾಗವನ್ನು ನಿಭಾಯಿಸಬೇಕಿದೆ.

ಪ್ರವಾಸಿ ತಂಡವೂ ನಾಯಕ (ಶಾಂಟೊ), ವಿಕೆಟ್​ ಕೀಪರ್​ (ಲಿಟನ್​ದಾಸ್​) ಹೊರತುಪಡಿಸಿ ಟಿ20 ಸರಣಿಯಲ್ಲಿ ಬಹುತೇಕ ಟೆಸ್ಟ್​ಗಿಂತ ಭಿನ್ನವಾದ ತಂಡವನ್ನು ಕಣಕ್ಕಿಳಿಸುತ್ತಿದೆ. ಕಳೆದ ಒಂದು ವರ್ಷದಿಂದ ಇಲ್ಲಿ ನಡೆದ ದೇಶೀಯ ಟಿ20 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್​ನ ಸರಾಸರಿ ಮೊತ್ತ 190 ರನ್​. 8 ಪಂದ್ಯಗಳಲ್ಲಿ 4ರಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ತಂಡ 200 ಪ್ಲಸ್​ ಮೊತ್ತ ಪೇರಿಸಿದೆ.

ಇದನ್ನೂ ಓದಿ INDW vs NZW: ದಂಡದ ಭೀತಿಯಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌

ಭಾರತ ಸಂಭಾವ್ಯ ಆಡುವ ಬಳಗ

ಅಭಿಷೇಕ್​ ಶರ್ಮ, ಸಂಜು ಸ್ಯಾಮ್ಸನ್​ (ವಿ.ಕೀ), ಸೂರ್ಯಕುಮಾರ್​ (ನಾಯಕ), ರಿಯಾನ್​ ಪರಾಗ್​, ಹಾರ್ದಿಕ್​ ಪಾಂಡ್ಯ, ರಿಂಕು ಸಿಂಗ್​, ವಾಷಿಂಗ್ಟನ್​ ಸುಂದರ್​, ರವಿ ಬಿಷ್ಣೋಯಿ, ಮಯಾಂಕ್​ ಯಾದವ್​, ಅರ್ಷದೀಪ್​ ಸಿಂಗ್‌ ಹರ್ಷಿತ್​ ರಾಣಾ.

ಬಾಂಗ್ಲಾದೇಶ: ಲಿಟನ್​ ದಾಸ್​ (ವಿ.ಕೀ), ಪರ್ವೇಜ್​ ಹೊಸೈನ್​, ತಂಜಿದ್​ ಹಸನ್​, ನಜ್ಮಲ್​ ಹೊಸೈನ್​ ಶಾಂಟೊ (ನಾಯಕ), ಮೆಹಿದಿ ಹಸನ್​ ಮಿರಾಜ್​, ತೌಹಿದ್​ ಹೃದಯ್​, ಮಹಮುದುಲ್ಲಾ, ರಿಷದ್​ ಹೊಸೈನ್​, ತಂಜಿಮ್​ ಹಸನ್​ ಶಕಿಬ್​, ಟಸ್ಕಿನ್​ ಅಹ್ಮದ್​, ಮುಸ್ತಾಫಿಜುರ್​.