ಚಂಡೀಗಢ: ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ(Shiromani Akalidal) ಮತ್ತು ಆಮ್ ಆದ್ಮಿ ಪಕ್ಷ(AAP)ದ ಮುಖಂಡರ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಗುಂಡಿನ ದಾಳಿ(Punjab Shootout)ಯೂ ನಡೆದಿದೆ. ಅಕಾಲಿದಳದ ಮುಖಂಡ ಸಿಡಿಸಿದ ಗುಂಡು ತಗುಲಿ(AAP Leader Shot) ಆಪ್ ಮುಖಂಡ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆಪ್ ನಾಯಕ ಮನದೀಪ್ ಸಿಂಗ್ ಬ್ರಾರ್ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಪಂಜಾಬ್‌ನ ಜಲಾಲಾಬಾದ್ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲುಧಿಯಾನದ ಜಿಲ್ಲಾ ವೈದ್ಯಕೀಯ ಕೇಂದ್ರ ಕಳುಹಿಸಲಾಗಿದೆ.
ಘಟನೆಯ ವಿವರ:
ಅಕಾಲಿ ನಾಯಕ ವರದೇವ್ ಸಿಂಗ್ ಮನ್ ಅವರು ಮನದೀಪ್ ಸಿಂಗ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಜಲಾಲಾಬಾದ್ ಎಎಪಿ ಶಾಸಕ ಜಗದೀಪ್ ಕಾಂಬೋಜ್ ಗೋಲ್ಡಿ ಆರೋಪಿಸಿದ್ದಾರೆ. ಮಾಜಿ ಸಂಸದ ಜೋರಾ ಸಿಂಗ್ ಮನ್ ಅವರ ಪುತ್ರ ವರದೇವ್ ಸಿಂಗ್ ನೋನಿ ಮನ್ ಅವರು ಶಾಲೆಗೆ ಸಂಬಂಧಿಸಿದ ಕಡತ ವಿಲೇವಾತಿಗೊಳಿಸುವ ಬಗ್ಗೆ ಕೇಳಲು ಬಿಡಿಪಿಒ ಕಚೇರಿಗೆ ಬಂದಿದ್ದರು. BDPO ಅವರ ಮನವಿಯನ್ನು ನಿರಾಕರಿಸಿದರು, ಇದರಿಂದ ಅಸಮಾಧಾನಗೊಂಡ ಅಕಾಲಿ ನಾಯಕರು ಕಚೇರಿಯಿಂದ ಹೊರನಡೆದರು. ಹೊರಗೆ, ಅವರು ಎಎಪಿ ನಾಯಕ ಮನದೀಪ್ ಸಿಂಗ್ ಬ್ರಾರ್ ಅವರೊಂದಿಗೆ ಜಗಳ ಮಾಡಿದ್ದರು. ಈ ಸಂದರ್ಭದಲ್ಲಿ ಅಕಾಲಿ ನಾಯಕ ವರದೇವ್ ಸಿಂಗ್ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಇನ್ನು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ವೈದ್ಯನೋರ್ವನನ್ನು ಅಪ್ರಾಪ್ತ ಯುವಕ ಶೂಟ್ ಮಾಡಿ ಕೊಲೆ ಮಾಡಿದ್ದ. ಜೈತ್‌ಪುರ ಪ್ರದೇಶದ ಕಾಳಿಂದಿ ಕುಂಜ್‌ನಲ್ಲಿರುವ ನಿಮಾ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವಕ ತನ್ನ ಸ್ನೇಹಿತನ ಜತೆ ಆಸ್ಪತ್ರೆಗೆ ಬಂದಿದ್ದ. ಚಿಕಿತ್ಸೆ ಪಡೆದ ನಂತರ ಏಕಾಏಕಿ ವೈದ್ಯ ಜಾವೇದ್ ಅಖ್ತಾರ್‌ನ ಕೊಠಡಿಗೆ ನುಗ್ಗಿದ ಈ ಇಬ್ಬರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವೈದ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.
ಆಸ್ಪತ್ರೆಯ ಸಿಬ್ಬಂದಿ ಪ್ರಕಾರ, ಇಬ್ಬರು ವ್ಯಕ್ತಿಗಳು ಗಾಯಗೊಂಡು ಆಸ್ಪತ್ರೆಗೆ ಬಂದಿದ್ದರು, ಅವರು ಡ್ರೆಸ್ಸಿಂಗ್ ನಂತರ ವೈದ್ಯರನ್ನು ಭೇಟಿಯಾಗಲು ಒತ್ತಾಯಿಸಿದರು ಮತ್ತು ಅವರ ಕ್ಯಾಬಿನ್‌ಗೆ ಪ್ರವೇಶಿಸುತ್ತಿದ್ದಂತೆ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಸದ್ದು ಕೇಳಿದ ಕೂಡಲೇ ವೈದ್ಯರ ಕ್ಯಾಬಿನ್‌ಗೆ ಧಾವಿಸಿ ನೋಡಿದಾಗ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿತು ಎಂದು ಸಿಬ್ಬಂದಿ ತಿಳಿಸಿದ್ದಾರೆ.
ವೈದ್ಯನ ಹತ್ಯೆ ಬಳಿಕ ಆರೋಪಿ ಯುವಕ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾನೆ. ಅದರಲ್ಲಿ ಕೈಯಲ್ಲಿ ಬಂದೂಕು ಹಿಡಿದು ಪೋಸ್ ಕೊಟ್ಟಿರುವ ಈತ ಕರ್ ದಿಯಾ 2024ಮೇ ಮರ್ಡನ್( 2024 ಮರ್ಡರ್ ಮಾಡಿದೆ) ಎಂದು ಬರೆದುಕೊಂಡಿದ್ದಾನೆ. ಈ ಪೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಸುದ್ದಿಯನ್ನೂ ಓದಿ: Delhi Shootout: ವೈದ್ಯನ ಶೂಟೌಟ್ ಬಳಿಕ ಪಿಸ್ತೂಲ್ ಜತೆಗೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ ಕೊಟ್ಟ ಹಂತಕ; ಹತ್ಯೆಗೆ ಕಾರಣ ಏನ್ ಗೊತ್ತಾ?