Thursday, 19th September 2024

ಆಡುವ ಮಕ್ಕಳನ್ನು ಕಾಡುವ ಮಧುಮೇಹ

ತನ್ನಿಮಿತ್ತ

ಡಾ.ಕರವೀರಪ್ರಭು ಕ್ಯಾಲಕೊಂಡ

ಮಧುಮೇಹವೊಂದು ಪ್ರಾಚೀನ ಕಾಯಿಲೆ. ಇದನ್ನು ಗ್ರೀಸ್, ಈಜಿಪ್ತ್ ಮತ್ತು ಚೀನಾ ದೇಶಗಳಲ್ಲಿ ಬಹಳ ಹಿಂದೆಯೇ ಗುರುತಿಸ ಲಾಗಿತ್ತು.

‘ಡಯಾಬಿಟಿಸ್ ’ಎಂದರೆ ಸಿಹಿಮೂತ್ರ. ಮೂತ್ರ ಸಿಹಿಯಾಗಿರುವುದರಿಂದ ಈ ಶಬ್ದ ರೋಗದ ಸಂಪೂರ್ಣ ಚಿತ್ರಣ ನೀಡುತ್ತದೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ತಮ್ಮ ಜನ್ಮದಿನವನ್ನು ಮಕ್ಕಳ ದಿನ ಎಂದು ಆಚರಿಸಲು ಬಯಸಿದ್ದರು. ಅದೇ ದಿನವನ್ನೀಗ ವಿಶ್ವ ಮಧುಮೇಹ ದಿನವೆಂದು ಆಚರಿಸಲಾಗುತ್ತಿರವುದೊಂದು ವಿಪರ್ಯಾಸ.

೧೪ನೇ ನವೆಂಬರ್‌ರಂದು ಮಧುಮೇಹ ನಿಯಂತ್ರಣಕ್ಕೆ ಇನ್ಸುಲಿನ್ ಕಂಡು ಹಿಡಿದ ಸರ್ ಫ್ರೆಡೆರಿಕ್ ಬೆಂಟಿಂಗ್ ಜನ್ಮದಿನ. ಈ ನೆನಪಿಗಾಗಿ ೧೪ನೇ ನವೆಂಬರನ್ನು ವಿಶ್ವ ಮಧುಮೇಹ ದಿನವೆಂದು ೧೯೯೧ರಲ್ಲಿ ಜಾಗತಿಕ ಆರೋಗ್ಯ ಸಂಸ್ಥೆಯ ಬೆಂಬಲ ದೊಂದಿಗೆ ಅಂತಾರಾಷ್ಟ್ರೀಯ ಮಧುಮೇಹ ಫೆಡರೇಶನ್ ಆಚರಿಸಲು ಪ್ರಾರಂಭಿಸಿತು. ನಂತರ ೨೦೦೬ರ ನವೆಂಬರ್ ೧೪ರಂದು ವಿಶ್ವಸಂಸ್ಥೆ- ವಿಶ್ವ ಮಧುಮೇಹ ದಿನವನ್ನು ಅಧಿಕೃತವಾಗಿ ಆಚರಿಸಲು ಘೋಷಿಸಿತು.

ಭಾರತವೂ ಸೇರಿದಂತೆ ವಿಶ್ವದೆಡೆ ಸಕ್ಕರೆ ಕಾಯಿಲೆ ಕ್ಷಿಪ್ರಗತಿಯಲ್ಲಿ ಸೆಳೆಯುತ್ತಿದೆ. ೨೦೧೯ರಲ್ಲಿ ಜಾಗತಿಕ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಅಂಕಿಅಂಶಗಳನ್ನು ಗಮನಿಸೋಣ. ಸದ್ಯ ೪೬೩ ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದು, ಈ ಸಂಖ್ಯೆ ೨೦೪೫ಕ್ಕೆ ೭೦೦ ಕೋಟಿ ಆಗಲಿದೆ. ಒಟ್ಟು ಮಧುಮೇಹಿಗಳ ಶೇ.೭೯ರಷ್ಟು ಜನರು ಬಡ ರಾಷ್ಟ್ರಗಳಲ್ಲಿ ವಾಸಿಸುವರು.

ಪ್ರತಿ ವರ್ಷ ೪.೨ ಕೋಟಿ ಜನರು ಸಾವನ್ನಪ್ಪುತ್ತಾರೆ. ೧.೧ ಕೋಟಿಗಿಂತ ಹೆಚ್ಚು ಮಕ್ಕಳು ಮಧುಮೇಹದ ಜೊತೆಗೆ ಬಾಳುತ್ತಿzರೆ.
ಪ್ರತಿ ವರ್ಷ ಜೀವಂತ ಜನಿಸುವ ೨೦ ಕೋಟಿಗೂ ಹೆಚ್ಚು ಮಕ್ಕಳ ತಾಯಂದಿರು ಗರ್ಭಿಣಿಯರಿದ್ದಾಗ ಮಧುಮೇಹದಿಂದ ಬಳಲಿರುತ್ತಾರೆ. ೩೭೪ ಕೋಟಿ ಜನರು ಮಧುಮೇಹ ಹೊಂದುವ ಅಪಾಯದಲ್ಲಿ ಇರುವರು. ಜಗತ್ತಿನಲ್ಲಿ ಅತಿ ಹೆಚ್ಚು ಮಧುಮೇಹಿ ಗಳನ್ನು ಹೊಂದಿದ ರಾಷ್ಟ್ರ ಚೀನಾ. ಸುಮಾರು ೧೧೬ ಕೋಟಿ ಜನರು ಇದರ ಬಾಹುಬಂಧನದಲ್ಲಿ ತತ್ತರಿಸುತ್ತಿರುವರು.

೨೦೪೫ರ ವೇಳೆಗೆ ಭಾರತವು ೧೩೪ ಕೋಟಿ ಮಧುಮೇಹಿಗಳನ್ನು ಹೊಂದಿರುವುದಾಗಿ ಜಾಗತಿಕ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ. ಭಾರತದಲ್ಲಿ ಪ್ರತೀ ಏಳರಬ್ಬರು ಮಧುಮೇಹದಿಂದ ಬಳಲುತ್ತಿzರೆ ಎಂದರೆ ರೋಗದ ವಿಸ್ತಾರ – ವ್ಯಾಪ್ತಿಯ ಅರಿವಾಗು ತ್ತದೆ. ಇತ್ತೀಚಿನ ದಿನಗಳಲ್ಲಿ ಆಘಾತಕಾರಿ ಬೆಳವಣಿಗೆಯೆಂದರೆ ಮಕ್ಕಳಲ್ಲಿ ಮಧುಮೇಹ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದು!

ಜಗತ್ತಿನಲ್ಲಿ ಶೇ.೪.೫ರಷ್ಟು ಪ್ರಮಾಣದಲ್ಲಿ ಮಕ್ಕಳಲ್ಲಿ ಮಧುಮೇಹ ವೃದ್ಧಿಯಾಗುತ್ತಿರುವುದು ಕಳವಳಕ್ಕೆಡೆ ಮಾಡಿದೆ. ಚಾಕೋಲೆಟ್, ಐಸ್ಕ್ರೀಮ, ಪೇಡಾ, ಜಾಮೂನ್, ಹಲ್ವಾದಂಥ ಸಿಹಿ ತಿಂಡಿಗಳನ್ನು ಇಷ್ಟಪಡುವ ಮಕ್ಕಳನ್ನು ಮಧುಮೇಹ ಕಾಡುತ್ತಿದೆ. ತಂದೆ – ತಾಯಿಗಳಿಬ್ಬರೂ ಮಧುಮೇಹಿಗಳಾಗಿದ್ದರೆ, ಮಕ್ಕಳಿಗೆ ಮಧುಮೇಹ ಬರುವ ಸಂಭವ ಶೇ.೫೦ರಷ್ಟಿರುತ್ತದೆ. ಇಬ್ಬರಲ್ಲಿ ಒಬ್ಬರಿಗಿದ್ದರೆ ಶೇ.೩೦ರಷ್ಟು ಮಕ್ಕಳಲ್ಲಿ ಕಾಯಿಲೆ ತಗಲುವ ಸಂಭವವಿರುತ್ತದೆ. ಮಕ್ಕಳಲ್ಲಿ ಉಂಟಾಗುವ ಮಾನಸಿಕ ಒತ್ತಡವೇ ಇದಕ್ಕೆ ಮೂಲ ಕಾರಣವೆನ್ನಬಹುದು. ಓದುವ ಒತ್ತಡ, ಶಿಕ್ಷಕರ ಭಯ, ಪರೀಕ್ಷಾ ಭೀತಿ, ಸ್ಪರ್ಧಾ ಪ್ರಪಂಚದ ಆತಂಕ….ಮುಂತಾದ ಕಾರಣಗಳಿಂದಾಗಿ ಮಕ್ಕಳು ಮಾನಸಿಕ ಒತ್ತಡ ಅನುಭವಿಸುತ್ತಿದ್ದು ಮಕ್ಕಳಲ್ಲಿ ಮಧುಮೇಹದ ಸಂಭವ
ಹೆಚ್ಚಾಗುತ್ತಿದೆ.

ಕುರುಕಲು ತಿಂಡಿ, ಜಂಕ್ ಫುಡ್, ಫಾಸ್ಟ್ ಫುಡ್, ಜೀವನಶೈಲಿ ಬದಲಾವಣೆ, ಟಿ.ವಿ. ವೀಕ್ಷಣೆ, ದೈಹಿಕ ಚಟುವಟಿಕೆ ಇಲ್ಲದಿರುವಿಕೆ, ಆಹಾರ ಪದ್ಧತಿ ಪರಿವರ್ತನೆ, ಹೆಚ್ಚಿದ ದೇಹಭಾರ, ಬೊಜ್ಜು ಇದಕ್ಕೆ ಕಾರಣವಾಗಬಹುದು. ನವಜಾತ ಶಿಶುವಿನ ತೂಕ ಕೆ.ಜಿ.ಗಿಂತ ಹೆಚ್ಚಾಗಿದ್ದರೆ ಮಧುಮೇಹ ಕಾಣಿಸಿಕೊಳ್ಳುವ ಸಂಭವವಿರುತ್ತದೆ.

ಮಧುಮೇಹದ ಗುಟ್ಟು: ಮೇದೋಜೀರಕಾಂಗದಲ್ಲಿರುವ ಐಲೆಟ್ಸ್ ಆಫ್ ಲ್ಯಾಂಗರ್ ಹ್ಯಾಟ್ಸ್ ಜೀವಕೋಶಗಳಲ್ಲಿ ಉತ್ಪತ್ತಿ ಯಾಗುವ ಇನ್ಸುಲಿನ್ ಕೊರತೆ ಅಥವಾ ಕ್ರಿಯಾಶಕ್ತಿಯ ಕೊರತೆಯು ಮಧುಮೇಹಕ್ಕೆ ಮುಖ್ಯ ಕಾರಣ. ರೋಗ ಪೀಡಿತರಲ್ಲಿ ತೀವ್ರಗತಿ ಹಾಗೂ ದೀರ್ಘಾವಧಿಯ ರೋಗಗಳ ಸಂಖ್ಯೆ ಹೆಚ್ಚು.ಇದಕ್ಕೆ ತೀವ್ರ ರೋಗಪತ್ತೆ ಮತ್ತು ಸಮರ್ಪಕ ಚಿಕಿತ್ಸೆ ಅಗತ್ಯ. ಸಮಾಜದ ಮೇಲೆ ಇದರಿಂದಾಗುವ ಆರ್ಥಿಕ ನಷ್ಟವನ್ನು ಪರಿಗಣಿಸಿದರೆ ಪ್ರತಿಬಂಧಕ ಕ್ರಮಗಳಿಗೆ ತಗೆದುಕೊಳ್ಳುವ ಶ್ರಮ ಮತ್ತು ಹಣ ಬಹಳ ಕಡಿಮೆ. ಸೇವಿಸಿದ ಆಹಾರದಲ್ಲಿನ ಸಕ್ಕರೆ ಅಂಶವನ್ನು ಇನ್ಸುಲಿನ್ ಶಕ್ತಿಯಾಗಿ ಪರಿವರ್ತಿಸುತ್ತದೆ.

ಮೇದೋಜಿರಕ ಗ್ರಂಥಿ ಕೆಲಸ ಮಾಡದಿರುವ ಸಂದರ್ಭಗಳಲ್ಲಿ ಸೇವಿಸಿದ ಆಹಾರದಲ್ಲಿನ ಸಕ್ಕರೆಯಂಶವನ್ನು ಶಕ್ತಿಯಾಗಿ ಮಾರ್ಪಡಿಸಲಾಗದ ಸ್ಥಿತಿಯಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ನಿಗದಿತ ಪ್ರಮಾಣಕ್ಕಿಂತ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯಂಶವಿದ್ದಾಗ ಉಂಟಾಗುವ ಕಾಯಿಲೆಯೇ ಮಧುಮೇಹ.

ಪ್ರಕಾರಗಳು: ಮಧುಮೇಹದಲ್ಲಿ ಮೂರು ವಿಧ. ಮಕ್ಕಳಲ್ಲಿ ಕಾಣಿಸಿಕೊಳ್ಳುವುದು ಟೈಪ್- , ವಯಸ್ಕರಲ್ಲಿ ಕಾಣಿಸಿಕೊಳ್ಳುವುದು ಟೈಪ್ – , ಗರ್ಭಿಣಿಯರಲ್ಲಿ ಕಾಣಿಸುವುದು ಟೈಪ್ – . ಇನ್ಸುಲಿನ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಇದರಿಂದುಂಟಾ ಗುವ ಕಾಯಿಲೆಯೇ ಮಧುಮೇಹ ಟೈಪ್- . ಇದು ಸಂಪೂರ್ಣವಾಗಿ ಇನ್ಸುಲಿನ್ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ನವಜಾತ ಶಿಶುವಿನಿಂದ ಹಿಡಿದು ಯುವಕರಲ್ಲಿಯೂ ಕಂಡು ಬರುತ್ತದೆ.

ಇದನ್ನು ‘ಜುವೆನೈಲ್ ಡಯಾಬಿಟಿಸ್ ’ಎನ್ನಲಾಗುತ್ತದೆ. ಇಂಥವರಿಗೆ ಇನ್ಸುಲಿನ್ ಕೊಡುವುದೊಂದೇ ಪರಿಹಾರ. ಮಕ್ಕಳನ್ನು ಮೆತ್ತಗೆ ಮಾಡುವ ಮಧುಮೇಹ ಮಕ್ಕಳಲ್ಲಿ ಎರಡನೆಯ ಸಾಮಾನ್ಯ ರೋಗ. ಒಟ್ಟು ಮಧುಮೇಹಿಗಳಲ್ಲಿ ಶೇ.೫ -೧೦ರಷ್ಟು ಈ ಗುಂಪಿಗೆ ಸೇರುತ್ತವೆ. ಫಿನ್‌ಲ್ಯಾಂಡಿನಲ್ಲಿ ಅತಿ ಹೆಚ್ಚು. ಮೆಕ್ಸಿಕೋದಲ್ಲಿ ಅತಿ ಕಡಿಮೆ. ಭಾರತದಲ್ಲಿ ಇದಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಲಭ್ಯವಿಲ್ಲ.

ಕಾರಣಗಳು: ೧.ವಯಸ್ಸು: ಈ ರೋಗದ ಹೆಚ್ಚಳವನ್ನು ಎರಡು ಘಟ್ಟಗಳಲ್ಲಿ ಕಾಣಬಹುದು. ಮೊದಲನೆಯ ಘಟ್ಟ ೫-೭ ವರ್ಷ ವಯಸ್ಸಿನಲ್ಲಿ ಮತ್ತು ಎರಡನೆಯ ಘಟ್ಟ ಹದಿಹರೆಯದವರಲ್ಲಿ. ಮೊದಲನೆಯ ಘಟ್ಟಕ್ಕೆ ವೈರಸ್ ಸೋಂಕು ಕಾರಣ. ಎರಡನೆಯ ಘಟ್ಟಕ್ಕೆ ಗ್ರೋಥ್ ಹಾರ್ಮೋನ್ ಮತ್ತು ಸೆಕ್ಸ್ ಸ್ಟೀರಾಯ್ಡ ಕಾರಣ. ಅಪರೂಪಕ್ಕೆ ಹಸುಗೂಸುಗಳಲ್ಲಿ ಕಾಣಿಸಿಕೊಳ್ಳಬಹುದು.

೨.ಜನಿಕಗಳು: ವರ್ಣತಂತು ಸಂಖ್ಯೆ ಇದಕ್ಕೆ ಸಂಬಂಧ ಹಾಗೂ ಎಚ್‌ಎಲಎ ಆಂಟಿಜನ್‌ಗೆ ಸಂಬಂಧವಿದೆ. ಎಚ್ಎಲಎಫ್- ಡಿಆರ್ ಮತ್ತು ಇದ್ದವರಲ್ಲಿ ಬರುವ ಸಾಧ್ಯತೆ ಹೆಚ್ಚು. ಎಚ್‌ಎಲ್ – ಡಿಎ ಅನ್ನು ಪ್ರತಿಬಂಧಿಸಬಹುದು.

.ಪರಿಸರ: ಶೇ.೪೦ – ೬೦ರಷ್ಟು ರೋಗಿಗಳಿಗೂ ಪರಿಸರಕ್ಕೂ ಸಂಬಂಧವಿರುವುದು ತಿಳಿದು ಬಂದಿದೆ. ಈ ಪರಿಸ್ಥಿತಿಗೆ ಇತರ
ಕಾರಣಗಳೂ ಇವೆಯಂದು ಇದು ನಿರೂಪಿಸುತ್ತದೆ. ಪರಿಸರದ ಇತರ ಕಾರಣಗಳಲ್ಲಿ ಸೋಂಕುಕಾರಕಗಳು, ಪರಿಸರದ ವಿಷವಸ್ತು, ಆಹಾರದ ಮಟ್ಟ ಹಾಗೂ ಮಾನಸಿಕ ಒತ್ತಡ ಮುಖ್ಯವಾದುದು. ಚಳಿಗಾಲದಲ್ಲಿ ರೋಗ ಬರುವ ಸಾಧ್ಯತೆ ಹೆಚ್ಚು.

೪.ಸೋಂಕುಕಾರಕಗಳು: ಮಂಗನಬಾವು, ಕಾಕ್ಸಾಕಿ ವೈರಸ್, ಸೈಟೊಮೆಗಲೋ ವೈರಸ್, ಸಂಜಾತ ರುಬೆಲ್ಲ ರೋಗಲಕ್ಷಣ
ಕೂಟದ ವೈರಸ್‌ಗಳು ಕಾರಣವಾಗಬಹುದು.

ರೋಗದ ಲಕ್ಷಣಗಳು: ಇದ್ದಕ್ಕಿದ್ದಂತೆ ಮಗುವಿನ ತೂಕ ಕಡಿಮೆಯಾಗುವುದು. ಪದೇ ಪದೇ ಬಾಯಾರಿಕೆಯಾಗುವುದು.
ಮೇಲಿಂದ ಮೇಲೆ ಮೂತ್ರ ವಿಸರ್ಜನೆಯಾಗುವುದು. ಹಸಿವು ಹೆಚ್ಚಾಗುವುದು. ಆಯಾಸ, ಬಳಲಿಕೆ, ಸುಸ್ತು ಮುತ್ತುವುದು.
ದೃಷ್ಟಿ ಮಂದವಾಗುವುದು. ಗಾಯಗಳು ಬೇಗನೆ ವಾಸಿಯಾಗದಿರುವುದು. ಆಗಾಗ್ಗೆ ಅನಾರೋಗ್ಯ.

ಸ್ವಯಂರೋಗ ನಿರೋಧಕತೆ : ಇಂಗ್ಲೆಂಡಿನಲ್ಲಿ ಶೇ.೮೦ರಷ್ಟು ಮಧುಮೇಹಕ್ಕೆ ಐಲೆಟ್ಸ್ ಜೀವಕೋಶಗಳ ಆಂಟಿಬಾಡಿಗಳು ರೋಗಲಕ್ಷಣ ತೋರುವ ಕೆಲವು ತಿಂಗಳುಗಳ ಮೊದಲೇ ರಕ್ತದಲ್ಲಿ ಕಂಡು ಬರುತ್ತವೆ. ರೋಗದ ಪ್ರಾರಂಭಕ್ಕೆ ಇದು ಪೂರಕ. ಇನ್ಸುಲಿನ್ ಆಂಟಿಬಾಡಿಗಳು ಶೇ.೪೦ರಷ್ಟು ರೋಗಗಳಿಗೆ ಕಾರಣ. ಮಧುಮೇಹ ಒಂದು ಸಿಹಿಯಾದ ಕಾಯಿಲೆ. ಅದರ
ಸಿಹಿತನವೇ ಕೊಲ್ಲುವುದು. ರಕ್ತನಾಳಗಳಲ್ಲಿನ ಸಕ್ಕರೆಯಂಶ ರಕ್ತನಾಳಗಳನ್ನಲ್ಲದೇ, ಅವುಗಳ ಸಂಪರ್ಕ ಹೊಂದಿರುವ
ಪ್ರಮುಖ ಅಂಗಗಳನ್ನೂ ನಾಶಪಡಿಸುತ್ತದೆ.

ಮಧುಮೇಹವನ್ನು ರಾಬಿನ್ಸ್ ಟ್ರೈಪಥಿ ಕಾಯಿಲೆಯೆನ್ನುತ್ತಾರೆ. ಅವುಗಳು- ರೆಟಿನೋಪಥಿ (ಕಣ್ಣುಗಳ), ನೆಪ್ರೋಪಥಿ (ಮೂತ್ರಪಿಂಡ ಗಳ), ನ್ಯೂರೋಪಥಿ (ನರಗಳ). ಮಧುಮೇಹಿ ಮಕ್ಕಳಲ್ಲಿ ಕೆಲವೊಮ್ಮೆ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ. ಆಗ ಕಂಡು ಬರುವ ಲಕ್ಷಣಗಳು; ಹಸಿವು, ಬೆವರುವಿಕೆ, ಮೈಕೈ ನಡುಕ, ನಿತ್ರಾಣವಾಗುವಿಕೆ, ಎದೆಬಡಿತ ಹೆಚ್ಚಾಗುವಿಕೆ, ತುಟಿಗಳ ಕಂಪನ, ತಲೆನೋವು, ಗಲಿಬಿಲಿ, ಆಲಸ್ಯ, ಮಂಪರು ಕವಿಯುವಿಕೆ, ದೃಷ್ಟಿ ಮಂದಾಗುವಿಕೆ, ನಡವಳಿಕೆಯಲ್ಲಿ ಬದಲಾವಣೆ.

ಪರಿಹಾರ: ಮಧುಮೇಹಕ್ಕೆ ಶಾಶ್ವತ ಪರಿಹಾರವಿಲ್ಲ. ಹಾಗೆಂದಾಕ್ಷಣ ಗಾಬರಿಯಾಗಬೇಕಿಲ್ಲ. ಮಗುವಿನಲ್ಲಿ ಮಧುಮೇಹ ಪತ್ತೆ ಯಾದ ತಕ್ಷಣ ಪಾಲಕರು ತಜ್ಞ ವೈದ್ಯರಿಂದ ರೋಗ ನಿರ್ವಹಣೆ – ನಿಯಂತ್ರಣದ ಬಗ್ಗೆ ಸಂಪೂರ್ಣ ತಿಳಿವಳಿಕೆ, ಶಿಕ್ಷಣ ಪಡೆಯ ಬೇಕು. ವೈದ್ಯರಲ್ಲಿ ಕರೆದುಕೊಂಡು ಹೋಗಿ ಔಷಧ, ಗುಳಿಗೆ ಕೊಡಿಸುವುದಲ್ಲದೆ ನಿತ್ಯದ ಆಹಾರ ಪಥ್ಯ, ಯೋಜನಾಬದ್ಧ ವಾಗಿರುವಂತೆ ನೋಡಿಕೊಳ್ಳಬೇಕು.

ಕ್ರಮಬದ್ಧ ಆಹಾರ, ನಿಯಮಿತ ವ್ಯಾಯಾಮ, ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯಕ್ಕೆ ಇನ್ಸುಲಿನ್ ಕೊಡುವುದರಿಂದ ಮಗುವಿನ ಮಧುಮೇಹದ ಸಂಪೂರ್ಣ ನಿಯಂತ್ರಣ ಸಾಧ್ಯ. ಮಧುಮೇಹ ತಜ್ಞರ ಮಾರ್ಗದರ್ಶನದಲ್ಲಿ ಮಧುಮೇಹ ಪೀಡಿತ ಮಕ್ಕಳು ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಟ್ಟುಕೊಂಡು ಇತರ ಮಕ್ಕಳಂತೆ ಎ ಚಟುವಟಿಕೆಗಳಲ್ಲೂ ಭಾಗವಹಿಸಬಹುದು
ಮತ್ತು ಮಕ್ಕಳ ಬೆಳವಣಿಗೆಯಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ.