Monday, 7th October 2024

PM Modi Meets Muizzu:‌ ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿಗೆ ಮುಯಿಝು ಆಹ್ವಾನ

pm narendra modi

ನವದೆಹಲಿ: ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಅವರನ್ನು ಸೋಮವಾರ (ಅಕ್ಟೋಬರ್‌ 7) ಪ್ರಧಾನಿ ನರೆಂದ್ರ ಮೋದಿ (Narendra Modi) ಭೇಟಿ ಮಾಡಿದರು (PM Modi Meets Muizzu). ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಈ ನಾಯಕರು ಭೇಟಿಯಾದರು. ಭಾರತಕ್ಕೆ ತಮ್ಮ ಅಧಿಕೃತ ಭೇಟಿಗಾಗಿ ಭಾನುವಾರ ಬಂದಿಳಿದ ಮೊಹಮ್ಮದ್ ಮುಯಿಝು ಅವರು ಬಿಗಡಾಯಿಸಿರುವ ತಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಭಾರತದ ಧನಸಹಾಯಯಾಚಿಸಿದ್ದಾರೆ. ಇನು ಇದೇ ವೇಳೆ ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಮುಯಿಝು ಪ್ರಧಾನಿ ಮೋದಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾತನಾಡಿ,ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮಾಲ್ಡೀವ್ಸ್‌ನ ಅಗತ್ಯತೆಗಳ ಪ್ರಕಾರ, 400 ಮಿಲಿಯನ್ ಡಾಲರ್ ಮತ್ತು 3000 ಕೋಟಿ ರೂಪಾಯಿಗಳ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಪ್ರಧಾನಿ ಮೋದಿ ಸಹಿ ಹಾಕಿದ್ದಾರೆ. ನಾವು ಯಾವಾಗಲೂ ಮಾಲ್ಡೀವ್ಸ್ ಜನರ ಅವಶ್ಯಕತೆಗಳಿಗೆ ಆದ್ಯತೆ ನೀಡುತ್ತೇವೆ. ಈ ವರ್ಷ, ಎಸ್‌ಬಿಐ ಮಾಲ್ಡೀವ್ಸ್‌ನ ಖಜಾನೆ ಬೆಂಚ್‌ನ 100 ಮಿಲಿಯನ್ ಡಾಲರ್‌ಗಳ ರೋಲ್‌ಓವರ್ ಮಾಡಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: PM Modi Meets Muizzu: ಮೋದಿ ಜತೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾತುಕತೆ