ಸಿಡ್ನಿ: ಸಿಡ್ನಿಯಿಂದ ಟೋಕಿಯೋಗೆ ಪ್ರಯಾಣ ಬೆಳೆಸಿದ್ದ ವಿಮಾನ ಪ್ರಯಾಣಿಕರಿಗೆ ಬಹುದೊಡ್ಡ ಶಾಕ್ ಕಾದಿತ್ತು. ವಿಮಾನದಲ್ಲಿ ಏಕಾಏಕಿ ವಯಸ್ಕರ ಚಿತ್ರ(Adult Film) ಪ್ರಸಾರ ಪ್ರಸಾರಗೊಂಡ ಪ್ರಸಂಗ ವರದಿಯಾಗಿದೆ. ಕ್ವಾಂಟಸ್ ವಿಮಾನ(Qantas Flight)ದಲ್ಲಿನ ಮನರಂಜನಾ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ, ಪ್ರಯಾಣಿಕರು ತಮ್ಮ ಸ್ವಂತ ಚಲನಚಿತ್ರಗಳನ್ನು ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ಬದಲಾಗಿ, ಏರ್‌ಲೈನ್ಸ್ ತಪ್ಪಾಗಿ R-ರೇಟೆಡ್ ಚಲನಚಿತ್ರವಾದ Daddio ಅನ್ನು ಪ್ಲೇ ಮಾಡಿದೆ. ಇದನ್ನು ನೋಡಿದ ಪ್ರಯಾಣಿಕರು ಹೌಹಾರಿದ್ದಾರೆ.
ಸುಮಾರು ಒಂದು ಗಂಟೆವರೆಗೆ ಈ ಸಿನಿಮಾ ಪ್ಲೇ ಆಗಿದ್ದು, ವಿಮಾನದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದ್ದ ಕಾರಣ ಇದು ಪ್ರಯಾಣಿಕರಿಗೆ ಮುಜುಗರ ತಂದಿದೆ. ಇನ್ನು ಈ ಸಿನಿಮಾವನ್ನು ಪಾಸ್ ಮಾಡಲು, ಆಫ್ ಮಾಡಲು ಪ್ರಯಾಣಿಕರಿಗೆ ಯಾವುದೇ ಅವಕಾಶ ಇರಲಿಲ್ಲ. ಅನೇಕ ಪ್ರಯಾಣಿಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಕ್ವಾಂಟಾಸ್ ಕ್ಷಮೆಯಾಚಿಸಿದೆ ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ.
ಈ ಬಗ್ಗೆ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾನು ಇಂದು ಸಿಡ್ನಿಯಿಂದ ಹನೆಡಾಗೆ ಕ್ವಾಂಟಾಸ್ ಫ್ಲೈಟ್ QF59 ನಲ್ಲಿದ್ದೆ. ಈ ವೇಳೆ ವಿಮಾನದಲ್ಲಿನ ಮನರಂಜನಾ ವ್ಯವಸ್ಥೆಯು ಸ್ಥಗಿತಗೊಂಡಿದೆ. ಒಂದು ಗಂಟೆಯ ವಿಳಂಬದ ನಂತರ, ಪೈಲಟ್ ಹೇಗಾದರೂ ಸಿನಿಮಾ ಪ್ಲೇ ಮಾಡಿದರು. ಆಗ ಪರದೆ ಮೇಲೆ ವಯಸ್ಕ ಚಲನಚಿತ್ರ ಪ್ಲೇ ಆಗಿದೆ. ಸಿಬ್ಬಂದಿಗೆ ಪ್ರತಿ ಪರದೆಯ ಮೇಲೆ ಚಲನಚಿತ್ರವನ್ನು ಪ್ಲೇ ಮಾಡಲು ಮಾತ್ರ ಅವಕಾಶ ಇದೆ. ಆದರೆ ಅದನ್ನು ಪಾಸ್ ಅಥವಾ ಸ್ಟಾಪ್ ಮಾಡಲು ಸಾಧ್ಯವಾಗಲಿಲ್ಲ. ಇದು ಎಲ್ಲರನ್ನೂ ಅತ್ಯಂತ ಮುಜುಗರಕ್ಕೀಡು ಮಾಡಿತ್ತು. ಸಿನಿಮಾವನ್ನು ಬದಲಾಯಿಸಲು ಕ್ವಾಂಟಾಸ್ ಸಿಬ್ಬಂದಿಗೆ ಸುಮಾರು ಒಂದು ಗಂಟೆ ಬೇಕಾಯಿತು. ಎಲ್ಲರಿಗೂ, ವಿಶೇಷವಾಗಿ ಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬಗಳಿಗೆ ವಾತಾವರಣವು ತುಂಬಾ ಅಸಹನೀಯವಾಗಿತ್ತು ಎಂದಿದ್ದಾರೆ.
ನಿನ್ನೆಯಷ್ಟೇ ಮಸ್ಕತ್‌ನಿಂದ 146 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಏರ್‌ಪೋರ್ಟ್‌ನಲ್ಲಿ ಲ್ಯಾಂಡಿಂಗ್ ವೇಳೆ ಟೈರ್ ಸ್ಫೋಟ(Aircraft Tyre Burst)ಗೊಂಡ ಭೀಕರ ಘಟನೆ ವರದಿಯಾಗಿತ್ತು. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅವಘಡವೊಂದು ತಪ್ಪಿದೆ. ಈ ಬಗ್ಗೆ ಏರ್‌ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಹಿಂಬದಿ ಚಕ್ರ ಬ್ಲಾಸ್ಟ್ ಆಗಿದ್ದು, ಆ ವೇಳೆ ವಿಮಾನ ಲ್ಯಾಂಡ್ ಆಗಿತ್ತು. ತಕ್ಷಣ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದ್ದು, ಎಲ್ಲಾ ಪ್ರಯಾಣಿಕರಿಗೆ ನಗರದ ವಿವಿಧ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: 1968 IAF plane crash: 1968ರಲ್ಲಿ ಸೇನಾ ವಿಮಾನ ಪತನ; 56 ವರ್ಷಗಳ ನಂತರ ಮೃತದೇಹ ಪತ್ತೆ