ಇಸ್ಲಾಮಾಬಾದ್: ಭಾರತದ ಮೋಸ್ಟ್ ವಾಂಟೆಡ್ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್(Zakir Naik) ಮತ್ತೆ ಸುದ್ದಿಯಲ್ಲಿದ್ದಾನೆ. ಪಾಕಿಸ್ತಾನ ಪ್ರವಾಸದಲ್ಲಿರುವ ಜಾಕಿರ್ ನಾಯ್ಕ್ ಮತ್ತು ಯುವತಿಯ ನಡುವೆ ಕಾರ್ಯಕ್ರಮವೊಂದರಲ್ಲಿ ಮಾತಿನ ಚಕಮಕಿ ನಡೆದಿರುವ ಘಟನೆ ವರದಿಯಾಗಿದೆ. ಇಸ್ಲಾಂ ಸಮಾಜದಲ್ಲಿ ಬೇರೂರಿರುವ ಶಿಶುಕಾಮ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಯುವತಿಯ ಪ್ರಶ್ನೆಗೆ ಜಾಕೀರ್ ಕೆಂಡಾಮಂಡಲನಾಗಿ ಆಕೆಯನ್ನು ತಕ್ಷಣ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
Zakir Naik, the most famous Muslim scholar in South Asia, gaslights a Pashtun girl when she questions the collapse of society caused by religious extremism.
— Habib Khan (@HabibKhanT) October 6, 2024
pic.twitter.com/zxEoPeTeZE
ಏನಿದು ಘಟನೆ?
ಸೆ.28ರಿಂದ ಪಾಕಿಸ್ತಾನ ಪ್ರವಾಸದಲ್ಲಿರುವ ಜಾಕೀರ್ ನಾಯ್ಕ್, ಕರಾಚಿಯಲ್ಲಿ ನಡೆದ ಧಾರ್ಮಿಕ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಪಶ್ತೂನ್ ಹುಡುಗಿಯೊಬ್ಬಳು, ನಾನು ಸಂಪೂರ್ಣವಾಗಿ ಇಸ್ಲಾಮಿಕ್ ಹಿನ್ನೆಲೆಯಿಂದ ಬಂದವಳು. ಅಲ್ಲಿ ಮಹಿಳೆಯರು ಯಾವುದೇ ಕಾರಣವಿಲ್ಲದೆ ಮನೆಯಿಂದ ಹೊರಗೆ ಬರುವಂತಿಲ್ಲ. ಪ್ರತಿ ಜುಮ್ಮಾ (ಶುಕ್ರವಾರ) ತಬ್ಲೀಘಿ ಜಮಾತ್‌ನ ಜನರ ಹೇಳಿಕೆ ಇರುತ್ತದೆ. ಸ್ವಲ್ಪ ಸಮಯದ ಹಿಂದೆ ದೊಡ್ಡ ತಬ್ಲೀಘಿ ಇಜ್ತಿಮಾ ಕೂಡ ಅಲ್ಲಿ ನಡೆಯಿತು. ನಮ್ಮ ಪ್ರದೇಶದ ಜನರು ತುಂಬಾ ಧಾರ್ಮಿಕರು. ಆದರೆ ಮಾದಕ ವ್ಯಸನ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ (ಪೀಡೋಫಿಲ್), ಬಡ್ಡಿ ಮುಂತಾದ ದುಶ್ಚಟಗಳು ಅಲ್ಲಿ ಪ್ರಚಲಿತವಾಗಿರಲು ಕಾರಣ ಏನಿರಬಹುದು. ಮಕ್ಕಳನ್ನು ಚುಡಾಯಿಸುವವರಿಗೆ ಉಲೇಮಾಗಳು ಏಕೆ ವಿವರಿಸುವುದಿಲ್ಲ? ಎಂದು ಪ್ರಶ್ನಿಸಿದಳು.
ಹುಡುಗಿಯ ಈ ಪ್ರಶ್ನೆಗೆ ಸಿಟ್ಟಿಗೆದ್ದ ಜಾಕೀರ್ ನಾಯ್ಕ್, ‘ನೀವು ಕೇಳಿದ ಪ್ರಶ್ನೆಯಲ್ಲಿ ವೈರುಧ್ಯವಿದೆ. ಇಸ್ಲಾಮಿಕ್ ಪರಿಸರದಲ್ಲಿ ಯಾರೂ ಶಿಶುಕಾಮಿಯಾಗಲು ಸಾಧ್ಯವಿಲ್ಲ. ಇದು ಸಾಧ್ಯವೇ ಇಲ್ಲ. ಆದ್ದರಿಂದ ನಿಮ್ಮ ಪ್ರಶ್ನೆ ತಪ್ಪಾಗಿದೆ. ಇನ್ನೊಬ್ಬರ ವಿರುದ್ಧ ಆರೋಪ ಮಾಡುವ ಮೊದಲು ನೀವು 10 ಬಾರಿ ಯೋಚಿಸಬೇಕು ಎಂದು ಹೇಳಿದನು. ಹುಡುಗಿ ತನ್ನ ಪ್ರಶ್ನೆಯನ್ನು ಸಮರ್ಥನೆ ಮುಂದಾದಾಗಲೂ ಆತ ಅದಕ್ಕೆ ಅವಕಾಶ ಕೊಡಲಿಲ್ಲ.
ಕೆಲವು ದಿನಗಳ ಹಿಂದಯೆಷ್ಟೇ ಅನಾಥ ಹೆಣ್ಣುಮಕ್ಕಳನ್ನು ಬೆಂಬಲಿಸುವ ಪಾಕಿಸ್ತಾನ್ ಸ್ವೀಟ್ ಹೋಮ್ ಫೌಂಡೇಶನ್ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಜಾಕಿರ್ ನಾಯ್ಕ್ ವೇದಿಕೆಯಿಂದ ಏಕಾಏಕಿ ನಿರ್ಗಮಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ್ದ. ಬಾಲಕಿಯರಿಗೆ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಬಾಲಕಿಯನ್ನು ಮಗಳು ಎಂದು ಕರೆದಿದ್ದರು. ಅಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಾಕಿರ್ ನಾಯ್ಕ್ ಅವರು ಮದುವೆ ಅರ್ಹರಾಗಿರುವ ಹುಡುಗಿಯರು ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದ.
ಈ ಸುದ್ದಿಯನ್ನೂ ಓದಿ: Zakir Naik : ವಿವಾದಾತ್ಮಕ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್ ‘ಎಕ್ಸ್’ ಖಾತೆಗೆ ಭಾರತದಲ್ಲಿ ನಿಷೇಧ