ನವದೆಹಲಿ: ಹರಿಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ(Counting) ಭಾರೀ ಬಿರುಸಿನಿಂದ ಸಾಗಿದ್ದು, ಕೆಲವೇ ಹೊತ್ತಿನಲ್ಲಿ ಫಲಿತಾಂಶ(Election result 2024) ಪ್ರಕಟಗೊಳ್ಳಲಿದೆ. ಹರಿಯಾಣದಲ್ಲಿ ಕಳೆದೊಂದು ದಶಕದಿಂದ ಗದ್ದುಗೆ ಹಿಡಿದಿದ್ದ ಬಿಜೆಪಿಗೆ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಪ್ರಚಂಡ ಗೆಲುವಿನತ್ತ ದಾಪುಗಾಲಿಡುತ್ತಿದೆ. ಮತ್ತೊಂದೆಡೆ ಜಮ್ಮು-ಕಾಶ್ಮೀರದಲ್ಲೂ ಕಾಂಗ್ರೆಸ್-ಎನ್‌ಸಿ ಮಿತ್ರಕೂಟ ಕೂಡ ಭಾರೀ ಮುನ್ನಡೆ ಕಾಯ್ಡುಕೊಂಡಿದೆ.
Congress workers distribute laddoos at AICC Headquarters in Delhi, as counting for #HaryanaElections and #JammuKashmirAssemblyElection gets underway. pic.twitter.com/vbW1h9kxWN
— ANI (@ANI) October 8, 2024
90 ಕ್ಷೇತ್ರಗಳಿರುವ ಹರಿಯಾಣದಲ್ಲಿ 46 ಬಹುಮತದ ಮ್ಯಾಜಿಕ್ ನಂಬರ್ ಆಗಿದೆ. ಇದೀಗ ಆರಂಬಿಕ ಹಂತದಲ್ಲಿ ಕಾಂಗ್ರೆಸ್ 60 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಒಂದು ಕಾಲದಲ್ಲಿ ಹರಿಯಾಣದಲ್ಲಿ ಶಕ್ತಿಶಾಲಿಯಾಗಿದ್ದ ಓಂ ಪ್ರಕಾಶ್ ಚೌತಾಲಾ ಅವರ ಐಎನ್‌ಎಲ್‌ಡಿ 2 ಸ್ಥಾನಗಳಲ್ಲಿ ಮುಂದಿದ್ದರೆ, ದುಷ್ಯಂತ್ ಚೌತಾಲಾ ನೇತೃತ್ವದ ಜೆಜೆಪಿ ಒಂದೇ ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
#WATCH | J&K: Counting is underway at Polytechnic College in Jammu
— ANI (@ANI) October 8, 2024
The fate of candidates on 90 seats across all 20 districts in J&K is being decided today. pic.twitter.com/DmsrqAsvXZ
ಜಮ್ಮು ಮತ್ತು ಕಾಶ್ಮೀರದಲ್ಲಿ, ಒಂದು ದಶಕದಲ್ಲಿ ಮೊದಲ ಬಾರಿಗೆ 90 ಸದಸ್ಯರ ಅಸೆಂಬ್ಲಿಗೆ ಚುನಾವಣೆಗಳು ನಡೆದಿವೆ, ಕಾಂಗ್ರೆಸ್-ಎನ್‌ಸಿ ಸಂಯೋಜನೆಯು 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿಯ 28 ಕ್ಕೆ ಮುನ್ನಡೆ ಸಾಧಿಸಿದೆ, ಆರಂಭಿಕ ಹಂತದಲ್ಲಿ ಮೆಹಬೂಬಾ ಮುಫ್ತಿ ಅವರ ಪಿಡಿಪಿ 4 ಸ್ಥಾನಗಳಲ್ಲಿ ಮುಂದಿದೆ. ರಾಜ್ಯದಲ್ಲಿ ಇನ್ನೂ ಅತಂತ್ರ ಸ್ಥಿತಿ ನಿರ್ಮಾಣವಾಗುವ ಭೀತಿ ಇದ್ದು, ಐವರು ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶಿತ ಶಾಸಕರು ಮತ್ತು ಪಿಡಿಪಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎನ್ನಲಾಗಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಪೂರ್ಣಪ್ರಮಾಣ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Assembly Election result: ಬಹಳ ಕುತೂಹಲ ಕೆರಳಿಸಿರುವ ಹರಿಯಾಣ, ಕಾಶ್ಮೀರ ಎಲೆಕ್ಷನ್ ರಿಸಲ್ಟ್ ಇಂದು ಪ್ರಕಟ