ಚಂಢೀಗಡ: ಹರಿಯಾಣ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ(Election Result 2024) ಬಹುತೇಕ ಪೂರ್ಣಗೊಂಡಿದ್ದು, ಎರಡೂ ರಾಜ್ಯಗಳ ಫಲಿತಾಂಶದ ಚಿತ್ರಣ ಸ್ಪಷ್ಟವಾಗಿದೆ. ಅದರಲ್ಲೂ ಹರಿಯಾಣದ ಫಲಿತಾಂಶದಲ್ಲಿ ಅನಿರೀಕ್ಷಿತ ಬದಲಾವಣೆಯಾಗಿದ್ದು, ಕೇವಲ ಒಂದೇ ಒಂದು ಗಂಟೆಯಲ್ಲಿ ರಿಸಲ್ಟ್ ಉಲ್ಟಾ ಆಗಿದೆ.
#WATCH | Haryana: Former CM and Congress candidate Bhupinder Singh Hooda at the Congress Election office in Rohtak
— ANI (@ANI) October 8, 2024
He continues to lead from Garhi Sampla-Kiloi pic.twitter.com/dqKNyB6c9a
ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸ್ಥಾನಗಳು ನೋಡ ನೋಡ್ತಿದ್ದಂತೆ ಒಂದೇ ಸಮನೇ ಏರಿಕೆ ಆಗಿತ್ತು. ಮತ ಎಣಿಕೆ ಆರಂಭದೊಂಡ ಕೆಲವೇ ಗಂಟೆಗಳಲ್ಲಿ 50ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡು ಕ್ಲೀನ್ ಸ್ವೀಪ್ನತ್ತ ದಾಪುಗಾಲಿಡುತ್ತಿತ್ತು. ಇನ್ನೇನು ಸರಳ ಬಹುಮತ ಪಡೆದು ಕಾಂಗ್ರೆಸ್ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವುದು ಖಚಿತ ಎನ್ನುವಾಗಲೇ ಫಲಿತಾಂಶ ಸಂಪೂರ್ಣ ತಲೆಕೆಳಗಾಗಿದೆ. ಆ ಮೂಲಕ ಗಂಟೆಯೊಳಗೆ ಟ್ರೆಂಡ್ ಚೇಂಜ್ ಆಗಿದ್ದು, ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಶೋಕ, ದುಃಖ ಆವರಿಸಿದ್ದ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆದಿದೆ.
#WATCH | Thiruvananthapuram | On Haryana, J&K election trends, Congress MP Shashi Tharoor says, "…We have to wait and see…We shouldn't make a premature conclusion right now…At the moment, they (BJP) seem to be leading in a majority of the seats (in Haryana) which is a… pic.twitter.com/82SMmICldm
— ANI (@ANI) October 8, 2024
ಸದ್ಯ ಬಿಜೆಪಿ 49, ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಹ್ಯಾಟ್ರಿಕ್ ಗೆಲುವಿನ ಕನಸು ಹೊತ್ತಿರುವ ಬಿಜೆಪಿಗೆ ಕೊಂಚ ನಿರಾಳ ಎಂದೆನಿಸಿದೆ. ಹರಿಯಾಣದಲ್ಲಿ ಬಹುಮತಕ್ಕೆ 46ಸ್ಥಾನಗಳು ಬೇಕಾಗಿದ್ದು, ಈಗಾಗಲೇ ಬಿಜೆಪಿ ಅಷ್ಟೂ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವ ಕಾಂಗ್ರೆಸ್ ಕನಸು ಭಗ್ನವಾಗುವ ಆತಂಕ ಇದೆ. ಇನ್ನು ಜಮ್ಮು-ಕಾಶ್ಮೀರದಲ್ಲಿ ಎನ್ಸಿ-ಕಾಂಗ್ರೆಸ್ ಮೈತ್ರಿಕೂಟ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚನೆ ಬಹುತೇಕ ಖಚಿತ ಆಗಿದೆ.
ಈ ಸುದ್ದಿಯನ್ನೂ ಓದಿ: Assembly Election result: ಬಹಳ ಕುತೂಹಲ ಕೆರಳಿಸಿರುವ ಹರಿಯಾಣ, ಕಾಶ್ಮೀರ ಎಲೆಕ್ಷನ್ ರಿಸಲ್ಟ್ ಇಂದು ಪ್ರಕಟ