ವಾಷಿಂಗ್ಟನ್: ಧೈರ್ಯದಿಂದ ವರದಿಗಾರಿಕೆ ಮಾಡಲು ಹೋದ ಪತ್ರಕರ್ತೆಯೊಬ್ಬಳು, ಕೊಚ್ಚಿ ಹೋಗುತ್ತಿದ್ದ ಸೇತುವೆಯಿಂದ ಸ್ವಲ್ಪದರಲ್ಲಿ ಬಚಾವಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಫಾಕ್ಸ್ 46 ವಾಹಿನಿಯ ಅಂಬಾರ ರಾಬರ್ಟ್ ಹೆಸರಿನ ಪತ್ರಕರ್ತೆ ಸೇತುವೆಯೊಂದರ ಬಳಿಯಿಂದ ಲೈವ್ ವರದಿಗಾರಿಕೆ ಮಾಡುತ್ತಿದ್ದರು. ಅಪಾರ ಪ್ರಮಾಣದ ಮಳೆಯಿಂದ ಸೇತುವೆಯ ಕೆಳಗೆ ಅತಿ ಹೆಚ್ಚು ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಪತ್ರಕರ್ತೆ ಕೇವಲ 1 ಮೀಟರ್ ದೂರದಲ್ಲಿ ನಿಂತು ವರದಿ ಮಾಡಿದ್ದಾರೆ. ಅದೇ ಸಮಯದಲ್ಲಿ ಸೇತುವೆಯ ಮಧ್ಯಭಾಗ ಕುಸಿದು ಬಿದ್ದಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಅದೃಷ್ಟವಶಾತ್ ಪತ್ರಕರ್ತೆಗೆ ಯಾವುದೇ ಹಾನಿಯಾಗಿಲ್ಲ. ಅಮೆರಿಕದ ಹಲವೆಡೆ ಭಾರಿ ಮಳೆಯಾಗುತ್ತಿದೆ.