ಮುಲ್ತಾನ್: ಪ್ರಸ್ತುತ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್(Joe Root) ಅವರು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ(World Test Championship) ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಡಬ್ಲ್ಯುಟಿಸಿಯಲ್ಲಿ(WTC history) 5 ಸಾವಿರ್ ರನ್ ಪೂರ್ತಿಗೊಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ವಿರುದ್ಧ ಸಾಗುತ್ತಿರುವ ಟೆಸ್ಟ್ ಪಂದ್ಯದಲ್ಲಿ 27 ರನ್ ಗಳಿಸುತ್ತಿದ್ದಂತೆ ರೂಟ್ ಈ ದಾಖಲೆ ಬರೆದರು.
ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ರೂಟ್ನ ನಂತರ ಎರಡನೇ ಅತಿ ಹೆಚ್ಚು ಸ್ಕೋರರ್ ಆಗಿರುವ ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಶೇನ್ 3904 ರನ್ ಗಳಿಸಿದ್ದಾರೆ. ಭಾರತದ ಯಾವೊಬ್ಬ ಬ್ಯಾಟರ್ ಕೂಟ ಅಗ್ರ 5ರೊಳಗೆ ಕಾಣಿಸಿಕೊಂಡಿಲ್ಲ.
ವಿಶ್ವ ಟೆಸ್ಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳು
ಜೋ ರೂಟ್-5000* ರನ್
ಮಾರ್ನಸ್ ಲಬುಶೇನ್-3904 ರನ್
ಸ್ಟೀವನ್ ಸ್ಮಿತ್-3486 ರನ್
ಬೆನ್ ಸ್ಟೋಕ್ಸ್-3101 ರನ್
ಬಾಬರ್ ಅಜಂ-2755 ರನ್
ಇದನ್ನೂ ಓದಿ India vs Bangladesh : ಭಾರತಕ್ಕೆ ಮತ್ತೆ ಸುಲಭ ಗುರಿಯಾಗುವುದೇ ಬಾಂಗ್ಲಾದೇಶ?
ಆರಂಭಕಾರ ಅಬ್ದುಲ್ಲ ಶಫೀಕ್ ಮತ್ತು ನಾಯಕ ಶಾನ್ ಮಸೂದ್ ಅವರ ಅಮೋಘ ಶತಕಗಳ ನೆರವಿನಿಂದ ಇಂಗ್ಲೆಂಡ್ ಎದುರಿನ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 556 ರನ್ ಪೇರಿಸಿದೆ. ಪ್ರತಿಯಾಗಿ ಬ್ಯಾಟಿಂಗ್ ನಡೆಸುತ್ತಿರುವ ಇಂಗ್ಲೆಂಡ್ ಕೂಡ ಉತ್ತಮ ರನ್ ಗಳಿಸುತ್ತಿದೆ. ಇಂದು ಮೂರನೇ ದಿನವಾಗಿದೆ. ಸದ್ಯದ ಪರಿಸ್ಥಿತಿ ನೋಡುವಾಗ ಪಂದ್ಯ ಡ್ರಾ ಗೊಳ್ಳುವ ಸಾಧ್ಯತೆ ಅಧಿಕವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಸದ್ಯ ಶೇ. 42 ಗೆಲುವಿನ ಪ್ರತಿಶತ ಹೊಂದಿದ್ದು ನಾಲ್ಕನೇ ಸ್ಥಾನದಲ್ಲಿದೆ. ಫೈನಲ್ ಪ್ರವೇಶಿಸಬೇಕಿದ್ದರೆ ಇಂಗ್ಲೆಂಡ್ಗೆ ಪಾಕ್ ವಿರುದ್ಧದ ಸೆರಣಿಯನ್ನು ದೊಡ್ಡ ಅಂತರದಿಂದ ಗೆಲ್ಲಬೇಕಿದೆ. ಜತೆಗೆ ತನಗಿಂತ ಮೇಲಿರುವ ತಂಡ ಸೋಲು ಕಾಣಬೇಕಿದೆ. ಹಾಗಾದರೆ ಮಾತ್ರ ಇಂಗ್ಲೆಂಡ್ಗೆ ಫೈನಲ್ ಟಿಕೆಟ್ ಸಿಗುವ ಕ್ಷೀಣ ಅವಕಾಶವೊಂದಿದೆ. ಪಾಕಿಸ್ತಾನ 8ನೇ ಸ್ಥಾನದಲ್ಲಿದ್ದು ಸರಣಿ ಗೆದ್ದರೂ ಫೈನಲ್ ಪ್ರವೇಶಿಸುವುದು ಕಷ್ಟ. ಸದ್ಯ ಅಗ್ರಸ್ಥಾನಿ ಭಾರತ, ದ್ವಿತೀಯ ಸ್ಥಾನಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ತೀವ್ರ ಪೈಪೋಟಿ ಇದೆ.