Sunday, 24th November 2024

Physical Abuse:12 ವರ್ಷದ ಸಹೋದರಿಯನ್ನೇ ಗರ್ಭಿಣಿ ಮಾಡಿದವನಿಗೆ 123 ವರ್ಷ ಜೈಲು ಶಿಕ್ಷೆ ವಿಧಿಸಿದ ಕೇರಳ ಕೋರ್ಟ್‌

Physical Abuse

ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ (Physical Abuse) ಪ್ರಕರಣಗಳು ಹೆಚ್ಚಾಗುತ್ತಿವೆ. ಮನೆಯೊಳಗಿರುವ ಸಂಬಂಧಿಕರೇ ಇತ್ತೀಚಿನ ದಿನಗಳಲ್ಲಿ ತಮ್ಮ ಮನೆಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಲು ಶುರುಮಾಡಿದ್ದಾರೆ.  ತಂದೆ, ಸಹೋದರನೇ ಲೈಂಗಿಕ ಶೋಷಣೆ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇಂಥದ್ದೇ ಪ್ರಕರಣವೊಂದು ಕೇರಳದಲ್ಲಿ ಈ ಹಿಂದೆ ನಡೆದಿತ್ತು. ಆದರೆ, ಕೋರ್ಟ್ ಅಪರಾಧಿಗೆ 123 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

2019 ರಲ್ಲಿ ತನ್ನ 12 ವರ್ಷದ ಸಹೋದರಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿದ ಯುವಕನಿಗೆ ಮಂಜೇರಿ ಪೋಕ್ಸೊ ನ್ಯಾಯಾಲಯವು ಒಟ್ಟು 123 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಾದ  ಎ.ಎಂ.ಅಶ್ರಫ್ ಅವರು ತೀರ್ಪು ನೀಡಿದ್ದು ಅಪರಾಧಿಗೆ 7 ಲಕ್ಷ ರೂ.ಗಳ ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ತಿರುವನಂತಪುರಂನ ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದ ಅನಾಥರ ಕಲ್ಯಾಣಕ್ಕಾಗಿ ನೀಡಲು ಆದೇಶಿಸಿದ್ದಾರೆ.

ಸಂತ್ರಸ್ತ ಬಾಲಕಿ  ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ಬಂದಾಗ ಅಲ್ಲಿ ಆಕೆಗೆ  ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅಲ್ಲಿ ಅವಳು ಗರ್ಭಿಣಿ ಎಂದು ತಿಳಿದಾಗ ಈ ಪ್ರಕರಣ  ಬೆಳಕಿಗೆ ಬಂದಿದೆ. ನಂತರ, ಅವಳು ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗಾಗಿ ನ್ಯಾಯಾಲಯವು ಮಗುವಿನ  ಡಿಎನ್ಎ ವರದಿಯನ್ನು ಪರಿಶೀಲಿಸಿ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪಿಗೆ 123 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಈ ಘಟನೆಯು 2019 ರಲ್ಲಿ ಸಂತ್ರಸ್ತ ಬಾಲಕಿಯ ಮನೆಯಲ್ಲಿ ನಡೆದಿದೆ.  ಪ್ರಕರಣದ ವಿಚಾರಣೆಯ ಸಮಯದಲ್ಲಿ ಆರೋಪಿ ತಾಯಿ ಮತ್ತು ಚಿಕ್ಕಪ್ಪ ಆರೋಪಿ ಯುವಕನನ್ನು ಪ್ರಕರಣದಿಂದ ರಕ್ಷಿಸುವ ಪ್ರಯತ್ನದಿಂದ ಸುಳ‍್ಳು ಹೇಳಿಕೆ ನೀಡಿದ್ದರು. ಆದರೆ ಪ್ರಾಸಿಕ್ಯೂಷನ್ ಸಲ್ಲಿಸಿದ ವೈಜ್ಞಾನಿಕ ಪುರಾವೆಗಳು ಮತ್ತು ದಾಖಲೆಗಳನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡು ಆರೋಪಿಗೆ ತಕ್ಕ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಕೆಫೆಯಲ್ಲಿ ಯುವತಿಯೊಂದಿಗೆ ಸಿಕ್ಕಿಬಿದ್ದ ಗೆಳೆಯನಿಗೆ ಗೆಳತಿ ಮಾಡಿದ್ದೇನು ನೋಡಿ!

ಈ ನಡುವೆ  ನ್ಯಾಯಾಲಯವು ಆರೋಪಿಗೆ ಶಿಕ್ಷೆಯನ್ನು ಘೋಷಿಸಿದಾಗ, ಆತ ಅದನ್ನು ಕೇಳಿ ಜೇಬಿನಲ್ಲಿ ಇಟ್ಟುಕೊಂಡಿದ್ದ  ಬ್ಲೇಡ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ದೇಹದ ಮೇಲೆ ಸಣ್ಣ ಪುಟ್ಟ ಗಾಯಗಳಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.