Sunday, 24th November 2024

Chikkaballapur News: ವಕೀಲರು ಪ್ರಾಮಾಣಿಕ ಹಾಗೂ ಸತ್ಯದ ಧೋರಣೆಯೊಂದಿಗೆ ಕರ್ತವ್ಯ ನಿರ್ವಹಿಸಿ: ನ್ಯಾಯಾಧೀಶ ಮಂಜುನಾಥ ಚಾರಿ

ಬಾಗೇಪಲ್ಲಿ: ಕಾನೂನಿನ ಚೌಕಟ್ಟು, ಮಾನವೀಯ ಗುಣಗಳೊಂದಿಗೆ ವಕಲತ್ತು ನಡೆಸಿ ಕಕ್ಷಿದಾರರಿಗೆ ನ್ಯಾಯ ಒದಗಿ ಸುವುದು ಮತ್ತು ನ್ಯಾಯಪರವಾಗಿ ನಿಲ್ಲುವುದು ವಕೀಲರ ಜವಾಬ್ದಾರಿಯಾಗಿದೆ ಎಂದು ತಾಲ್ಲೂಕು ಜೆಎಂಎಫ್ ನ್ಯಾಯಾಲಯದ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ಚಾರಿ ಹೇಳಿದ್ದಾರೆ.

ಬಾಗೇಪಲ್ಲಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಬಾಗೇಪಲ್ಲಿ ವಿವಿಧ ನ್ಯಾಯಾಲಯ ಗಳಿಗೆ ವರ್ಗಾವಣೆ ಗೊಂಡು ಬಂದಿರುವ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡುತಿದ್ದರು.

ವಕೀಲರು ಹಾಗೂ ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರೂ ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ, ಪ್ರಕರಣಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸಾಧ್ಯ ಹಾಗೂ ವಕೀಲರು ಪ್ರಾಮಾಣಿಕ ಹಾಗೂ ಸತ್ಯದ ಧೋರಣೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎ.ನಂಜುಂಡಪ್ಪ, ಕರುಣಾಸಾಗರ ರೆಡ್ಡಿ, ಅಪ್ಪಿಸ್ವಾಮಿ ರೆಡ್ಡಿ, ನಂಜಪ್ಪ, ಅಲ್ಲಾ ಬಕಾಷ್, ನಾಗಭೂಷಣ, ಸುಧಾಕರ್, ಬಾಲು ನಾಯಕ್, ಇನ್ನೂ ಮುಂತಾದವರು ಪ್ರಮುಖರು ಹಾಜರಿದ್ದರು.

ಇದನ್ನೂ ಓದಿ: Chikkaballapur News: ಇಂದು ಗಾಂಧಿ ಭವನ ಕಟ್ಟಡ ಉದ್ಘಾಟನೆ ಮತ್ತು ಗಾಂಧಿ ಜಯಂತಿ ಅಂಗವಾಗಿ ಗಾಂಧಿ ನಡಿಗೆ ಕಾರ್ಯಕ್ರಮ