ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿರುವುದು ಪ್ರೀ-ವೆಡ್ಡಿಂಗ್ ಫೋಟೊಶೂಟ್‍ಗಳು. ಮೊದಲು ಮದುವೆಯ ನಂತರ ದಂಪತಿಯ ಪೋಟೊಶೂಟ್ ಮಾಡುತ್ತಿದ್ದರು. ಆದರೆ ಈಗ ಮದುವೆಗೂ ಮುಂಚೆಯೇ ಜೋಡಿ ಕ್ಲೋಸ್ ಆಗಿರುವ, ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು, ಕಿಸ್ ಮಾಡುವುದನ್ನು ಪೋಟೊ ಶೂಟ್ ಮಾಡತೊಡಗಿದ್ದಾರೆ. ಹಿಂದಿನ ಕಾಲದಲ್ಲಿ ಮದುವೆಗೂ ಮೊದಲು ವಧುವರರು ಒಬ್ಬರ ಮುಖ ಒಬ್ಬರು ನೋಡುವಂತಿರಲಿಲ್ಲ. ಆದರೆ ಈಗಿನ ಕಾಲದಲ್ಲಿ ಮದುವೆಯ ನಂತರ ಮಾಡುವಂತಹ ಕೆಲಸಗಳನ್ನು ಮದುವೆಗೂ ಮೊದಲೇ ಮಾಡುತ್ತಿದ್ದಾರೆ! ಇದೀಗ ಅಂತಹದೊಂದು ಪ್ರೀ-ವೆಡ್ಡಿಂಗ್ ಫೋಟೊಶೂಟ್ ವಿಡಿಯೊ ಒಂದು ವೈರಲ್ (Viral Video) ಆಗಿದ್ದು, ಭಾರತೀಯರು ಪಾಶ್ಚಿಮಾತ್ಯರ ಜೀವನಶೈಲಿಯ ಕಡೆಗೆ ವಾಲುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟವಾಗಿ ತಿಳಿಸುತ್ತಿದೆ.
ಈ ಜೋಡಿಯ ಪ್ರೀ-ವೆಡ್ಡಿಂಗ್ ವೈರಲ್ ವಿಡಿಯೊದಲ್ಲಿ ಅವರು ಒಬ್ಬರಿಗೊಬ್ಬರು ನಾಚಿಕೆ ಇಲ್ಲದೆ ಎಲ್ಲರ ಎದುರೇ ಲಿಪ್ ಕಿಸ್ ಮಾಡಿದ್ದಾರೆ. ನಾಲ್ಕು ಗೋಡೆಗಳ ನಡುವೆ ನಡೆಯಬೇಕಾಗಿದ್ದ ಕೆಲಸ ಈಗ ಎಲ್ಲರ ಮುಂದೆಯೇ ನಡೆದಿದೆ.
Pre wedding photo shoot 🌝 pic.twitter.com/UL7ymLsf67
— Baba MaChuvera 💫 Parody of Parody (@indian_armada) October 2, 2024
ಈ ವಿಡಿಯೊ ನೋಡಿದ ಸಂಪ್ರದಾಯಸ್ಥರು ಇದರ ಬಗ್ಗೆ ಕೋಪ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‍ಗಳ ಮೂಲಕ ಈ ದಂಪತಿಯನ್ನು ಖಂಡಿಸಿದ್ದಾರೆ. ಇಂತಹ ಕೆಲಸ ಮಾಡಲು ಜೋಡಿಗೆ ಅನುಮತಿ ನೀಡಿದ ಕುಟುಂಬದವರನ್ನು ಗೇಲಿ ಮಾಡಿದ್ದಾರೆ. ಈ ರೀತಿಯ ಅಶ್ಲೀಲತೆಗಳು ಭಾರತೀಯ ಯುವಜನಾಂಗದ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ಸೂಚಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಸುಪ್ರೀಂ ಕೋರ್ಟ್‌ನಲ್ಲಿ ವಕೀಲರ ಬ್ಯಾಗನ್ನೇ ಎಗರಿಸಿದ ಕಳ್ಳ! ವಿಡಿಯೊ ನೋಡಿ
ಭಾರತೀಯ ಪೋಷಕರು ತಮ್ಮ ಮಕ್ಕಳಿಗೆ ಸಂಪ್ರದಾಯವನ್ನು ಕಲಿಸಿಕೊಡಲು ವಿಫಲರಾಗಿದ್ದಾರೆ ಎಂದು ಈ ವಿಡಿಯೊ ನೋಡಿದ ಕೆಲವರು ಟೀಕಿಸಿದ್ದಾರೆ. ಇದಕ್ಕೆ ಕಮೆಂಟ್ ಮಾಡಿದ ಒಬ್ಬರು “ಇದು ಪ್ರಿ-ವೆಡ್ಡಿಂಗ್ ಫೋಟೋಶೂಟ್ ಎಂದು ನಾನು ಭಾವಿಸುವುದಿಲ್ಲ. ಅಂತಹ ಲಿಪ್-ಲಾಕ್ ಫೋಟೋಶೂಟ್‍ಗೆ ಯಾವುದೇ ಪೋಷಕರು ಅನುಮತಿ ನೀಡುವುದಿಲ್ಲ” ಎಂದಿದ್ದಾರೆ.