Monday, 25th November 2024

Handshake Tips:ಹ್ಯಾಂಡ್‍ಶೇಕ್‌ ಮಾಡುವ ಮೊದಲು ಈ ವಿಚಾರದ ಬಗ್ಗೆ ನಿಮ್ಮ ಗಮನವಿರಲಿ!

Handshake Tips

ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ತಮಗೆ ಪರಿಚಯವಿರುವವರು ಅಥವಾ ತಮ್ಮ ಜೊತೆ ತುಂಬಾ ಕ್ಲೋಸ್ ಆಗಿರುವವರು ಸಿಕ್ಕಾಗ ತಕ್ಷಣ ಹ್ಯಾಂಡ್‍ಶೇಕ್‌ ((Handshake Tips) )ಮಾಡುತ್ತೇವೆ. ಇದರಿಂದ ಅವರ ಜೊತೆ ಆರಾಮದಾಯಕವಾಗಿ ಮಾತುಕತೆ ನಡೆಸಬಹುದು. ಹಾಗೇ ಆಫೀಸ್‍ನಲ್ಲಿ ವರ್ಕ್ ಮಾಡುವಾಗ ಕೂಡ ಬಾಸ್ ಅಥವಾ ಇನ್ನಿತರ ವ್ಯಕ್ತಿಗಳನ್ನು ಭೇಟಿಯಾದಾಗ ಹ್ಯಾಂಡ್‍ಶೇಕ್‌ ಮಾಡುವ ಮೂಲಕ ಪರಿಚಯ ಮಾಡಿಕೊಳ್ಳುತ್ತೇವೆ. ಹ್ಯಾಂಡ್‍ಶೇಕ್‌ ಎನ್ನುವುದು ಗೌರವ ಸೂಚಿಸುವ ಒಂದು ವಿಧಾನವಾಗಿದೆ. ಹ್ಯಾಂಡ್‍ಶೇಕ್‌ ಮಾಡುವ ರೀತಿಯಿಂದಲೂ ಕೂಡ ಆ ವ್ಯಕ್ತಿಯ ಬಗ್ಗೆ ನಾವು ತಿಳಿದುಕೊಳ್ಳಬಹುದು. ಹಾಗಾಗಿ  ಹ್ಯಾಂಡ್‍ಶೇಕ್‌ ಅನ್ನು ಯಾವಾಗ ಬಳಸಬೇಕು ? ಮತ್ತು ಹ್ಯಾಂಡ್‍ಶೇಕ್‌ ಮಾಡುವಾಗ ಯಾವ ಕ್ರಮಗಳನ್ನು ಪಾಲಿಸಬೇಕು ಎಂಬುದನ್ನು ತಿಳಿಯಿರಿ.

Handshake Tips

ಹ್ಯಾಂಡ್‍ಶೇಕ್‌ ಅನ್ನು ಯಾವಾಗ ಮಾಡಬೇಕು?:

*ನಿಮ್ಮ ಮತ್ತು ಅಪರಿಚಿತರ ನಡುವೆ ಮಾತುಕತೆ ನಡೆಯುವ ಮೊದಲು ಅವರನ್ನು ಪರಿಚಯ ಮಾಡಿಕೊಳ್ಳಲು ಹ್ಯಾಂಡ್‍ಶೇಕ್‌ ಮಾಡಿ.

*ನೀವು ಯಾವುದೇ ಉದ್ಯೋಗಕ್ಕಾಗಿ ಇಂಟರ್‌ವ್ಯೂಗೆ ಹೋದಾಗ ಅಲ್ಲಿ ನಿಮ್ಮ ಮೇಲಾಧಿಕಾರಿಗಳಿಗೆ ಹ್ಯಾಂಡ್‍ಶೇಕ್‌ ಮಾಡಿ ಪರಿಚಯ ತಿಳಿಸಿ.

*ನೀವು ಸಂದರ್ಶಕರನ್ನು ಭೇಟಿ ಮಾಡಿದಾಗ ಹ್ಯಾಂಡ್‍ಶೇಕ್‌ ಮಾಡಿ ಪರಿಚಯ ಮಾಡಿಕೊಳ್ಳಿ.

 *ನೀವು ತುಂಬಾ ಸಮಯದ ನಂತರ ನಿಮ್ಮವರನ್ನು ಭೇಟಿ ಮಾಡಿದಾಗ ಹ್ಯಾಂಡ್‍ಶೇಕ್‌ ಮಾಡಿ.

* ನಿಮ್ಮ ಜೊತೆ ಮಾತನಾಡಲು ಯಾರಾದರೂ ತಮ್ಮ ಕೈಯನ್ನು ಚಾಚಿ ಹ್ಯಾಂಡ್‍ಶೇಕ್‌ ಮಾಡಲು ಬಂದಾಗ ನೀವು ಹ್ಯಾಂಡ್‍ಶೇಕ್‌ ಮಾಡಿ.

*ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ  ಸಭೆಗಳಿಗೆ ಹೋದಾಗ ಅಲ್ಲಿದ್ದವರಿಗೆ ಹ್ಯಾಂಡ್‍ಶೇಕ್‌ ನೀಡಿ ಪರಿಚಯ ಮಾಡಿಕೊಳ್ಳಿ.

Handshake Tips

ಹ್ಯಾಂಡ್‍ಶೇಕ್‌ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ:

*ಹ್ಯಾಂಡ್‍ಶೇಕ್‌ ಮಾಡುವ ಮೊದಲು ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡಿರಿ:
ಯಾರೊಂದಿಗಾದರೂ ಹ್ಯಾಂಡ್‍ಶೇಕ್‌ ಮಾಡುವ ಸಂದರ್ಭ ಬರುತ್ತದೆ ಎಂದು ನಿಮ್ಮ ಗಮನಕ್ಕೆ ಬಂದ ಕೂಡಲೇ ತಕ್ಷಣ ನಿಮ್ಮ ಕೈಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಅಂದರೆ  ನಿಮ್ಮ ಕೈಗಳಲ್ಲಿ ಬೆವರಿದ್ದರೆ ಅದನ್ನು ಒರಸಿಕೊಳ್ಳಿ, ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಮೂಲಕ ನಿಮ್ಮ ಕೈಯ ಕೊಳೆ, ಬೆವರನ್ನು ಕ್ಲೀನ್ ಮಾಡಿ.  ಒಂದು ವೇಳೆ  ನಿಮಗೆ ಕೈ ಸ್ವಚ್ಛ ಮಾಡಲು ಸಮಯವಿಲ್ಲದಿದ್ದರೆ  ನಿಮ್ಮ ಅಂಗೈಗಳನ್ನು ಬುದ್ಧಿವಂತಿಕೆಯಿಂದ ಅಲ್ಲೇ ಒರೆಸಲು ಪ್ರಯತ್ನಿಸಿ ಅಥವಾ ಕೈಬೀಸಿ ಅವರಿಗೆ ಹಾಯ್ ಹೇಳಿ ಬಿಡಿ.

*ನಿಮ್ಮ ಕೈಯನ್ನು ಯಾವಾಗ ಚಾಚಬೇಕು ಎಂದು ತಿಳಿಯಿರಿ
ಕೆಲವೊಂದು ಸಂದರ್ಭಗಳಲ್ಲಿ ನೀವು ಹ್ಯಾಂಡ್‍ಶೇಕ್‌ ಮಾಡಲು ಮುಂದೆ ಕೈ ಚಾಚಿದರೂ ಕೆಲವರು ಕೈ ಮುಂದೆ ನೀಡುವುದಿಲ್ಲ. ಇದರಿಂದ ನಿಮಗೆ ಅವಮಾನವಾಗಬಹುದು. ಹಾಗಾಗಿ ನೀವು ಭೇಟಿ ಮಾಡಿದ ವ್ಯಕ್ತಿ ಮೊದಲು ಕೈ ಚಾಚುವ ತನಕ ಕಾಯಿರಿ.  ಹಾಗೇ  ಸಂದರ್ಶನಕ್ಕೆ ಹೋದಾಗ, ಸಂದರ್ಶಕರು ಹ್ಯಾಂಡ್‍ಶೇಕ್‌ ನೀಡುವವರೆಗೂ ಕಾಯಿರಿ. ಅಲ್ಲದೇ ಹ್ಯಾಂಡ್‍ಶೇಕ್‌ ಮಾಡುವಾಗ  ನಿಮ್ಮ ಕೈಯನ್ನು ನೆಲಕ್ಕೆ ಲಂಬವಾಗಿ ಇರಿಸಿ ಅಥವಾ ನಿಮ್ಮ ಅಂಗೈಯನ್ನು ಮೇಲ್ಮುಖ ಸ್ಥಾನದಲ್ಲಿ ಹಿಡಿದುಕೊಳ್ಳಿ. ಯಾರಿಗಾದರೂ ನಿಮ್ಮ ಕೈಯನ್ನು ನೀಡುವಾಗ ನಿಮ್ಮ ಅಂಗೈಯನ್ನು ಕೆಳಕ್ಕೆ ಇಡುವುದು ಸರಿಯಲ್ಲ.

*ಪ್ರಾಮಾಣಿಕತೆಯಿಂದ ಹ್ಯಾಂಡ್‍ಶೇಕ್‌ ಮಾಡಿ:
ನೀವು ಇನ್ನೊಬ್ಬರೊಂದಿಗೆ ಹ್ಯಾಂಡ್‍ಶೇಕ್‌ ಮಾಡುವಾಗ ನಿಮ್ಮ ಕಣ್ಣುಗಳು ಅವರನ್ನೇ ನೋಡುತ್ತಿರಲಿ ಮತ್ತು ಪ್ರಾಮಾಣಿಕ ನಗು ಅಥವಾ ಇನ್ನಿತರ ಉತ್ತಮವಾದ ಭಾವನೆ ಮುಖದಲ್ಲಿರಲಿ. ಒಂದು ವೇಳೆ ನೀವು ಅವರನ್ನು ಸರಿಯಾಗಿ ನೋಡದೆ ಹ್ಯಾಂಡ್‍ಶೇಕ್‌ ಮಾಡಿದರೆ  ಅವರಿಗೆ ಬೇಸರವಾಗಬಹುದು.

*ವ್ಯಕ್ತಿಯನ್ನು ಸ್ವಾಗತಿಸಿ:
ನೀವು ಹ್ಯಾಂಡ್‍ಶೇಕ್‌ ಮಾಡುವ ಮುನ್ನ  ಆ ವ್ಯಕ್ತಿಯನ್ನು ಸ್ವಾಗತಿಸಬಹುದು ಮತ್ತು ಅವರ ಹೆಸರು ಹೇಳಿ ಕರೆಯಬಹುದು.  ಉದಾಹರಣೆಗೆ, ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಯ್ತು ಎಂದು ಹೇಳುವ ಮೂಲಕ ನೀವು ನಿಮ್ಮನ್ನು ಪರಿಚಯಿಸಿಕೊಳ್ಳಬಹುದು.

* ಹ್ಯಾಂಡ್‍ಶೇಕ್‌ ಮಾಡುವಾಗ ಕೈಯ ಮೇಲೆ ಒತ್ತಡ ಹಾಕಬೇಡಿ:

* ಹ್ಯಾಂಡ್‍ಶೇಕ್‌ ಮಾಡುವಾಗ ನಿಧಾನವಾಗಿ ಕೈಗಳನ್ನು ಹಿಡಿಯಿರಿ. ಗಟ್ಟಿಯಾಗಿ ಹಿಡಿಯಬೇಡಿ. ಇದರಿಂದ ಅವರಿಗೆ ನೋವಾಗಬಹುದು.

* ಹ್ಯಾಂಡ್‍ಶೇಕ್‌ ಒಮ್ಮೆ ಮಾಡಿ ಕೈಯನ್ನು ಬಿಡಿ:

ಹ್ಯಾಂಡ್‍ಶೇಕ್‌ ಸುಮಾರು ಎರಡರಿಂದ ನಾಲ್ಕು ಸೆಕೆಂಡುಗಳವರೆಗೆ ಮಾಡಬೇಕಾಗುತ್ತದೆ. ತುಂಬಾ ಹೊತ್ತು ಕೈಯನ್ನು ಹಿಡಿದುಕೊಳ್ಳಬೇಡಿ, ಮತ್ತು  ಅವರು ನಿಮ್ಮ ಕೈ ಬಿಟ್ಟ ಬಳಿಕ ಅವರ ಮುಂದೆಯೇ ನಿಮ್ಮ ಕೈಗಳನ್ನು ಒರೆಸಿಕೊಳ್ಳಬೇಡಿ. ಇದರಿಂದ ಅವರಿಗೆ ಅವಮಾನ ಮಾಡಿದಂತಾಗುತ್ತದೆ.

*ಹೊರಡುವ ಮೊದಲು ಮತ್ತೆ ಹ್ಯಾಂಡ್‍ಶೇಕ್‌ ಮಾಡಿ:

ನೀವು ವ್ಯಕ್ತಿಯೊಂದಿಗೆ ಮಾತುಕತೆ ಮುಗಿಸಿದ ನಂತರ ಕೊನೆಯಲ್ಲಿ ಹೊರಡುವ ಮುನ್ನ ಮತ್ತೊಮ್ಮೆ ಹ್ಯಾಂಡ್‍ಶೇಕ್‌ ಮಾಡಿ ಮತ್ತೆ ಇನ್ನೊಮ್ಮೆ ಭೇಟಿ ಮಾಡುವ ಎಂದು ಹೇಳಿ ಹೊರಡಿ.  

ಇದನ್ನೂ ಓದಿ:ನಿಮ್ಮ ಸಂಗಾತಿಯ ಬಳಿ ಈ ವಿಷಯಗಳನ್ನು ಯಾವುದೇ ಕಾರಣಕ್ಕೂ ಮುಚ್ಚಿಡಬೇಡಿ!

ಹ್ಯಾಂಡ್‍ಶೇಕ್‌ ಎನ್ನುವುದು ಮಾತುಕತೆ ಇಲ್ಲದೇ ಬೇರೆಯೊಬ್ಬರನ್ನು ಪರಿಚಯ ಮಾಡಿಕೊಳ್ಳುವ ಒಂದು ವಿಧಾನವಾಗಿದೆ. ಇಂಟರ್‌ವ್ಯೂ ಇದ್ದಾಗ ಹ್ಯಾಂಡ್‍ಶೇಕ್‌ ಮಾಡುವುದರಿಂದ ನಿಮ್ಮ ಭಯ, ಆತಂಕವನ್ನು ದೂರಮಾಡಬಹುದು.