Sunday, 24th November 2024

Durga Puja at Times Square : ಅಮೆರಿಕದ ಟೈಮ್ಸ್‌ಸ್ಕ್ವೇರ್‌ನಲ್ಲಿ ಅವತರಿಸಿದ ದುರ್ಗೆ; ಅಮೆರಿಕನ್ನರನ್ನು ಸೆಳೆದ ಆಕರ್ಷಕ ಪೆಂಡಾಲ್

NYC Celebrates Durga Puja

ನ್ಯೂಯಾರ್ಕ್‌ನ (New York) ಐಕಾನಿಕ್ ಟೈಮ್ಸ್‌ಸ್ಕ್ವೇರ್‌ನಲ್ಲಿ (Times Square ) ಯುಎಸ್‌ಎ ಬೆಂಗಾಲಿ ಕ್ಲಬ್ (Bengali Club USA) ಆಯೋಜಿಸಿದ್ದ ದುರ್ಗಾ ಪೂಜೆಯ ವಿಡಿಯೋ (Durga Puja at Times Square) ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಸಾಕಷ್ಟು ಮಂದಿ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್‌ಗಳನ್ನು ಕೂಡ ಮಾಡಿದ್ದಾರೆ. ಟೈಮ್ಸ್‌ಸ್ಕ್ವೇರ್‌ನಲ್ಲಿ ಅದ್ಧೂರಿಯಾಗಿ ಎರಡು ದಿನಗಳ ಕಾಲ ನಡೆದ ದುರ್ಗಾ ಪೂಜೆಯು ಕೇವಲ ಭಾರತೀಯರನ್ನಷ್ಟೇ ಅಲ್ಲ ಅಮೆರಿಕನ್ನರನ್ನೂ ಸೆಳೆದಿದೆ. ಬಹುತೇಕ ಮಂದಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಗಮನ ಸೆಳೆದಿದ್ದಾರೆ.

ಈ ಕಾರ್ಯಕ್ರಮದ ಹಲವಾರು ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದುರ್ಗಾ ಪೂಜೆಯು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಾರಂಭವಾಯಿತು. ಭಾರತದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದ ಸಂಭ್ರಮ ನ್ಯೂಯಾರ್ಕ್ ನಗರವನ್ನು ತಲುಪಿರುವುದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆಕರ್ಷಕವಾದ ದುರ್ಗಾ ಪೆಂಡಾಲ್ ಅನ್ನು ಸಾಕಷ್ಟು ಮಂದಿ ಅಮೆರಿಕನ್ನರು ಕೂಡ ಮೆಚ್ಚಿದ್ದಾರೆ. ಕುತೂಹಲದಿಂದ ನಿಂತು ಈ ಪೆಂಡಾಲ್ ಅನ್ನು ನೋಡುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಲೈವ್‌ಬ್ಯಾಂಡ್ ಪ್ರದರ್ಶನ ಹಬ್ಬದ ಉತ್ಸಾಹ ಮತ್ತಷ್ಟು ಹೆಚ್ಚಿಸಿತು. ಮಹಿಳೆಯರು ಸಾಂಪ್ರದಾಯಿಕ ಧುನುಚಿ ನೃತ್ಯವನ್ನು ಪ್ರದರ್ಶಿಸಿದರು.

ಭಾರತೀಯ ಮೂಲದ ಕಂಟೆಂಟ್ ಕ್ರಿಯೇಟರ್ ಸುಮೋನಾ ಸೇಥ್ ಟೈಮ್ಸ್‌ಸ್ಕ್ವೇರ್‌ನಲ್ಲಿ ದುರ್ಗಾಪೂಜೆಗೆ ಹಾಜರಾಗಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇದು ಎರಡು ದೇಶಗಳ ನಡುವಿಂದ ಅಂತರವನ್ನು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.

Viral Video: ಸುಪ್ರೀಂ ಕೋರ್ಟ್‌ನಲ್ಲಿ ವಕೀಲರ ಬ್ಯಾಗನ್ನೇ ಎಗರಿಸಿದ ಕಳ್ಳ! ವಿಡಿಯೊ ನೋಡಿ

ಅನೇಕ ನೆಟ್ಟಿಗರು ಇದಕ್ಕೆ ಕಾಮೆಂಟ್ ಮಾಡಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದು ಉಲ್ಲೇಖಿಸಿದ್ದಾರೆ. ಒಬ್ಬರು ಇದು ಕೇವಲ ಆಚರಣೆಯಲ್ಲ.. ನಾವು ತಲೆಮಾರುಗಳವರೆಗೆ ಪಾಲಿಸಬೇಕಾದ ನೆನಪು ಎಂದು ಹೇಳಿದ್ದಾರೆ.