ಬೆಂಗಳೂರು: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ವತಿಯಿಂದ 2024-25 ನೇ ಸಾಲಿನ ಸಂಚಾರಿ ಕುರಿಗಾರರ ಗುರುತಿನ ಚೀಟಿ ಪಡೆಯಲು ಬೆಂಗಳೂರು ನಗರ (Bengaluru News) ಜಿಲ್ಲೆಯಲ್ಲಿರುವ ಕನಿಷ್ಠ 20 ಕ್ಕಿಂತ ಹೆಚ್ಚು ಕುರಿ/ಮೇಕೆಗಳನ್ನು ಹೊಂದಿರುವ ಅರ್ಹ ಸಂಚಾರಿ ಕುರಿಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Free Training: ಯುವ ಜನರೇ ಗಮನಿಸಿ; ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಸಂಚಾರ ಕುರಿಗಾರರ ಗುರುತಿನ ಚೀಟಿ ಪಡೆಯಲು ಕನಿಷ್ಠ 20ಕ್ಕಿಂತ ಹೆಚ್ಚು ಕುರಿ/ಮೇಕೆಗಳನ್ನು ಹೊಂದಿರಬೇಕು. ಸಂಚಾರಿ ಕುರಿಗಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಪಶು ಚಿಕಿತ್ಸಾಲಯ/ ಪಶು ಚಿಕಿತ್ಸಾಲಯ/ ಪಶು ಆಸ್ಪತ್ರೆಗಳ ಪಶು ವೈದ್ಯಾಧಿಕಾರಿಗಳು/ ಮುಖ್ಯ ಪಶು ವೈದ್ಯಾಧಿಕಾರಿಗಳನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ವಲಸೆ ಹೋಗುವುದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳಿಂದ ಮಹಜರ ಪ್ರಮಾಣ ಪತ್ರ ಪಡೆದು ಹಾಗೂ ಸಂಬಂಧಿಸಿದ ಪಶು ವೈದ್ಯಾಧಿಕಾರಿಗಳಿಂದ ಕನಿಷ್ಠ 20 ಕುರಿ/ಮೇಕೆಗಳನ್ನು ಹೊಂದಿರುವ ದೃಢೀಕರಣ ಪತ್ರ ಪಡೆದು ಸೂಕ್ತ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅದೇ ಪಶು ಚಿಕಿತ್ಸಾಲಯ/ ಪಶು ಆಸ್ಪತ್ರೆಯಲ್ಲಿ ಸಲ್ಲಿಸಬಹುದು.
ಈ ಸುದ್ದಿಯನ್ನೂ ಓದಿ | Job Alert: ಎಸ್ಎಸ್ಎಲ್ಸಿ ಪಾಸಾದವರಿಗೆ 39,481 ಹುದ್ದೆಗಳ ಲಭ್ಯತೆ; ಅ.14 ಅರ್ಜಿ ಸಲ್ಲಿಸಲು ಕೊನೇ ದಿನ
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ಉಪ ನಿರ್ದೇಶಕರ ಕಚೇರಿ ಬೆಂಗಳೂರು ವಿಭಾಗ ಅಥವಾ ದೂರವಾಣಿ ಸಂಖ್ಯೆ: 9740171450 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತದ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.