-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ನವರಾತ್ರಿಯ ಸಂಭ್ರಮಕ್ಕೆ (Navratri Celebration) ಸಾಥ್ ನೀಡುವಂತಹ ನಾನಾ ಬಗೆಯ ಕಲರ್‌ಫುಲ್ ಬ್ಯಾಂಗಲ್ಸ್ (Navaratri Bangles Trend 2024) ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಅವುಗಳಲ್ಲಿ 5 ಬಗೆಯವು ಸಖತ್ ಟ್ರೆಂಡಿಯಾಗಿವೆ. ಅವುಗಳ ಬಗ್ಗೆ ಜ್ಯುವೆಲ್ ಸ್ಟೈಲಿಸ್ಟ್ ಧನ್ಯಾ ಒಂದಿಷ್ಟು ಡಿಟೇಲ್ಸ್ ನೀಡಿದ್ದಾರೆ. ಸಖತ್ ಟ್ರೆಂಡಿಯಾಗಿರುವ ಬ್ಯಾಂಗಲ್‌ಗಳಿವು . ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಳಿ, ಪಿಂಕ್, ರೆಡ್ ಹಳದಿ ಕಲರ್ ಹೀಗೆ ಎಲ್ಲಾ ಬಗೆಯ ಬಣ್ಣಗಳಲ್ಲೂ ಇವು ದೊರೆಯುತ್ತಿವೆ.
ಆಕ್ಸಿಡೈಸ್ಡ್ ಸಿಲ್ವರ್ ಕಡ/ಬಳೆಗಳು
ಆಕ್ಸಿಡೈಸ್ಡ್ ಸಿಲ್ವರ್ ಬಿಗ್ ಕಡ/ಬಳೆಗಳು ಜಂಕ್ ಜ್ಯುವೆಲರಿ ಕೆಟಗರಿಯಲ್ಲಿ ಬರುತ್ತವಾದರೂ ಈ ಸೀಸನ್‌ನಲ್ಲಿ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುತ್ತಿವೆ. ಇವುಗಳ ಹೈಲೈಟ್ ಹೆವ್ವಿ ಡಿಸೈನ್ ಹೊಂದಿರುವುದು.
ಸಿಲ್ಕ್ ಥ್ರೆಡ್ ಬ್ಯಾಂಗಲ್ಸ್
ಹನ್ನೆರೆಡು ಹಾಗೂ ಆರು ಬ್ಯಾಂಗಲ್‌ಗಳ ಸೆಟ್‌ನಲ್ಲಿ ದೊರೆಯುವ ಇವನ್ನು ರೇಷ್ಮೆ ದಾರದಿಂದ ಸಿದ್ಧಪಡಿಸಲಾಗಿರುತ್ತದೆ. ಹಾಗಾಗಿ ಇವು ಶೈನಿಂಗ್ ಹೊಂದಿರುತ್ತವೆ. ಅಲ್ಲದೇ ಸಾಂಪ್ರದಾಯಿಕ ಲುಕ್‌ಗೆ ಸಾಥ್ ನೀಡುತ್ತವೆ. ಎಲ್ಲಾ ಬಣ್ಣದಲ್ಲೂ ಇವು ಲಭ್ಯ.
ಮಿರರ್ ಬ್ಯಾಂಗಲ್ಸ್/ಕಡ
ಚಿಕ್ಕ ಚಿಕ್ಕ ಮಿರರ್ ಅಥವಾ ಮೈಕಾದಂತಹ ಮೆಟಿರಿಯಲ್ ಅಂಟಿಸಿ ಸಿದ್ಧಪಡಿಸಿರುವಂತಹ ಬಳೆಗಳಿವು. ಇವು ಕೂಡ ಡಿಸೈನರ್‌ವೇರ್‌ಗೆ ಗ್ರ್ಯಾಂಡ್ ಲುಕ್ ನೀಡುತ್ತವೆ. ಆದರೆ, ಇವುಗಳನ್ನು ಧರಿಸಿದಾಗ ಆದಷ್ಟೂ ಜಾಗ್ರತೆ ವಹಿಸಬೇಕು. ಇಲ್ಲವಾದಲ್ಲಿ ಧರಿಸಿರುವ ಉಡುಪಿಗೆ ತಾಗಿ ಕಿತ್ತು ಹೋಗುವ ಸಾಧ್ಯತೆಗಳಿರುತ್ತವೆ.
ಹ್ಯಾಂಡ್ ಮೇಡ್ ವೂಲ್ ಬ್ಯಾಂಗಲ್ಸ್ ಸೆಟ್
ಮೆಟಲ್ ಬ್ಯಾಂಗಲ್ಸ್ ಅಲರ್ಜಿ ಎಂಬುವವರಿಗೆಂದೇ ಇದೀಗ ಸಾಫ್ಟ್ ಫೀಲಿಂಗ್ ನೀಡುವ ವೂಲ್ ಫ್ಯಾಬ್ರಿಕ್ ಬ್ಯಾಂಗಲ್ ಸೆಟ್‌ಗಳು ಬಂದಿವೆ. ಇವು ಕೂಡ ಆಕರ್ಷಕ ಕಲರ್ ಹಾಗೂ ಡಿಸೈನ್‌ನಲ್ಲಿ ದೊರೆಯುತ್ತಿವೆ.
ಈ ಸುದ್ದಿಯನ್ನೂ ಓದಿ | Kannada New Movie: ಟ್ರೇಲರ್‌ನಲ್ಲೇ ಭರವಸೆ ಮೂಡಿಸಿರುವ “ಸಂತೋಷ ಸಂಗೀತ” ಸಿನಿಮಾ ಸದ್ಯದಲ್ಲೇ ರಿಲೀಸ್
ಬ್ಯಾಂಗಲ್ಸ್ ಪ್ರಿಯರಿಗೆ ಒಂದಿಷ್ಟು ಡಿಟೇಲ್ಸ್
ನವರಾತ್ರಿಯಲ್ಲಿ ಕಾಂಟ್ರಾಸ್ಟ್ ಬ್ಯಾಂಗಲ್ಸ್ ಬೇಡ.
ಕಡಗಗಳನ್ನು ಸೆಟ್ ಬ್ಯಾಂಗಲ್ಸ್ ಮಧ್ಯೆ ಧರಿಸಬಹುದು.
ಫಿನಿಶಿಂಗ್ ಇರುವಂತಹ ಬಳೆಗಳನ್ನೇ ಆಯ್ಕೆ ಮಾಡಿ. ಇಲ್ಲವಾದಲ್ಲಿ ಮೈ ಕೈಗೆ ಚುಚ್ಚಬಹುದು. ಧರಿಸುವ ಸೀರೆ ಹಾಗೂ ಔಟ್‌ಫಿಟ್‌ಗಳು ಕಿತ್ತುಹೋಗಬಹುದು.
ಆಕ್ಸಿಡೈಸ್ಡ್ ಹಾಗೂ ಸಿಲ್ವರ್‌ನವನ್ನು ವೆಸ್ಟರ್ನ್ ಔಟ್‌ಫಿಟ್‌ಗೂ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)