ಕನ್ನಡ ಬಿಗ್ ಬಾಸ್ ಸೀಸನ್ 11 (Bigg Boss Kannada) ಶುರುವಾಗಿ 12 ದಿನವಾಗಿದ್ದು ರೋಚಕತೆ ಪಡೆಯುತ್ತಿದೆ. ಮೊದಲ ವಾರ ಹೆಚ್ಚು ಜಗಳಗಳಿಂದಲೇ ಸದ್ದು ಮಾಡಿದ ಮನೆ ಈಗ ಟಾಸ್ಕ್ನಲ್ಲಿ ಬ್ಯುಸಿಯಾಗಿದೆ. ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದು, ಸಣ್ಣದಾಗಿ ಗ್ರೂಪ್ ಕೂಡ ಹುಟ್ಟಿಕೊಂಡಿದೆ. ಇವುಗಳ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದೆಯಾ ಎಂಬ ಅನುಮಾನ ಮೂಡಿದೆ. ಮನೆಯಲ್ಲಿ ಭೂತದ ಕಾಟ ಇದೆ ಎಂದು ಸ್ಪರ್ಧಿಗಳು ಹೆದರುತ್ತಿದ್ದಾರೆ. ಈ ಕುರಿತು ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಸ್ವರ್ಗ ನಿವಾಸಿಗಳಾದ ಭವ್ಯಾ, ತ್ರಿವಿಕ್ರಮ್, ಹಂಸ, ರಂಜಿತ್, ಕೀರ್ತಿ, ಗೌತಮಿ ಜಾಧವ್, ಧನರಾಜ್ ಒಂದೆಡೆ ಕೂತು ಮಾತನಾಡುತ್ತಿರುತ್ತಾರೆ. ಇದೇ ವೇಳೆ ಅಡುಗೆ ಮನೆಯಲ್ಲಿನ ಪಿಂಗಾಣಿ ತಟ್ಟೆಯೊಂದು ಕೆಳಕ್ಕೆ ಬಿದ್ದು ಒಡೆದಿದೆ. ತಟ್ಟೆ ಬಿದ್ದ ಸಪ್ಪಳಕ್ಕೆ ಗಾಬರಿಯಲ್ಲಿಯೇ ಮನೆಮಂದಿ ಎದ್ದು ಅಡುಗೆ ಕೋಣೆಯತ್ತ ಓಡಿ ಬರುತ್ತಾರೆ. ಆದರೆ, ಅಲ್ಲಿ ಯಾರೂ ಕೂಡ ಇರುವುದಿಲ್ಲ. ಬಿದ್ದ ತಟ್ಟೆಯ ತುಣುಕುಗಳನ್ನು ತುಂಬಿ ಡಸ್ಟ್ಬಿನ್ಗೆ ಹಾಕಿ ಇತ್ತ ಬರುತ್ತಿದ್ದಂತೆ, ಮತ್ತೊಂದು ತಟ್ಟೆ ಬಿದ್ದ ಸದ್ದಾಗಿದೆ.
ಬಿಗ್ ಬಾಸ್ ಮನೆಯಲ್ಲಿ ನಡೆದ ಈ ಘಟನೆಯಿಂದ ಎಲ್ಲರೂ ಗಾಬರಿಯಾಗಿದ್ದಾರೆ. ಅಯ್ಯೋ ಈ ಮನೆಯಲ್ಲಿ ದೆವ್ವ ಇದೆ ಅಂತ ಅನಿಸ್ತಿದೆ ಎಂದು ಐಶ್ವರ್ಯಾ ಸಿಂಧೋಗಿ ಹೇಳಿದ್ದಾರೆ. ನನ್ನ ತಲೆಯಲ್ಲಿ ಅದೇ ಓಡ್ತಿದೆ. ನನಗೆ ಈ ಮನೆಯಲ್ಲಿ ಯಾವುದೂ ಸೂಪರ್ ನ್ಯಾಚುಲರ್ ಆಕ್ಟಿವಿಟಿ ಆಗ್ತಿದೆಯಾ ಎಂದು ಅನಿಸ್ತಿದೆ ಎಂದು ಸರ್ಧಿಗಳು ಹೇಳಿದ್ದಾರೆ. ಆದರೆ, ನೆಗೆಟಿವ್ ಎನರ್ಜಿ ಡೆಸ್ಟ್ರಾಯ್ ಆಗ್ತಿದೆ ಅಂತ ಅಂದುಕೊಳ್ಳಿ, ದೆವ್ವ ಗಿವ್ವ ಇಲ್ಲ. ಯಾವುದೇ ಸ್ಥಳದಲ್ಲಿಯೂ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿ ಇದ್ದೇ ಇರುತ್ತದೆ ಎಂದು ಗೌತಮಿ ಹೇಳಿದ್ದಾರೆ.
ನಿಗೂಢವಾಗಿ ಒಡೀತಿವೆ ತಟ್ಟೆಗಳು; ಸದಸ್ಯರ ಎದೆಯಲ್ಲಿ ಢವಢವ!
— Colors Kannada (@ColorsKannada) October 9, 2024
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/zLHcHlE2Zg
ಕ್ಯಾಪ್ಟನ್ ಹಂಸ ವಿರುದ್ಧ ಮನೆ ಮಂದಿ ಗರಂ: ಟಾಸ್ಕ್ ಮಧ್ಯೆ ಕ್ಯಾಪ್ಟನ್ ಹಂಸ ಅವರು ತೆಗೆದುಕೊಂಡ ಕೆಲ ನಿರ್ಧಾರಗಳು ಮನೆಯಲ್ಲಿ ಭಾರೀ ಚರ್ಚೆ ಆಗುತ್ತಿವೆ. ಸ್ವರ್ಗ ಮತ್ತು ನರಕ ವಾಸಿಗಳು ಎರಡೂ ತಂಡದವರು ಕ್ಯಾಪ್ಟನ್ ಹಂಸ ನೀಡಿದ ನಿರ್ಧಾರದಿಂದ ಗರಂ ಆಗಿದ್ದು, ಜೋರು ಗಲಾಟೆ ನಡೆದಿದೆ. ಟಾಸ್ಕ್ ಮಧ್ಯೆ ‘ಕಣ್ಣಿಲ್ವಾ ನಿಮಗೆ ನೋಡೋಕೆ’ ಎಂದು ಜಗದೀಶ್ ಅವರು ಕ್ಯಾಪ್ಟನ್ಗೆ ಬೈದಿದ್ದಾರೆ. ಯಾವ ಸೀಮೆ ಕ್ಯಾಪ್ಟನ್ ರೀ ನೀವು ಎಂದು ಚೈತ್ರಾ ಕುಂದಾಪುರ ಸಿಟ್ಟಾಗಿದ್ದಾರೆ. ಮಾನಸಾ, ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಕೂಡ ಕ್ಯಾಪ್ಟನ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
Bigg Boss Kannada 11: ಬಿಗ್ ಬಾಸ್ನಲ್ಲಿ ನಾಮಿನೇಷನ್ ಟ್ವಿಸ್ಟ್: ಚೈತ್ರಾ ಕುಂದಾಪುರ ಸೇಫ್?