-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ 9ನೇ ದಿನ(ಶುಕ್ರವಾರ) ನೇರಳೆ ಬಣ್ಣಕ್ಕೆ ಆದ್ಯತೆ. ತಾಯಿ ಸಿದ್ಧಿಧಾತ್ರಿ ಮಾತೆಯನ್ನು ಈ ಬಣ್ಣದ ಸೀರೆಯಲ್ಲಿ ಅಲಂಕರಿಸಿ ಪೂಜಿಸುವ ದಿನವಿದು. (Navaratri Colour Tips) ಕಂಪ್ಲೀಟ್ ನೇರಳೆ ಬಣ್ಣದ ಸೀರೆಯಲ್ಲಿ ಅಲಂಕೃತಳಾಗಿರುವ ದೇವಿ ಮೆಚ್ಚಿಸಲು ಈ ದಿನ ಮೀಸಲಾಗಿದೆ. ನೇರಳೆ ಬಣ್ಣ ನೋಡಲು ತೀರಾ ಗಾಢವೆನಿಸಿದರೂ ಸೂಕ್ತ ಸ್ಟೈಲಿಂಗ್ ಮಾಡಿದಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಇಮೇಜ್ ಸ್ಟೈಲಿಸ್ಟ್ ಸರಸು.
ಟ್ರೆಂಡಿಯಾಗಿರುವ ನೇರಳೆ ಬಣ್ಣದ ಡಿಸೈನರ್‌ವೇರ್ಸ್ ಮತ್ತು ಸೀರೆಗಳು
ಈಗಾಗಲೇ ಮಾರುಕಟ್ಟೆಯಲ್ಲಿ ನೇರಳೆ ಬಣ್ಣದ ಸೀರೆಗಳು ಹಾಗೂ ಎಥ್ನಿಕ್‌ವೇರ್‌ಗಳು ಸಾಕಷ್ಟು ಬಿಡುಗಡೆಗೊಂಡಿವೆ. ಗಾಢ ಬಣ್ಣದಿಂದಿಡಿದು ತಿಳಿ ನೇರಳೆ ಬಣ್ಣದ ರೇಷ್ಮೆ ಸೀರೆಗಳು, ಕಾರ್ಪೋರೇಟ್ ಕ್ಷೇತ್ರದವರು, ಉದ್ಯೋಗಸ್ಥ ಮಹಿಳೆಯರು ಉಡಬಹುದಾದ ಲೈಟ್‌ವೈಟ್ ಶಿಫಾನ್, ಜಾರ್ಜೆಟ್, ಅರ್ಗಾನ್ಜಾ, ಟಿಶ್ಯೂ ಸೀರೆಗಳು ಸಾಲಿಡ್ ಶೇಡ್‌ನಲ್ಲಿ ಚಾಲ್ತಿಯಲ್ಲಿವೆ. ಇನ್ನು, ಪರ್ಪಲ್ ಕೋ -ಆರ್ಡ್ ಸೆಟ್, ಡಿಸೈನರ್ ಶರಾರ, ಸೆಲ್ವರ್, ಚೂಡಿದಾರ್ ಕೂಡ ಎಂತಹವರನ್ನೂ ಆಕರ್ಷಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ನೇರಳೆ ಬಣ್ಣದ ಸೀರೆಯ ಸೊಬಗಿಗೆ ಟಿಪ್ಸ್
ಈ ಕಲರ್‌ನ ಸೀರೆ ಎದ್ದು ಕಾಣಿಸುವುದರಿಂದ ಆದಷ್ಟೂ ಲೈಟಾಗಿ ಮೇಕಪ್ ಮಾಡಿ. ಇನ್ನು, ಗೋಲ್ಡ್ ಸಿಲ್ವರ್ ಜ್ಯುವೆಲರಿಗಳನ್ನು ಮ್ಯಾಚ್ ಮಾಡಿ. ಬಾರ್ಡರ್ ರೇಷ್ಮೆ ಸೀರೆಗಳಾದಲ್ಲಿ, ಟ್ರೆಡಿಷನಲ್ ಲುಕ್ ನೀಡಿ. ಹುಡುಗಿಯರು ಇಂಡೋ-ವೆಸ್ಟರ್ನ್ ಲುಕ್ ನೀಡಿ. ಪರ್ಪಲ್ ಹೆಚ್ಚು ಕಮ್ಮಿ ನೀಲಿ ಬಣ್ಣದಂತೆಯೇ ಕಾಣಿಸುವುದು ಹಾಗಾಗಿ ಕನ್‌ಫ್ಯೂಸ್ ಆಗದೇ ಈ ವರ್ಣವನ್ನು ಕಂಡುಹಿಡಿದು, ವಿಭಿನ್ನವಾಗಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್ ದೀಕ್ಷಾ.
ಹಳೆ ಡಿಸೈನರ್‌ವೇರ್‌ಗೆ ನಯಾ ಲುಕ್
ಹಳೆಯ ಡಿಸೈನರ್‌ವೇರ್ ಇದ್ದಲ್ಲಿ ಅದಕ್ಕೆ ಕಂಪ್ಲೀಟ್ ಹೊಸ ಲುಕ್ ನೀಡಿ. ನಿಮ್ಮ ಹೇರ್‌ಸ್ಟೈಲ್ ಹಾಗೂ ಮೇಕಪ್ ನಿಮ್ಮ ಲುಕ್ ಬದಲಿಸಬಹುದು. ಟ್ರೈ ಮಾಡಿ. ಸ್ಟೈಲಿಸ್ಟ್‌ಗಳ ಸಲಹೆ ಪಡೆಯಿರಿ.
ಈ ಸುದ್ದಿಯನ್ನೂ ಓದಿ | Navaratri Bangles Trend 2024: ನವರಾತ್ರಿ ಸಂಭ್ರಮಕ್ಕೆ ಜತೆಯಾದ 5 ಡಿಸೈನ್‌ನ ಕಲರ್‌ಫುಲ್ ಬ್ಯಾಂಗಲ್ಸ್
ಪರ್ಪಲ್ ಸ್ಟೈಲಿಂಗ್ ಟಿಪ್ಸ್
ಹಣೆಗೆ ನೇರಳೆ ವರ್ಣದ ಬಂಗಾಲಿ ಬಿಂದಿ ಇಡಿ. ಅಂದ ಹೆಚ್ಚುತ್ತದೆ.
ಮೆಸ್ಸಿ ಬನ್, ಬ್ರೈಡ್ ಹೇರ್‌ಸ್ಟೈಲ್ ಚೆನ್ನಾಗಿ ಕಾಣುತ್ತದೆ.
ಸೀರೆಯ ಫ್ಯಾಬ್ರಿಕ್‌ಗೆ ತಕ್ಕಂತೆ ಡ್ರೇಪಿಂಗ್ ಮಾಡಿ.
ಸರಿಯಾದ ಮ್ಯಾಚಿಂಗ್ ಹಾಗೂ ಡ್ರೆಸ್ಸಿಂಗ್ ಮಾಡಿದಲ್ಲಿ, ರೇಷ್ಮೆ ಸೀರೆಯಲ್ಲಿ ದೇವತೆಯಂತೆ ಕಾಣಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)