ಮಂಡ್ಯ: ಮಂಡ್ಯ ಜಿಲ್ಲೆಯ (Mandya News) ವ್ಯಕ್ತಿಯೊಬ್ಬರಿಗೆ ಕೇರಳ ಲಾಟರಿಯ (Kerala Lottery) ಮೂಲಕ 25 ಕೋಟಿ ರೂಪಾಯಿ ಒಲಿದುಬಂದಿದೆ. 500 ರೂಪಾಯಿ ಕೊಟ್ಟು ಕೇರಳದ ಲಾಟರಿ ಟಿಕೆಟ್ ಖರೀದಿಸಿದ್ದ ಸ್ಕೂಟರ್ ಮೆಕ್ಯಾನಿಕ್ಗೆ ಬಂಪರ್ ಲಕ್ ಹೊಡೆದಿದೆ.
ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಈ ಯುವಕನ ಹೆಸರು ಅಲ್ತಾಫ್. ಈತ ಪಾಂಡವಪುರ ನಗರದ ಸ್ಕೂಟರ್ ಮೆಕ್ಯಾನಿಕ್ ಆಗಿದ್ದಾರೆ. ಇತ್ತೀಚೆಗೆ ಕೇರಳಕ್ಕೆ ಹೋಗಿದ್ದ ವೇಳೆ ಅಲ್ತಾಫ್ 500 ರೂ. ಕೊಟ್ಟು ಲಾಟರಿ ಖರೀದಿದ್ದರು. ಅಲ್ತಾಫ್ ಖರೀದಿಸಿದ್ದ ಆ ಲಾಟರಿ ಟಿಕೆಟ್ ಗೆ 25 ಕೋಟಿ ರೂ. ಬಂಪರ್ ಬಹುಮಾನ ಬಂದಿದೆ.
ತೆರಿಗೆ ಕಳೆದು ಅಲ್ತಾಫ್ ಗೆ ಸುಮಾರು 17.5 ಕೋಟಿ ರೂ ಸಿಗಲಿದೆ. ಕೋಟಿ ರೂ. ಬಹುಮಾನದ ಹಣ ತರಲು ಕೇರಳಕ್ಕೆ ಅಲ್ತಾಫ್ ಹಾಗೂ ಕುಟುಂಬ ದೌಡಾಯಿಸಿದೆ. ಈ ಮೂಲಕ ಕೇರಳದ ಲಾಟರಿ ಭಾಗ್ಯದಲ್ಲಿ ಮಂಡ್ಯದ ಪಾಂಡವಪುರದ ಬಡ ಮೆಕ್ಯಾನಿಕ್ ಈಗ ಕೋಟ್ಯಾಧಿಪತಿಯಾಗಿದ್ದಾರೆ.
ಕೇರಳ ಸರ್ಕಾರದ ಆಡಳಿತದಡಿಯಲ್ಲಿ ಲಾಟರಿ ಕಾನೂನುಬದ್ಧವಾಗಿದೆ. ಕರ್ನಾಟಕದಲ್ಲಿ ಲಾಟರಿಯನ್ನು ನಿರ್ಬಂಧಿಸಲಾಗಿದೆ. ಕೇರಳದಿಂದ ಲಾಟರಿ ಖರೀದಿಸಿದ ಹಲವು ಕನ್ನಡಿಗರು ಬಂಪರ್ ಬಹುಮಾನ ಪಡೆದ ಸುದ್ದಿಗಳು ಆಗೀಗ ಬರುತ್ತಿರುತ್ತವೆ. ಕೇರಳ ಲಾಟರಿ ಆನ್ಲೈನ್ನಲ್ಲಿ ಸಿಗುವುದಿಲ್ಲ. ಅಂಗಡಿಗಳಲ್ಲಿ ಮಾತ್ರ ಮಾರಲ್ಪಡುತ್ತದೆ.
ಇದನ್ನೂ ಓದಿ: Viral News: 20 ವರ್ಷಗಳಿಂದ ಒಂದೇ ಸಂಖ್ಯೆಯ ಲಾಟರಿ ಖರೀದಿಸಿ ಕೊನೆಗೂ 8 ಕೋಟಿ ರೂ. ಗೆದ್ದ