ಮಾನವನ ಹೊಟ್ಟೆಯಲ್ಲಿರುವ ಆಮ್ಲಕ್ಕೆ (New Experiment) ಒಂದೆರಡು ಗಂಟೆಗಳಲ್ಲಿ ಬ್ಲೇಡ್ (blade) ಅನ್ನೂ ಕರಗಿಸುವ ಸಾಮರ್ಥ್ಯವಿದೆ. ಹೊಟ್ಟೆಯಲ್ಲಿರುವ ಗ್ಯಾಸ್ಟ್ರಿಕ್ ರಸದ ಆಮ್ಲಿಯತೆ (stomach acid) ಮೌಲ್ಯ 1- 2 ಪಿಹೆಚ್ ನಡುವೆ ಇರುತ್ತದೆ. ಇದರಲ್ಲಿ ಬ್ಲೇಡ್ ಅನ್ನು ಹಾಕಿದರೆ ಅದರ ಒಂದು ಬದಿ ಕರಗಲು ಎರಡು ಗಂಟೆ ಸಾಕು ಎನ್ನಲಾಗುತ್ತದೆ. ಹೊಟ್ಟೆಯಲ್ಲಿರುವ ಆಮ್ಲಗಳು ನಾಶ ಮಾಡುವ ಸಾಮರ್ಥ್ಯವುಳ್ಳ ದ್ರವವಾಗಿದೆ. ಇದು ಜೀವಂತ ಅಂಗಾಂಶ, ಸಾವಯವ ಸಂಯುಕ್ತ ಮತ್ತು ಲೋಹದ ರಾಸಾಯನಿಕ ರಚನೆಯನ್ನು ಒಡೆಯುತ್ತದೆ.
ಗ್ಯಾಸ್ಟ್ರಿಕ್ ರಸದ ಆಮ್ಲವನ್ನು ಪಿಎಚ್ ಪ್ರಮಾಣದಲ್ಲಿ ಅಳೆಯಲಾಗುತ್ತದೆ. ಇದು ಸೊನ್ನೆಯಿಂದ 14ರವರೆಗೆ ಇರುತ್ತದೆ. ಇಲ್ಲಿ ಸೊನ್ನೆ ಎಂಬುದು ಹೆಚ್ಚು ಆಮ್ಲೀಯ ಎಂದು ಪರಿಗಣಿಸಲಾಗಿದೆ. ಗ್ಯಾಸ್ಟ್ರಿಕ್ ಆಮ್ಲ ಮತ್ತು ಗ್ಯಾಸ್ಟ್ರಿಕ್ ಜ್ಯೂಸ್ ಎಂದು ಕರೆಯಲ್ಪಡುವ ಹೊಟ್ಟೆಯ ಆಮ್ಲವು ಹೊಟ್ಟೆಯ ಒಳಪದರದಿಂದ ಉತ್ಪತ್ತಿಯಾಗುತ್ತದೆ. ಇದು 1.5ರಿಂದ 3.5ರ ಕಡಿಮೆ ಪಿಎಚ್ ಅನ್ನು ಹೊಂದಿದೆ. ಅಂದರೆ ಇದು ಹೆಚ್ಚು ಆಮ್ಲೀಯವಾಗಿದೆ. ನಾವು ಸೇವಿಸುವ ಆಹಾರವನ್ನು ಇದು ಒಡೆಯುತ್ತದೆ. ನಮ್ಮ ದೇಹವು ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿರುವ ಗ್ಯಾಸ್ಟ್ರಿಕ್ ಆಮ್ಲದ ಪ್ರಮುಖ ಅಂಶವೆಂದರೆ ಹೈಡ್ರೋಕ್ಲೋರಿಕ್ ಆಮ್ಲ. ಇದನ್ನು ಉಕ್ಕನ್ನು ಸಂಸ್ಕರಿಸಲು ಕೈಗಾರಿಕೆಗಳಲ್ಲಿ ಬಳಸುವ ಹೆಚ್ಚು ಬಲವಾದ ನಾಶಕಾರಿ ಆಮ್ಲ ಎನ್ನಲಾಗಿದೆ.
ವಿಜ್ಞಾನಿಗಳು ಹೇಳುವುದೇನು?
ನಮ್ಮ ಹೊಟ್ಟೆಯಲ್ಲಿರುವ ಆಮ್ಲವು ಲೋಹವನ್ನು ಕರಗಿಸುತ್ತದೆ ಎನ್ನುತ್ತಾರೆ ಹಲವಾರು ವಿಜ್ಞಾನಿಗಳು. ಆದರೆ ಯಾವ ಲೋಹವನ್ನು ಹೊಟ್ಟೆಯೊಳಗೆ ಕರಗಿಸಬಹುದು ಎನ್ನುವುದಕ್ಕೆ ಅವರು ಯಾವುದೇ ಸ್ಪಷ್ಟತೆ ನೀಡಿಲ್ಲ.
ರಾಸಾಯನಿಕ ಅಂಶಗಳಲ್ಲಿ ಬಹುತೇಕ ಲೋಹಗಳೆಂದರೆ ಅಲ್ಯೂಮಿನಿಯಂ, ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಶಿಯಮ್ ಮತ್ತು ಮೆಗ್ನೀಶಿಯಮ್.
ಪರೀಕ್ಷೆಯಲ್ಲಿ ಏನಾಯ್ತು?
1997ರ ಅಧ್ಯಯನದಲ್ಲಿ ವಿಜ್ಞಾನಿಗಳು ಬ್ಲೇಡ್, ಡಿಸ್ಕ್ ಬ್ಯಾಟರಿ ಮತ್ತು ನಾಣ್ಯಗಳನ್ನು “ಸಿಮ್ಯುಲೇಟೆಡ್ ಗ್ಯಾಸ್ಟ್ರಿಕ್ ಜ್ಯೂಸ್” ನಲ್ಲಿ ಹಾಕಿ ಅದರ ಪರಿಣಾಮಗಳನ್ನು ವೀಕ್ಷಿಸಿದರು. ಇದು ಹೊಟ್ಟೆಯ ಆಮ್ಲದಂತ ಗುಣಲಕ್ಷಣಗಳನ್ನು ಹೊಂದಿದೆ.
24 ಗಂಟೆಗಳ ಅನಂತರ ಅದರಲ್ಲಿ ಬ್ಲೇಡ್ಗಳು ಅವುಗಳ ಮೂಲ ತೂಕದ ಶೇ. 63ರಷ್ಟಿದ್ದವು. ಅಂದರೆ ಆಮ್ಲವು ಲೋಹದ ಮೂರನೇ ಒಂದು ಭಾಗವನ್ನು ಒಡೆಯಿತು. ಆದರೆ ಬ್ಯಾಟರಿಗಳಿಂದ ಯಾವುದೇ ಕರಗುವಿಕೆಯನ್ನು ಪತ್ತೆ ಮಾಡಲಾಗಿಲ್ಲ. ಅಂದರೆ ಈ ಆಮ್ಲವು ನಾಣ್ಯಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಾವು ತಿನ್ನುವ ವಸ್ತುಗಳು ಸಣ್ಣ ಕರುಳಿಗೆ ಚಲಿಸುವ ಮೊದಲು ಕೇವಲ 30ರಿಂದ 120 ನಿಮಿಷಗಳ ಕಾಲ ಹೊಟ್ಟೆಯಲ್ಲಿ ಇರುತ್ತವೆ. ಹೊಟ್ಟೆಯ ಆಮ್ಲವು ಲೋಹದ ಮೇಲೆ ಪರಿಣಾಮ ಬೀರಲು ಈ ಸಮಯ ಸಾಕಾಗುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.
ಹೊಟ್ಟೆಯ ಆಮ್ಲವು ಲೋಹವನ್ನು ಕರಗಿಸಬಹುದಾದರೂ ಅದನ್ನು ಹೊಟ್ಟೆಯೊಳಗೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಲೋಹದ ವಸ್ತುಗಳನ್ನು ಸೇವನೆ ಅಪಾಯಕಾರಿಯಾಗಿದೆ.