ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಶುರುವಾಗಿ ಎರಡು ವಾರಗಳಾಗುತ್ತಾ ಬರುತ್ತಿದೆ. ಈ ಬಾರಿ ಮೊದಲ ವಾರದಲ್ಲೇ ಹಿಂದೆಂದೂ ನಡೆಯದಷ್ಟು ಜಗಳಗಳು ಆಗಿವೆ. ಸ್ವರ್ಗ ವಾಸಿಗಳು ಮತ್ತು ನರಕ ವಾಸಿಗಳು ಎಂಬ ಕಾನ್ಸೆಪ್ಟ್ನಲ್ಲಿ ಪ್ರಾರಂಭಗೊಂಡ ಬಿಗ್ ಬಾಸ್ಗೆ ಭರ್ಜರಿ ರೆಸ್ಪಾನ್ಸ್ ಕೂಡ ಕೇಳಿ ಸಿಕ್ಕಿದೆ. ಇದೀಗ ಬಿಗ್ ಬಾಸ್ ಕನ್ನಡ 11ರ ಟಿಆರ್ಪಿ ಹೊರಬಿದ್ದಿದ್ದು, ದಾಖಲೆ ನಿರ್ಮಾಣವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಈ ಬಾರಿ ಅದ್ದೂರಿಯಾಗಿ ಲಾಂಚ್ ಆಗಿತ್ತು. ಮನೆಯೊಳಗೆ ಹೆಚ್ಚು ಜಗಳಗಳೇ ನಡೆಯುತ್ತಿದ್ದರೂ ವೀಕ್ಷಕರು ಅದನ್ನೇ ಮೆಚ್ಚಿಕೊಂಡಿದ್ದಾರೆ. ಗ್ರ್ಯಾಂಡ್ ಓಪನಿಂಗ್ ದಿನ ಬಿಗ್ ಬಾಸ್ಗೆ 9.9 ಟಿಆರ್ಪಿ ಸಿಕ್ಕಿದೆ. ಬಿಗ್ ಬಾಸ್ ಲಾಂಚ್ ದಿನ ಇಷ್ಟು ದೊಡ್ಡ ಮಟ್ಟದ ಟಿಆರ್ಪಿ ಸಿಕ್ಕಿದ್ದು ಇದೇ ಮೊದಲು ಎನ್ನಲಾಗಿದೆ.
ಇನ್ನು ಬಿಗ್ ಬಾಸ್ಗೆ ವಾರದ ದಿನಗಳಲ್ಲಿ 6.9 ಟಿಆರ್ಪಿ ದೊರೆತಿದೆ. ಈ ಬಾರಿಯ ಸೀಸನ್ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಹೀಗಾಗಿ ವಾರಗಳು ಕಳೆದಂತೆ ಟಿಆರ್ಪಿ ಹೆಚ್ಚುತ್ತಾ ಹೋಗುವ ಸಾಧ್ಯತೆ ಇದೆ. ಅಲ್ಲದೆ ಬಿಗ್ ಬಾಸ್ನ ಎಲ್ಲರೂ ವೀಕ್ಷಿಸುತ್ತಿರುವುದಕ್ಕೆ ಇದೇ ಸಮಯದಲ್ಲಿ ಪ್ರಸಾರ ಆಗುವ ಸೀತಾ ರಾಮ ಧಾರಾವಾಹಿಯ ಟಿಆರ್ಪಿಯಲ್ಲಿ ಕುಸಿತ ಕಂಡಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಮೊದಲ ಸ್ಥಾನದಲ್ಲಿ ಇದೆ. ಕಳೆದ ವಾರ ಈ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇತ್ತು. ಈ ವಾರ ಎರಡನೇ ಸ್ಥಾನದಲ್ಲಿ ಅಮೃತಧಾರೆ ದಾರಾವಾಹಿ ಇದೆ. ಗೌತಮ್ ಹಾಗೂ ಮನೆಯವರ ಮುಂದೆ ಜೈದೇವ್ ಮುಖವಾಡ ಕಳಚಿ ಬಿದ್ದಿದೆ. ಹೀಗಾಗಿ ಈ ಧಾರಾವಾಹಿ ಪ್ರಮುಖ ಘಟ್ಟದಲ್ಲಿದ್ದು, ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
ಮೂರನೇ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೆ. ಸಮಯ ಬದಲಾವಣೆಯ ಹೊರತಾಗಿಯೂ ಈ ಧಾರಾವಾಹಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಜನರು ಕುತೂಹಲದಿಂದ ಈ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಇದೆ. ಐದನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಇದೆ.
BBK 11: ನಾಮಿನೇಷನ್ನಿಂದ ಬಚಾವ್ ಆಗಲು ಹರಸಾಹಸ: ಕ್ಯಾಪ್ಟನ್ ವಿರುದ್ಧ ರೊಚ್ಚಿಗೆದ್ದ ಸ್ವರ್ಗ ವಾಸಿಗಳು