-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ದಸರಾ ಹಾಲಿಡೇ ವೀಕೆಂಡ್ನಲ್ಲಿ (Dasara Holiday Fashion 2024) ಆಗಮಿಸಿದೆ. ಬಹುತೇಕ ಮಂದಿ ಹಬ್ಬಕ್ಕೆ ಮುನ್ನವೇ ಇಲ್ಲವೇ ನಂತರ ಹಾಲಿಡೇ ಟೂರ್ ಅಥವಾ ಟ್ರಿಪ್ಗೆ ತೆರಳುತ್ತಾರೆ. ಅಂತಹವರಿಗೆಂದೇ ಈಗಾಗಲೇ ಸಾಕಷ್ಟು ಬಗೆಯ ಈ ಸೀಸನ್ಗೆ ಹೊಂದುವಂತಹ ಹಾಲಿಡೇ ಔಟ್ಫಿಟ್ಸ್ ಬಿಡುಗಡೆಗೊಂಡಿವೆ. ಯಾರ್ಯಾರು ಯಾವ ಬಗೆಯ ಔಟ್ಫಿಟ್ಸ್ ಧರಿಸಬೇಕು? ಹೋಗುತ್ತಿರುವ ಸ್ಥಳಕ್ಕೆ ತಕ್ಕಂತೆ ಹಾಲಿಡೇ ಫ್ಯಾಷನ್ ಹೇಗೆ ಬದಲಿಸಿಕೊಳ್ಳಬೇಕು? ಎಂಬುದರ ಬಗ್ಗೆ ಇಮೇಜ್ ಕನ್ಸಲ್ಟೆಂಟ್ ಬಿಯಾ ಸಿಂಧು ಒಂದಿಷ್ಟು ವಿವರ ನೀಡಿದ್ದಾರೆ.
ಲೇಡೀಸ್ ಹಾಲಿಡೇ ಫ್ಯಾಷನ್ವೇರ್ಸ್
ಪುಟ್ಟ ಹುಡುಗಿಯರಿಂದಿಡಿದು, ಟೀನೇಜ್, ಮಧ್ಯ ವಯಸ್ಕ ಮಹಿಳೆಯರಿಗೂ ಲೆಕ್ಕವಿಲ್ಲದಷ್ಟು ಬಗೆಯವ ಹಾಲಿಡೇ ಔಟ್ಫಿಟ್ಸ್ ಆಗಮಿಸಿವೆ. ಇನ್ನು, ಪುಟ್ಟ ಮಕ್ಕಳು ಹಾಗೂ ಟೀನೇಜ್ ಹುಡುಗಿಯರಿಗೆ ಈ ಬಾರಿ ನಿಯಾನ್ ವರ್ಣದ ಫಂಕಿ ಲುಕ್ ನೀಡುವ ತ್ರಿ ಫೋರ್ತ್ ಜಂಪ್ ಸೂಟ್ಸ್, ವೆರೈಟಿ ಡಿಸೈನ್ನ ಕೋ ಆರ್ಡ್ ಸೆಟ್, ಡಂಗ್ರೀಸ್ ಜೆಗ್ಗಿಂಗ್ಸ್, ಟ್ರೆಗ್ಗಿಂಗ್ಸ್,ಕ್ರಾಪ್ ಟಾಪ್, ಅಸ್ಸೆಮ್ಮೆಟ್ರಿಕ್ ಕಟೌಟ್ ಟಾಪ್ಸ್, ಮಿಡಿ ಸ್ಕಟ್ಸ್ ಬಂದಿವೆ. ಇನ್ನು, ವೆಸ್ಟರ್ನ್ ಲುಕ್ ಇಷ್ಟಪಡದ ವಿವಾಹಿತ ಮಹಿಳೆಯರಿಗೆಂದೇ ಸೆಮಿ ಫಾರ್ಮಲ್ಸ್ ಶಾರ್ಟ್ ಕುರ್ತಾಗಳು, ಶಾರ್ಟ್ ಶರಾರ, ಪಲ್ಹಾಜೋ ಸೆಟ್, ವೈಬ್ರೆಂಟ್ ಕೋ ಆರ್ಡ್ ಸೆಟ್ಗಳು ಬಂದಿವೆ.
ಟ್ರೆಂಡಿ ಮೆನ್ಸ್ ಹಾಲಿಡೇ ವೇರ್ಸ್
ಲೇಡೀಸ್ಗಿರುವಷ್ಟು ಅಪ್ಷನ್ ಮೆನ್ಸ್ ಫ್ಯಾಷನ್ನಲ್ಲಿ ಲಭ್ಯವಿಲ್ಲ! ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ, ಈ ಬಾರಿ ಮಲ್ಟಿ ಪಾಕೆಟ್ಸ್ ಬಮರ್ಡಾ, ಕಾರ್ಗೋ ಪ್ಯಾಂಟ್ಸ್, ಜಾಗರ್ ಪ್ಯಾಂಟ್ಸ್ ಈ ಹಾಲಿಡೇ ಟ್ರಾವೆಲ್ ಫ್ಯಾಷನ್ನಲ್ಲಿ ಎಂಟ್ರಿ ನೀಡಿವೆ. ಫ್ಲೋರಲ್ ಡಿಸೈನ್ನ ಹಾಫ್ ಶರ್ಟ್ಸ್, ಪ್ರಿಂಟೆಡ್ನ ಸ್ಲಿವ್ಲೆಸ್ ಫಂಕಿ ಟೀ ಶರ್ಟ್ಸ್ ದಸರಾ ಮೆನ್ಸ್ ಹಾಲಿಡೇ ಫ್ಯಾಷನ್ನಲ್ಲಿ ಟ್ರೆಂಡಿಯಾಗಿವೆ. ಸ್ಪೋಟ್ಸ್ ಜಾಕೆಟ್ಗಳು ಯಂಗ್ಸ್ಟರ್ಸ್ ಸೆಳೆದಿವೆ ಎನ್ನುತ್ತಾರೆ ಡಿಸೈನರ್ ಹರ್ಷ್ ಬೇಡಿ.
ಹಾಲಿಡೇ ಸ್ಪಾಟ್ಗೆ ತಕ್ಕಂತಿರಲಿ ಫ್ಯಾಷನ್ವೇರ್ಸ್
ನೀವು ಭೇಟಿ ನೀಡುವ ಹಾಲಿಡೇ ಸ್ಪಾಟ್ಗೆ ತಕ್ಕಂತೆ ಡ್ರೆಸ್ಕೋಡ್ ಆಯ್ಕೆ ಮಾಡಬೇಕು. ಉದಾಹರಣೆಗೆ, ನಿಮ್ಮದು ಸ್ಪಿರಿಚ್ಯುಲ್ ಹಾಲಿಡೇ ಆದಲ್ಲಿ, ಅದಕ್ಕೆ ತಕ್ಕಂತೆ ಸೆಮಿ ಎಥ್ನಿಕ್ ಅಂದರೇ, ತೀರಾ ಗ್ರ್ಯಾಂಡ್ ಅಲ್ಲದ ಸಾದಾ ಉಡುಗೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಹಸಮಯ ಔಟಿಂಗ್ ಆದಲ್ಲಿ ಜಾಗರ್ಸ್, ಟ್ರೆಕ್ಕರ್ಸ್ ಧರಿಸುವ ಉಡುಗೆಗಳನ್ನು ಧರಿಸಬೇಕು. ನೀರಿನ ಫಾಲ್ಸ್ಗೆ ತೆರಳುತ್ತಿದ್ದಲ್ಲಿ, ಮೈಗೆ ಅಂಟದಂತಹ ಔಟ್ಫಿಟ್ಸ್ ಆಯ್ಕೆ ಮಾಡಿ ಧರಿಸುವುದು ಉತ್ತಮ. ಬೀಚ್, ಹಿಲ್ ಸ್ಟೇಷನ್ ಆಗಿದ್ದಲ್ಲಿ, ಅಲ್ಲಿನ ವಾತಾವರಣಕ್ಕೆ ತಕ್ಕಂತೆ ತಿರುಗಾಡಲು ಅನುವಾಗುವಂತಹ ಉಡುಪುಗಳನ್ನು ಧರಿಸಬೇಕು ಎನ್ನುತ್ತಾರೆ ಹರ್ಷ್.
ಈ ಸುದ್ದಿಯನ್ನೂ ಓದಿ | Tumkur Dasara: ಇಂದಿನಿಂದ 2 ದಿನಗಳ ಕಾಲ ದಸರಾ ಸಾಂಸ್ಕೃತಿಕ ಮೆರುಗು; ಏನೇನು ಕಾರ್ಯಕ್ರಮ?
ದಸರಾ ಹಾಲಿಡೇ ಫ್ಯಾಷನ್ ಪ್ರಿಯರಿಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಗ್ರೂಪ್ ಹಾಲಿಡೇಯಾದಲ್ಲಿ ಎಲ್ಲರೂ ಒಂದೇ ಬಗೆಯ ಡ್ರೆಸ್ಕೋಡ್ ಧರಿಸಬಹುದು.
ಸ್ನೇಹಿತರು ಅಥವಾ ಕುಟುಂಬದವರಾದಲ್ಲಿ ಟ್ವಿನ್ನಿಂಗ್ ಮಾಡಬಹುದು.
ಮಕ್ಕಳ ಫ್ಯಾಷನ್ ಕಂಫರ್ಟಬಲ್ ಆಗಿರಲಿ.
ಹಾಲಿಡೇಯಲ್ಲಿ ಲೈಟ್ವೇಟ್ ಜಾಕೆಟ್ ಧರಿಸಿ.
ಆಕ್ಸೆಸರೀಸ್ ಆವಾಯ್ಡ್ ಮಾಡಿ.
ಹೀಲ್ಸ್ ಸ್ಯಾಂಡಲ್ಸ್ ಸೈಡಿಗಿಟ್ಟು ಶೂ ಅಥವಾ ಫ್ಲಿಪ್ ಫ್ಲಾಪ್ ಧರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)