ಹುಬ್ಬಳ್ಳಿ: ಚುನಾವಣೆ ಗೆದ್ದರೆ ಇವಿಎಂ (EVM) ಸಮಸ್ಯೆ ಇರಲ್ಲ, ಅದೇ ಸೋತರೆ ಇವಿಎಂ ದೋಷ ಎನ್ನುತ್ತಾರೆ. ಕಾಂಗ್ರೆಸ್‌ನವರದ್ದು ಇದೆಂಥ ಮನಸ್ಥಿತಿ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Josh) ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ದ್ವಂದ್ವ ನಿಲುವು ತೋರುವ ಕಾಂಗ್ರೆಸ್ಸಿಗರ ಮನಸ್ಥಿತಿಯೇ ಸರಿಯಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸೋತ ಹತಾಶೆಯಲ್ಲಿ ವಿನಾಕಾರಣ ಇವಿಎಂ ದೋಷ ಎಂದೆಲ್ಲ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಈ ಸುದ್ದಿಯನ್ನೂ ಓದಿ | Farmers Training: ರೈತರ ತರಬೇತಿಗೆ ಅರ್ಜಿ ಆಹ್ವಾನ; ಕೊನೆ ದಿನಾಂಕ ಯಾವಾಗ?
ಪ್ರಜಾಪ್ರಭುತ್ವಕ್ಕೆ ಸಿಕ್ಕ ವಿಜಯ
ಹರಿಯಾಣ, ಜಮ್ಮು ಕಾಶ್ಮೀರದ ಚುನಾವಣೆಯಲ್ಲಿ ಪ್ರಜಾಪ್ರಭುತ್ವಕ್ಕೆ ಸಿಕ್ಕ ಬಹುದೊಡ್ಡ ವಿಜಯವಾಗಿದೆ ಎಂದು ಜೋಶಿ ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹತ್ವರ ಪರಿವರ್ತನೆ ತಂದಿದೆ. ಆರ್ಟಿಕಲ್ 370 ರದ್ದು, ದಲಿತ ಮೀಸಲಾತಿ, ಪಂಚಾಯಿತಿ, ಪಾಲಿಕೆಗಳ ಸೌಲಭ್ಯಗಳನ್ನು ಸರಳಗೊಳಿಸಿದ್ದರಿಂದ ಬಿಜೆಪಿ ಅಲ್ಲಿ 29 ಸ್ಥಾನಗಳನ್ನು ಪಡೆದಿದೆ. ಮತದಾರರು ಬಿಜೆಪಿಯನ್ನು ದೊಡ್ಡ ವಿರೋಧ ಪಕ್ಷವಾಗಿ ಹೊರ ಹೊಮ್ಮುವಂತೆ ಮಾಡಿದ್ದಾರೆ ಎಂದು ಹೇಳಿದರು.
ಹರಿಯಾಣದ ಇತಿಹಾಸದಲ್ಲೇ ಯಾವ ಪಕ್ಷವೂ ಸತತ ಮೂರು ಬಾರಿ ಅಧಿಕಾರಕ್ಕೆ ಬಂದ ಉದಾಹರಣೆಯಿಲ್ಲ. ಬಿಜೆಪಿ ಹ್ಯಾಟ್ರಿಕ್ ಗೆಲುವಿನ ದಾಖಲೆ ನಿರ್ಮಿಸಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Tumkur Dasara: ಇಂದಿನಿಂದ 2 ದಿನಗಳ ಕಾಲ ದಸರಾ ಸಾಂಸ್ಕೃತಿಕ ಮೆರುಗು; ಏನೇನು ಕಾರ್ಯಕ್ರಮ?
ಕಾಂಗ್ರೆಸ್ ಬೆದರಿಸೋ ತಂತ್ರ
ಮುಡಾ, ವಾಲ್ಮೀಕಿ ಹಗರಣಗಳಿಂದಾಗಿ ಸಿಎಂ ಸಿದ್ದರಾಮಯ್ಯ ಅವರು ಈಗ ರಾಜೀನಾಮೆ ನೀಡೋ ಪರಿಸ್ಥಿತಿ ಬಂದಿದೆ. ಹಾಗಾಗಿ ಬಿಜೆಪಿ ಅವಧಿಯಲ್ಲಿನ ಪ್ರಕರಣಗಳ ತನಿಖೆ ನಡೆಸುತ್ತೇವೆ ಎನ್ನುತ್ತ ಭ್ರಷ್ಟಾಚಾರ ವಿರುದ್ಧದ ಧ್ವನಿ ಅಡಗಿಸಲು ಯತ್ನಿಸುತ್ತಿದೆ. ಆದರೆ, ಬಿಜೆಪಿ ಇದಕ್ಕೆಲ್ಲ ಜಗ್ಗಲ್ಲ. ತನಿಖೆ ನಡೆಸಿ ಎಂದೇ ಸವಾಲು ಹಾಕಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.