Saturday, 26th October 2024

Dasara/ Navaratri Nail Art 2024: ಯುವತಿಯರ ಕೈಬೆರಳುಗಳನ್ನು ಅಲಂಕರಿಸುತ್ತಿರುವ ನವರಾತ್ರಿ ನೇಲ್‌ ಆರ್ಟ್‌

Dasara/ Navaratri Nail Art 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಸಾಲಿನ ದಸರಾ ಹಾಗೂ ನವರಾತ್ರಿಯ ಸಂಭ್ರಮಕ್ಕೆ ಇದೀಗ ನೇಲ್‌ ಆರ್ಟ್ (Dasara/ Navaratri Nail Art 2024) ಕೂಡ ಸೇರಿಕೊಂಡಿದೆ. ಈ ಹಬ್ಬದ ಸೀಸನ್‌ಗೆ ಪೂರಕವಾಗುವಂತೆ, ಈ ಫೆಸ್ಟಿವ್‌ ಸೀಸನ್‌ಗೆ ಸಂಬಂಧಿಸಿದ ನಾನಾ ಬಗೆಯ ಸಂಭ್ರಮದ ಚಿತ್ತಾರಗಳು ಯುವತಿಯರ ಉಗುರುಗಳನ್ನು ಅಲಂಕರಿಸುತ್ತಿವೆ. ದಸರಾ ಹಾಗೂ ನವರಾತ್ರಿ ಸಡಗರ-ಸಂಭ್ರಮದಿಂದ ಆಚರಿಸುವ ಹಬ್ಬ. ಧರಿಸುವ ಉಡುಪು ಹಾಗೂ ಸೀರೆಯ ಬಣ್ಣಗಳಿಗೆ ಮಾತ್ರವಲ್ಲ, ಇತರೇ ಅಲಂಕಾರಕ್ಕೂ ಮಾನ್ಯತೆ ನೀಡಲಾಗುತ್ತದೆ. ಇವುಗಳಲ್ಲಿ ಇದೀಗ, ನೇಲ್‌ ಆರ್ಟ್ ಪ್ರೇಮಿಗಳು ಈ ಹಬ್ಬಕ್ಕೆ ಸಂಬಂಧಿಸಿದಂತೆ ಹೊಂದುವಂತೆ ನೇಲ್‌ ಆರ್ಟ್ ಚಿತ್ತಾರದ ಮೊರೆ ಹೋಗುತ್ತಾರೆ. ಅದು ಸಿಂಪಲ್‌ ಚಿತ್ತಾರವಾಗಬಹುದು ಅಥವಾ ನೇಲ್‌ ಆರ್ಟ್ ಸ್ಟುಡಿಯೋಗಳಲ್ಲಿ ಮಾಡುವ ಚಿತ್ತಾರವಾಗಬಹುದು. ಆಯಾ ನೇಲ್‌ ಆರ್ಟ್ ಪ್ರೇಮಿಯ ಅಭಿಲಾಷೆಗೆ ತಕ್ಕಂತೆ ಇವು ಉಗುರುಗಳ ಮೇಲೆ ಮೂಡುತ್ತವೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್‌

ಇನ್ನು ತಮ್ಮ ಉಗುರುಗಳ ಮೇಲೆ ಬಿಡಿಸಲಾಗದಿದ್ದವರಿಗೆಂದೇ ಈ ಹಬ್ಬದ ಚಿತ್ತಾರ ಇರುವಂತಹ ಪ್ರೆಸ್‌ ಆನ್‌ ನೇಲ್ಸ್ ಕೂಡ ಮಾರುಕಟ್ಟೆಯಲ್ಲಿ ಅಥವಾ ಫ್ಯಾನ್ಸಿ ಶಾಪ್‌ಗಳಲ್ಲಿ ದೊರಕುತ್ತವೆ ಎನ್ನುತ್ತಾರೆ ನೇಲ್‌ ಆರ್ಟ್ ಪ್ರೇಮಿ ನಿಶಿತಾ ಹಾಗೂ ಅಶಿತಾ.

ಏನಿದು ದಸರಾ/ನವರಾತ್ರಿ ನೇಲ್‌ ಆರ್ಟ್

ದಸರಾ ಹಬ್ಬಕ್ಕೆ ಸಂಬಂಧಿಸಿದ ಚಿತ್ತಾರಗಳ ಸಮಾಗಮವೇ ಈ ದಸರಾ ಹಾಗೂ ನವರಾತ್ರಿಯ ನೇಲ್‌ ಆರ್ಟ್ ಎಂದರೂ ಅತಿಶಯೋಕ್ತಿಯಾಗದು. ದಸರಾ ಅಂಬಾರಿ, ಅರಮನೆ, ಲೈಟಿಂಗ್ಸ್, ದೇವಿ, ಚಾಮುಂಡಿ, ದುರ್ಗಾ ಚಿತ್ತಾರ, ದಾಂಡಿಯಾ, ಗೊಂಬೆಗಳ ಸಾಲು ಹೀಗೆ ದಸರಾ ಥೀಮ್‌ಗೆ ಸಂಬಂಧಿಸಿದ ನಾನಾ ಬಗೆಯ ಟೈನಿ ಅಂದರೇ ಪುಟ್ಟ ಚಿತ್ತಾರಗಳು ಸುಂದರ ಉಗುರಿನ ಮೇಲೆ ಮೂಡಿಸಲಾಗುತ್ತದೆ. ಇಲ್ಲವೇ ರೆಡಿಮೇಡ್‌ ಆಗಿ ದೊರಕುವ ಪ್ರೆಸ್‌ ಆನ್‌ ನೇಲ್ಸ್ ಮೇಲೆ ಚಿತ್ರಿಸಲಾಗಿರುತ್ತದೆ.

ಚಿತ್ರ : ಡೈಸಿ ನೇಲ್ಸ್ ಸ್ಟುಡಿಯೋ

ನೇಲ್‌ ಅಲಂಕಾರ

ದೇವಿ, ದುರ್ಗೆಯ ವಧನ, ದಾಂಡಿಯಾ, ಗೊಂಬೆಗಳ ಚಿತ್ರಗಳನ್ನು ಕಲರ್‌ ನೇಲ್‌ ಪಾಲಿಷ್‌ಗಳಿಂದ ಬಿಡಿಸಿ, ಅದಕ್ಕೆ ಮತ್ತಷ್ಟು ಮೆರಗು ನೀಡಲು ಸ್ಟೋನ್ಸ್ ಅಥವಾ ಕ್ರಿಸ್ಟಲ್‌ಗಳಿಂದಲೂ ಅಲಂಕರಿಸಲಾಗುತ್ತದೆ.

ಚಿತ್ರ : ದೇವಿಕಾ ನೇಲ್ಸ್

ನೀವೂ ಟ್ರೈ ಮಾಡಿ ನೋಡಿ

ನೀವೂ ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಬಹುದು. ಇದಕ್ಕಾಗಿ ಒಂದಿಷ್ಟು ತಯಾರಿ ಬೇಕು ಎನ್ನುತ್ತಾರೆ ನೇಲ್‌ ಆರ್ಟ್ ಡಿಸೈನರ್‌ ಸೋಮಿ.

ಈ ಸುದ್ದಿಯನ್ನೂ ಓದಿ | Tumkur Dasara: ಇಂದಿನಿಂದ 2 ದಿನಗಳ ಕಾಲ ದಸರಾ ಸಾಂಸ್ಕೃತಿಕ ಮೆರುಗು; ಏನೇನು ಕಾರ್ಯಕ್ರಮ?

ನೇಲ್‌ ಆರ್ಟ್ ಪ್ರಿಯರಿಗೆ ಸಿಂಪಲ್‌ ಟಿಪ್ಸ್

ನೇಲ್‌ ಆರ್ಟ್ ಕಿಟ್‌ ನಿಮ್ಮ ಬಳಿ ಇರಬೇಕು.
ಮೆನಿಕ್ಯೂರ್‌ ಮಾಡಿ ನಂತರ ನೇಲ್‌ ಆರ್ಟ್ ಮಾಡಿ/ಮಾಡಿಸಿ.
ಸುಲಭವಾದ ತ್ರಿಶೂಲ, ಕೋಲಾಟ, ದಾಂಡಿಯಾದಂತಹ ಚಿತ್ರಗಳನ್ನು ಮೂಡಿಸಬಹುದು.
ನೇಲ್‌ ಆರ್ಟ್ ಮಾಡುವಾಗ ಹಚ್ಚಿದ ಕೋಟ್‌ಗಳು ಒಣಗುವ ತನಕ ಸಾವಧಾನವಾಗಿ ಕಾದು ಮುಂದುವರಿಸಬೇಕು.
ಮತ್ತೊಬ್ಬರ ಸಹಾಯವಿಲ್ಲದೇ ನೇಲ್‌ ಆರ್ಟ್ ಮಾಡುವುದು ತುಸು ಕಷ್ಟ ಎಂಬುದು ನೆನಪಿರಲಿ.
ನಾನಾ ಬಗೆಯ ದಸರಾ ಚಿತ್ತಾರಗಳಿಗೆ ಅಂತರ್ಜಾಲದಲ್ಲಿ ಹುಡುಕಬಹುದು.
ಯು ಟ್ಯೂಬ್‌ನಲ್ಲಿ ನೇಲ್‌ ಆರ್ಟ್ ಟ್ಯುಟೋರಿಯಲ್‌ಗಳು ಇವುಗಳ ಟಿಪ್ಸ್ ಕೂಡ ನೀಡುತ್ತವೆ. ಸದುಪಯೋಗಪಡಿಸಿಕೊಳ್ಳಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)