Sunday, 24th November 2024

BBK 11: ನಾನು ಕ್ವಿಟ್ ಮಾಡುತ್ತೇನೆ, ನನ್ನಿಂದ ತಪ್ಪಾಗಿದೆ ಎಂದ ಕ್ಯಾಪ್ಟನ್: ಹೊರಗೆ ಕಳುಹಿಸುತ್ತಾರ ಬಿಗ್ ಬಾಸ್?

Hamsaa

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶುರುವಾಗಿ ಎರಡು ವಾರ ಆಗುತ್ತಾ ಬಂದಿದೆ. ಆದರೆ, ಈ ಎರಡು ವಾರದಲ್ಲಿ ಇಬ್ಬರು ಸರ್ಧಿಗಳು ನಾನು ಮನೆಯಿಂದ ಹೊರಹೋಗುತ್ತೇನೆ ಎಂದು ಹೇಳಿದ್ದಾರೆ. ಮೊದಲ ವಾರದಲ್ಲಿ ಲಾಯರ್ ಜಗದೀಶ್ ಡೋರ್ ತೆಗೆಯಿರಿ ನಾನು ಹೊರಹೋಗುತ್ತೇನೆ ಎಂದಿದ್ದರು. ಇದೀಗ ಮನೆಯ ಕ್ಯಾಪ್ಟನ್ ಆಗಿರುವ ಹಂಸ ನನ್ಗೆ ಆಗುತ್ತಿಲ್ಲ, ನನ್ನಿಂದ ತಪ್ಪಾಗಿದೆ, ನಾನು ಕ್ವಿಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ವಾರ ಕ್ಯಾಪ್ಟನ್ ಹಂಸ ಮತ್ತು ನರಕ ವಾಸಿಗಳು-ಸ್ವರ್ಗ ವಾಸಿಗಳ ಮಧ್ಯೆ ಜಗಳ ನಡೆಯುತ್ತಲೇ ಇದೆ. ಟಾಸ್ಕ್​ನ ಉಸ್ತುವಾರಿ ನಿಭಾಹಿಸಿದ ಹಂಸ ಅಲ್ಲಲ್ಲಿ ಎಡವಟ್ಟು ಮಾಡಿಕೊಂಡಿದ್ದರು. ನಿಯಮವನ್ನು ಸರಿಯಾಗಿ ಹೇಳದೆ ಗೊಂದಲ ಸೃಷ್ಟಿಸಿದ್ದರು. ನಿನ್ನೆ (ಅ. 10) ಕೂಡ ಟಾಸ್ಕ್​ ವೇಳೆ ಟೈಮರ್ ವಿಚಾರದಲ್ಲಿ ದೊಡ್ಡ ಜಗಳ ನಡೆದಿದೆ. ಈ ತೀರ್ಪಿನಿಂದ ಇಡೀ ಮನೆ ಹೊತ್ತಿ ಉರಿದಿದೆ. ಸ್ವರ್ಗದವರು ಹಂಸಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಡಿಸಿಷನ್ ಕೊಡಬೇಕಾದರೆ ಯೋಚನೆ ಮಾಡಿ ಕೊಡ್ಬೇಕು ಎಂದು ಹಂಸ ಬಳಿ ಭವ್ಯಾ ರೇಗಾಡಿದ್ದಾರೆ. ಯಾಕೆ ನಿಯತ್ತಿಲ್ವ ನಿಮ್ಗೆ ಎಂದು ಉಗ್ರಂ ಮಂಜು ಕೂಡ ಕ್ಯಾಪ್ಟನ್ ವಿರುದ್ಧ ರೈಸ್ ಆಗಿದ್ದಾರೆ.

ಇವರು ಮಾಡಿದ ತಪ್ಪಿನಿಂದ ಐಶ್ವರ್ಯ ನರಕಕ್ಕೆ ತೆರಳುವಂತಾಗಿದೆ. ಆದರೆ, ಈ ಎಲ್ಲ ಬೆಳವಣಿಗೆಗೆ ಮತ್ತು ತಪ್ಪಿಗೆ ಹಂಸ ಸಿಕ್ಕಾಪಟ್ಟೆ ಹರ್ಟ್ ಆಗಿದ್ದಾರೆ. ನನ್ನಿಂದಲೇ ಎಲ್ಲ ತಪ್ಪಾಗಿದೆ. ನಾನೇ ನರಕಕ್ಕೆ ಹೋಗುತ್ತೇನೆ ಅಂತಲೆ ಗಿಲ್ಟ್ ಫೀಲ್‌ ಅಲ್ಲಿಯೇ ಇದ್ದರು. ಆದರೆ, ಬಿಗ್ ಬಾಸ್ ಇದಕ್ಕೆ ಅವಕಾಶ ಕೊಡಲೇ ಇಲ್ಲ. ಹಾಗಾಗಿಯೇ ಹಂಸ ಬೇಸರದಲ್ಲಿಯೇ ಕಣ್ಣೀರು ಹಾಕಿದ್ದಾರೆ.

ಬಳಿಕ ಕ್ಯಾಪ್ಟನ್ ರೂಮ್​ಗೆ ಬಂದು ಬಿಗ್ ಬಾಸ್ ಕ್ಯಾಮೆರಾ ಮುಂದೆ, ‘ನನ್ನ ಕಡೆಯಿಂದ ಈ ಬಾರಿ ತುಂಬಾ ತಪ್ಪಾಗಿದೆ. ನನಗೆ ಇದನ್ನು ಮುಂದುವರೆಸಲು ಸಾಧ್ಯವಿಲ್ಲ. ನಾನು ಈ ಪ್ರಯಾಣವನ್ನು ಇಲ್ಲಿಗೆ ನಿಲ್ಲಿಸುವುದು ಸೂಕ್ತ ಎಂದು ಅನಿಸುತ್ತಿದೆ. ನನ್ನಿಂದ ಯಾರೂ ಎಲಿಮಿನೇಟ್ ಆಗೋದು ಬೇಡ. ನನ್ನ ಜಾಗವನ್ನು ಬೇರೆಯವರು ಯಾರಾದರು ತೆಗೋಳಿ, ಕ್ಯಾಪ್ಟ್ ಬೇರೆ ಯಾರಾದರು ಆಗಲಿ. ನಾನು ಬಿಗ್ ಬಾಸ್ ಅನ್ನು ಕ್ವಿಟ್ ಮಾಡುತ್ತೇವೆ,’ ಎಂದು ಹಂಸ ಅವರು ಹೇಳಿದ್ದಾರೆ.

BBK 11: ಅಳುತ್ತಾ ನರಕಕ್ಕೆ ಹೋದ ಐಶ್ವರ್ಯ: ನನ್ನಿಂದ ತಪ್ಪಾಯಿತು ಎಂದ ಹಂಸ