Sunday, 24th November 2024

Viral Video : ಸಹೋದ್ಯೋಗಿ ಮಹಿಳೆಯ ವಸ್ತ್ರ ವಿನ್ಯಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಸಿಡ್ ದಾಳಿ ಬೆದರಿಕೆ ಹಾಕಿದವನಿಗೆ ಆಯಿತು ತಕ್ಕ ಶಿಕ್ಷೆ

Viral Video

ಬೆಂಗಳೂರು: ಎಲ್ಲರಿಗೂ ತಮಗೆ ಇಷ್ಟಬಂದಂತೆ ಬದುಕುವ ಹಕ್ಕಿದೆ. ಅದರಂತೆ ಮಹಿಳೆಯರಿಗೂ ಕೂಡ ತಮಗಿಷ್ಟವಾದ ಬಟ್ಟೆಗಳನ್ನು ಧರಿಸುವ ಹಕ್ಕಿದೆ. ಒಂದು ವೇಳೆ ಆಕೆ ಅಸಹ್ಯವಾದ ಬಟ್ಟೆಗಳನ್ನು ಧರಿಸಿದರೆ ಆಕೆಯ ಕುಟುಂಬದವರಿಗೆ ಅದನ್ನು ಪ್ರಶ್ನಿಸುವ ಅಧಿಕಾರವಿದೆ ಹೊರತು ಹೊರಗಿನವರು ಮಹಿಳೆಯರಿಗೆ ಬುದ್ದಿಹೇಳುವ ಅಧಿಕಾರವಿರುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಹದ್ಯೋಗಿ ಮಹಿಳೆಗೆ ಬಟ್ಟೆ ಧರಿಸುವ ವಿಚಾರಕ್ಕೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ ಕಾರಣ ಆ  ವ್ಯಕ್ತಿಯನ್ನು ಆತನ ಕೆಲಸದಿಂದ ವಜಾಗೊಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಆರೋಪಿ ನಿಕಿತ್ ಶೆಟ್ಟಿ ವಿರುದ್ಧ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. “ಈ ವ್ಯಕ್ತಿ ನನ್ನ ಹೆಂಡತಿಯ ಬಟ್ಟೆಯ ವಿಚಾರವಾಗಿ ಆಕ್ಷೇಪಿಸಿ  ಮುಖದ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದಾನೆ. ಯಾವುದೇ ಅನಾಹುತ ನಡೆಯದಂತೆ ತಡೆಯಲು ದಯವಿಟ್ಟು ಆತನ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಿ” ಎಂದು ಪತ್ರಕರ್ತ ಶಹಬಾಜ್ ಅನ್ಸಾರ್ ಕರ್ನಾಟಕದ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು.

ಇದು ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ನಿಖಿತ್ ಶೆಟ್ಟಿಯನ್ನು ಆತ ಕೆಲಸ ಮಾಡುವ ಸ್ಥಳದಲ್ಲಿ ಪತ್ತೆಹಚ್ಚಿದ್ದಾರೆ.  ನಂತರ ಆತನ ವಿರುದ್ಧ  ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರ ನಂತರ ಆತ ಕೆಲಸ ಮಾಡುತ್ತಿದ್ದ ಕಂಪನಿಯು ಆತನನ್ನು ಕೆಲಸದಿಂದ ತೆಗೆದುಹಾಕಿ ಆತನ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.

“ನಮ್ಮ ಉದ್ಯೋಗಿಗಳಲ್ಲಿ ಒಬ್ಬರಾದ ನಿಕಿತ್ ಶೆಟ್ಟಿ ಅವರು ಇನ್ನೊಬ್ಬರ ಬಟ್ಟೆ ಆಯ್ಕೆಯ ಬಗ್ಗೆ ಬೆದರಿಕೆ ಹೇಳಿಕೆ ನೀಡಿದ್ದಾರೆ. ಘಟನೆ ತುಂಬಾ ನೋವಾಗಿದೆ. ಈ ರೀತಿಯ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಸೇವಾ ಬದ್ಧತೆಗಳನ್ನು ಎತ್ತಿ ಹಿಡಿಯುವ ನಮ್ಮ ಸಂಸ್ಥೆಯ ಮೌಲ್ಯಗಳಿಗೆ ಈ ನಡವಳಿಕೆಗೆ ವಿರುದ್ಧವಾಗಿದೆ” ಎಂದು ಎಟಿಯೋಸ್ ಸರ್ವೀಸಸ್ ಕಂಪನಿ ಹೇಳಿದೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಚಕ್ಕಂದವಾಡುತ್ತಿದ್ದ ಪತ್ನಿಯನ್ನು ರೆಡ್‍ಹ್ಯಾಂಡ್‍ ಆಗಿ ಹಿಡಿದ ಪತಿ!

ಅಲ್ಲದೇ ಸುರಕ್ಷಿತ ಮತ್ತು ಗೌರವಾನ್ವಿತ ವಾತಾವರಣವನ್ನು ಕಲ್ಪಸಲು ಬದ್ಧವಾಗಿರುವ ನಮ್ಮ ಕಂಪನಿ  ತಕ್ಷಣ ಈ ಬಗ್ಗೆ  ಕ್ರಮ ಕೈಗೊಂಡಿದೆ. ನಿಕಿತ್ ಅವರ ಉದ್ಯೋಗವನ್ನು ಐದು ವರ್ಷಗಳ ಅವಧಿಗೆ ಕೊನೆಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ” ಎಂದು ಫುಲ್-ಸ್ಟಾಕ್ ಮಾರ್ಕೆಟಿಂಗ್ ಏಜೆನ್ಸಿ ಇಟಿಯೋಸ್ ಡಿಜಿಟಲ್ ಸರ್ವೀಸಸ್ ಹೇಳಿದೆ. ಮಹಿಳೆಯ ಬಟ್ಟೆಯ ವಿಚಾರಕ್ಕೆ  ಆಕೆಯ ಮೇಲೆ ಆಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಾಗಿ ಅನೇಕರು ಕಂಪನಿಗೆ ಧನ್ಯವಾದ ಅರ್ಪಿಸಿದ್ದಾರೆ.