Friday, 22nd November 2024

Durga Puja Pandal : ತುಂಡುಡುಗೆ, ಚಪ್ಪಲಿ ಧರಿಸಿ ದುರ್ಗಾ ಪೂಜೆ ಪೆಂಡಾಲ್‌ಗೇರಿದ ಮಾಡೆಲ್‌ಗಳು; ನೆಟ್ಟಿಗರ ತಪರಾಕಿ

Durga Puja Pandal

ಕೋಲ್ಕೊತಾ: ದುರ್ಗಾ ಪೂಜಾ ಪೆಂಡಾಲ್‌ನಲ್ಲಿ (Durga Puja Pandal) ಮೂವರು ಮಾಡೆಲ್‌ಗಳು ತುಂಡುಡುಗೆ ಧರಿಸಿ ಪೋಸ್ ಕೊಟ್ಟಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅವರಿಗೆ ಛೀಮಾರಿ ಹಾಕಲಾಗಿದೆ. ಮಾಜಿ ಮಿಸ್ ಕೋಲ್ಕತಾ ವಿಜೇತರಾದ ಹೇಮೋಶ್ರೀ ಭದ್ರಾ ಮತ್ತು ಸನ್ನತಿ ಮಿತ್ರಾ ಮತ್ತು ಅವರ ಸ್ನೇಹಿತೆ ಫೋಟೋಗಳು ಆನ್ ಲೈ ನ್ನ್‌ನಲ್ಲಿ ಬಿಟ್ಟಿದ್ದಾರೆ. ಅದು ವೈರಲ್ ಆಗಿದ್ದಲ್ಲದೆ ಅವರ ವರ್ತನೆಗೆ ಟೀಕೆ ಎದುರಿಸುವಂತಾಗಿದೆ.

ರೂಪದರ್ಶಿಯೊಬ್ಬಳು ಕಪ್ಪು ಗೌನ್ ಧರಿಸಿದ್ದರೆ, ಇನ್ನೊಬ್ಬರು ಹೈಹೀಲ್ಡ್‌ ಬೂಟುಗಳೊಂದಿಗೆ ಸಣ್ಣ ಕಿತ್ತಳೆ ಬಣ್ಣದ ಉಡುಪು ಧರಿಸಿದ್ದಳು. ಮೂರನೇವರು ಕಪ್ಪು ಪ್ಯಾಂಟ್ ನ ಮೇಲೆ ಕೆಂಪು ಬ್ಲೌಸ್‌ ಧರಿಸಿದ್ದರು. ಸನ್ನತಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ‘ ರೆಬೆಲಿಯಸ್‌’ ಎಂದು ಬರೆದುಕೊಂಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಒಪ್ಪಿಲ್ಲ. ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಅವರ ವಸ್ತ್ರಗಳು ಧಾರ್ಮಿಕ ಆಚರಣೆಗೆ ಸೂಕ್ತವಲ್ಲ ಎಂದು ವಾದಿಸಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, “ಪವಿತ್ರ ಸ್ಥಳದಲ್ಲಿ ಆ ಉಡುಪು ಧರಿಸಿದ್ದಕ್ಕಾಗಿ ಅವರಿಗೆ ನಾಚಿಕೆಯಾಗಬೇಕು ” ಎಂದು ಬರೆದಿದ್ದಾರೆ. ಇನ್ನೊಬ್ಬರು “ದೇವಿ ಮಂಟಪದಲ್ಲಿ ಈ ರೀತಿಯ ಅಶ್ಲೀಲತೆ ಪ್ರದರ್ಶನ ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Viral Video: ಸಿಟ್ಟಿಗೆದ್ದ ಕುದುರೆ ದಾಳಿಗೆ ಸಿಲುಕಿದ ಯುವಕ ಜಸ್ಟ್‌ ಮಿಸ್‌ ; ವಿಡಿಯೋ ನೋಡಿ

ಇದು ಮಹಿಳಾ ಸಬಲೀಕರಣವಲ್ಲ. ಇದು ನಮ್ಮ ಸನಾತನ ಧರ್ಮದ ಗೇಲಿ. ನಿಮ್ಮ ನಗ್ನ ಆತ್ಮಗಳು ಪೆಂಡಾಲ್ ಒಳಗೆ ಬೂಟು ಮತ್ತು ಚಪ್ಪಲಿಗಳನ್ನು ಧರಿಸುತ್ತಿವೆ ಎಂದು ಕಾಮೆಂಟ್‌ನಲ್ಲಿ ಬರೆಯಲಾಗಿದೆ. ಇನ್ನೊಬ್ಬರು , ಸ್ವಲ್ಪವಾದರೂ ನಾಚಿಕೆ ಇರಬೇಕಿತ್ತು. ಕನಿಷ್ಠ ದೇವರ ಮುಂದೆ ಉತ್ತಮ ಬಟ್ಟೆಗಳನ್ನು ಧರಿಸಿ ಬಂದರೆ ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ.

“ಜನಪ್ರಿಯತೆಗಾಗಿ ಈ ಜನರು ಎಷ್ಟು ಕೆಳಮಟ್ಟಕ್ಕೆ ಹೋಗುತ್ತಾರೆ?” ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. “ಈ ಅಸಂಬದ್ಧವನ್ನು ವಿವರಿಸಲು ಪದಗಳಿಲ್ಲ. ನಮ್ಮ ಸಂಸ್ಕೃತಿ ಎಲ್ಲೆ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Durga Puja 2024: ಹಸಿರು ದುರ್ಗೆ, ಮೆಟ್ರೊ ರೈಲು, ವಾರಣಾಸಿ ಘಾಟ್; ದುರ್ಗಾ ಪೂಜೆಗೆ ವೈವಿಧ್ಯಮಯ ಪೆಂಡಾಲ್! ವಿಡಿಯೊಗಳಿವೆ

ಮತ್ತೊಂದು ವೀಡಿಯೊದಲ್ಲಿ, ರೂಪದರ್ಶಿಗಳು ಕೋಲ್ಕತ್ತಾದಾದ್ಯಂತ ವಿವಿಧ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ನೃತ್ಯ ಮಾಡುವುದು, ವಾದ್ಯಗಳನ್ನು ನುಡಿಸುವುದು ಮತ್ತು ಸಮಯ ಕಳೆದಿದ್ದಾರೆ. ಆಪೋಸ್ಟ್‌ಗಳನ್ನು ಕಾರ್ಯಕರ್ತೆ ದೀಪಿಕಾ ಭಾರದ್ವಾಜ್ ಸೇರಿದಂತೆ ಹಲವಾರು ಬಳಕೆದಾರರು ಧಾರ್ಮಿಕ ಸ್ಥಳದಲ್ಲಿ ಈ ರೀತಿ ಗಮನ ಸೆಳೆದಿದ್ದಕ್ಕಾಗಿ ಮೂವರನ್ನು ಟೀಕಿಸಿದ್ದಾರೆ.

ಐದು ದಿನಗಳ ದುರ್ಗಾ ಪೂಜಾ ಆಚರಣೆಗಳು ಅಕ್ಟೋಬರ್ 9 ರಂದು ಪ್ರಾರಂಭವಾದವು. ಈ ಹಬ್ಬವು ವಿವಿಧ ಆಚರಣೆ, ಪ್ರಾರ್ಥನೆ ಮತ್ತು ದುರ್ಗಾ ದೇವಿಯನ್ನು ಗೌರವಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶುರುವಾಯಿತು.