ಮುಂಬಯಿ: ಪ್ಯಾರಿಸ್ ಒಲಿಂಪಿಕ್ಸ್ ಅವಳಿ ಕಂಚಿನ ಪದಕ ವಿಜೇತೆ, ಶೂಟರ್ ಮನು ಭಾಕರ್(Manu Bhaker) ಅವರು ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರ‍್ಯಾಂಪ್ ವಾಕ್ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅವರ ರ‍್ಯಾಂಪ್ ವಾಕ್ ವಿಡಿಯೊ ವೈರಲ್ ಆಗಿದೆ.
ಈ ದೃಶ್ಯದಲ್ಲಿ ಮನು ಭಾಕರ್ ಅತ್ಯಂತ ಆಕರ್ಷಕ ಔಟ್ ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರ‍್ಯಾಂಪ್ ಮೇಲೆ ಮನು ಭಾಕರ್ ಗಾಂಭೀರ್ಯದಿಂದ ಹೆಜ್ಜೆ ಹಾಕಿ ಅಭಿಮಾನಿಗಳ ಮನ ಮನಗೆದ್ದಿದ್ದಾರೆ. ಮನು ಅವರು ಅವಳಿ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್ ಅಭಿಯಾನದಲ್ಲಿ ಎರಡು ಶೂಟಿಂಗ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಇತಿಹಾಸವನ್ನು ಬರೆದಿದ್ದರು. ಅವರು 10 ಮೀಟರ್ ಏರ್ ಪಿಸ್ತೂಲ್ ಕೂಟದಲ್ಲಿ ಮತ್ತು ಮಿಶ್ರ ತಂಡ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚು ಗೆದ್ದಿದ್ದರು. ಒಲಿಂಪಿಕ್ಸ್ ಪದಕ ಗೆದ್ದ ಬಳಿಕ ಮೂರು ತಿಂಗಳ ವಿಶ್ರಾಂತಿ ಬಯಸಿರುವ ಮನು ಭಾಕರ್ ತಮ್ಮ ನೆಚ್ಚಿನ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಮನು ಭಾಕರ್(Manu Bhaker) ತಮ್ಮ ವಿರುದ್ಧ ಟ್ರೋಲ್ ಮಾಡಿದವರಿಗೆ ತಕ್ಕ ತಿರುಗೇಟು ನೀಡಿದ್ದರು. “ನಾನು ಪದಕವನ್ನು ಕೊಂಡೊಯ್ಯುತ್ತೇನೆ, ನಾನೇಕೆ ಕೊಂಡೊಯ್ಯಬಾರದು. ಕೆಲ ಕಾರ್ಯಕ್ರಮಗಳ ಸಂಘಟಕರು ಪದಕ ತರುವಂತೆ ಹೇಳುತ್ತಾರೆ. ಯಾರಾದರೂ ಪದಕ ನೋಡಲು ಬಯಸಿದರೆ ನಾನು ಪದಕವನ್ನು ತೆಗೆದುಕೊಂಡು ಹೋಗುತ್ತೇನೆ. ಒಂದೊಮ್ಮೆ ಯಾರೂ ಹೇಳದಿದ್ದರೂ ಕೂಡ ಪಕದ ತೆಗೆದುಕೊಂಡು ಹೋಗುವೆ. ಇದು ನಾನು ಗೆದ್ದಿರುವ ಪದಕ ಟ್ರೋಲಿಗರು ಗೆದ್ದಿರುವ ಪದಕವಲ್ಲ ಎಂದು ಟ್ರೋಲಿಗರಿಗೆ ಮುಟ್ಟಿನೋಡುವಂತ ತಿರುಗೇಟು ಕೊಟ್ಟಿದ್ದರು.
ಇದನ್ನೂ ಓದಿ Manu Bhaker: ಕ್ರಿಕೆಟ್ ದೇವರು ಸಚಿನ್ ಭೇಟಿಯಾದ ಮನು ಭಾಕರ್
ಮನು ಅವರು ಕೆಲವು ಕಾರ್ಯಕ್ರಮಕ್ಕೆ ಹೋದಾಗ ಅವರು ಗೆದ್ದಿದ್ದ ಪದಕಗಳನ್ನು ಕೊಂಡೊಯ್ಯುತ್ತಿದ್ದರು. ಇದು ಟ್ರೋಲ್‌ಗೆ ಒಳಗಾಗಿತ್ತು. ಪದಕ ಗೆದ್ದಿರುವ ವಿಚಾರ ದೇಶಕ್ಕೆ ತಿಳಿದಿದೆ ಇದನ್ನು ಪದೇಪದೆ ನೆನಪಿಸಬೇಕಿಲ್ಲ ಎಂದು ಟ್ರೋಲ್ ಮಾಡಿದ್ದರು.
ಪದಕ ಗೆದ್ದ ಬಳಿಕ ಮನು ಭಾಕರ್ (Manu Bhaker) ಅವರ ಬ್ರಾಂಡ್ ಮೌಲ್ಯ 20 ಲಕ್ಷ ರೂ.ನಿಂದ 1.5 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. 22 ವರ್ಷದ ಮನು ಭಾಕರ್, ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರಾದರೂ ಅವರಿಗೆ ಪದಕ ಲಭಿಸಿರಲಿಲ್ಲ. ಆದರೆ ಪ್ಯಾರಿಸ್ ನಲ್ಲಿ ಸಿಕ್ಕಿರುವ ಎರಡು ಪದಕಗಳು ಭಾಕರ್ ಬದುಕನ್ನೇ ಬದಲಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.