Monday, 18th November 2024

Menustrual Cup: ಮುಟ್ಟಿನ ಕಪ್‍ಗಳನ್ನು ಬಳಸುವುದು ಹೇಗೆ? ಇಲ್ಲಿದೆ ಸರಳ ಮಾಹಿತಿ

Menustrual Cup

ಮಹಿಳೆಯರು ಮುಟ್ಟಾದಾಗ ಸ್ಯಾನಿಟರಿ ಪ್ಯಾಡ್‍ಗಳನ್ನು, ಬಟ್ಟೆಗಳನ್ನು, ಟ್ಯಾಂಪೂನ್‍ಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ಹೆಚ್ಚು ಸಮಯ ಇಟ್ಟುಕೊಳ್ಳಲು ಆಗುವುದಿಲ್ಲ. ಯಾಕೆಂದರೆ ಇವುಗಳನ್ನು ಆಗಾಗ ಬದಲಾಯಿಸದಿದ್ದರೆ ಯೋನಿಯಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಕೆಲವು ಮಹಿಳೆಯರು ಮುಟ್ಟಿನ ಕಪ್‍ಗಳನ್ನು ಬಳಸುತ್ತಾರೆ. ಆದರೆ ಅನೇಕ ಮಹಿಳೆಯರಿಗೆ ಈ ಮುಟ್ಟಿನ ಕಪ್‍ನ(Menustrual Cup) ಬಗ್ಗೆ ಹಾಗೂ ಅದನ್ನು ಬಳಸುವುದರ ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾದ್ರೆ ಇಲ್ಲಿ  ಮುಟ್ಟಿನ ಕಪ್‍ನ ಬಗ್ಗೆ ಸಂಪೂರ್ಣ  ಮಾಹಿತಿ ಇದೆ.

Menustrual Cup

ಮುಟ್ಟಿನ ಕಪ್ ಎಂದರೇನು?
ಮುಟ್ಟಿನ ಕಪ್‍ಗಳನ್ನು ಮುಟ್ಟಿನ ಸಮಯದಲ್ಲಿ ರಕ್ತಸ್ರಾವವನ್ನು ಹಿಡಿದಿಟ್ಟುಕೊಳ್ಳಲು ಬಳಸುತ್ತಾರೆ. ಇದು ಇತರ ವಿಧಾನಗಳಿಗಿಂತ ಹೆಚ್ಚಿನ ಪ್ರಮಾಣದ ರಕ್ತವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಿಮ್ಮ ರಕ್ತಸ್ರಾವಕ್ಕೆ ಅನುಗುಣವಾಗಿ 12 ಗಂಟೆಗಳವರೆಗೆ ಈ ಕಪ್‍ ಅನ್ನು ಧರಿಸಬಹುದು. ಈ ಕಪ್‍ಗಳನ್ನು ತೊಳೆದು ಮರುಬಳಕೆ ಮಾಡಬಹುದು. ಕೆಲವು ಕಪ್‍ಗಳು 10 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಹಾಗೇ ಒಮ್ಮೆ ಬಳಸಿ ಎಸೆಯುವಂತಹ ಕಪ್‍ಗಳು ಕೂಡ ಮಾರುಕಟ್ಟೆಯಲ್ಲಿ ಸಿಗುತ್ತವೆ.

ಮುಟ್ಟಿನ ಕಪ್ ಬಳಸುವುದರಿಂದಾಗುವ ಅನಾನುಕೂಲಗಳು ಏನೇನು?
*ಕಪ್‍ನ ಗಾತ್ರದಲ್ಲಿ ಸಮಸ್ಯೆ ಇದ್ದರೆ ಇದರಿಂದ ನಿಮಗೆ ಅದನ್ನು ಧರಿಸಲು ಮತ್ತು ತೆಗೆಯಲು ಕಷ್ಟವಾಗಬಹುದು. ಹಾಗೇ ಅದನ್ನು ಸರಿಯಾಗಿ ಕ್ಲೀನ್ ಮಾಡದೆ ಧರಿಸಿದರೆ ಅದರಿಂದ ಕಿರಿಕಿಯಾಗಬಹುದು.

*ಕಪ್‍ಗಳನ್ನು ಸರಿಯಾಗಿ ಸ್ವಚ್ಛ ಮಾಡದೆ ಯೋನಿಯೊಳಗೆ ಸೇರಿಸಿದರೆ ಕಪ್‍ನಲ್ಲಿರುವ ಬ್ಯಾಕ್ಟೀರಿಯಾಗಳು ಯೋನಿಗೆ ತಲುಪಿ ಸೋಂಕು ಉಂಟಾಗುತ್ತದೆ. ಹಾಗಾಗಿ ಕಪ್ ಅನ್ನು ಸ್ವಚ್ಛಗೊಳಿಸುವುದರ ಜೊತೆಗೆ ಅದನ್ನು ಬಳಸುವಾಗ ನಿಮ್ಮ ಕೈಗಳನ್ನು ತೊಳೆದು ಸ್ವಚ್ಛಮಾಡಿಕೊಳ್ಳಿ.

Menustrual Cup

ಮುಟ್ಟಿನ ಕಪ್ ಬಳಸುವುದರಿಂದಾಗುವ ಅನುಕೂಲಗಳು ಏನು?
*ಮುಟ್ಟಿನ ಕಪ್‍ಗಳನ್ನು ಮರುಬಳಕೆ ಮಾಡಬಹುದಾದ್ದರಿಂದ ಅದನ್ನು ಎಸೆಯುವ ಅವಶ್ಯಕತೆಯಿಲ್ಲ. ಹಾಗಾಗಿ ಇದರಿಂದ ತ್ಯಾಜ್ಯದ ಸಮಸ್ಯೆ ಇರದೆ ಪರಿಸರ ಸ್ವಚ್ಛವಾಗಿರುತ್ತದೆ.

*ಮುಟ್ಟಿನ ಕಪ್‍ಗಳನ್ನು ಮರುಬಳಕೆ ಮಾಡಬಹುದಾದ್ದರಿಂದ ಅದನ್ನು ಮತ್ತೆ ಮತ್ತೆ ಹಣ ಕೊಟ್ಟು ಖರೀದಿ ಮಾಡಬೇಕಾಗಿಲ್ಲ ಮತ್ತು ಇವು ಕೈಗೆಟ್ಟುಕುವ ಬೆಲೆಗೆ ಸಿಗುತ್ತವೆ.

*ಮುಟ್ಟಿನ ಕಪ್‍ಗಳನ್ನು ಮೊದಲಿಗೆ ಬಳಸುವಾಗ ಕಷ್ಟವೆನಿಸಿದರೂ ಅಭ್ಯಾಸವಾದ ಮೇಲೆ ಅದು ಸುಲಭವೆನಿಸುತ್ತದೆ ಮತ್ತು ಆರಾಮದಾಯಕವೆನಿಸುತ್ತದೆ.

*ಮುಟ್ಟಿನ ಕಪ್‍ಗಳು ಸುರಕ್ಷಿತವಾಗಿವೆ ಮತ್ತು ಪ್ಯಾಡ್‍ ಮತ್ತು ಟ್ಯಾಂಪೂನ್‍ಗಳಿಗಿಂತ ಹೆಚ್ಚು ರಕ್ತವನ್ನು ಹಿಡಿದಿಟ್ಟುಕೊಳ್ಳುತ್ತದೆ. ಹಾಗಾಗಿ ಪದೇ ಪದೇ ಬದಲಾಯಿಸಬೇಕಾಗಿಲ್ಲ.

ಈ ಸಮಸ್ಯೆ ಇರುವವರು ಮುಟ್ಟಿನ ಕಪ್‍ ಬಳಸಬೇಡಿ:
ಮುಟ್ಟಿನ ಕಪ್‍ಗಳು ಸುರಕ್ಷಿತವಾಗಿವೆ. ಆದರೆ ಇದನ್ನು ಎಲ್ಲರೂ ಬಳಸುವಂತಿಲ್ಲ. ಕೆಲವೊಂದು ಸಮಸ್ಯೆ ಇರುವವರಿಗೆ ಇದರಿಂದ ಸಮಸ್ಯೆಯಾಗಬಹುದು. ಯೋನಿಯಲ್ಲಿ ಸಮಸ್ಯೆ ಅನುಭವಿಸುವವರು, ಗರ್ಭಾಶಯದಲ್ಲಿ ಫೈಬ್ರಾಯ್ಡಿ ಇರುವವರು, ಎಂಡೊಮೆಟ್ರಿಯೋಸಿಸ್ ಸಮಸ್ಯೆ, ಗರ್ಭಾಶಯದಲ್ಲಿ ಸಮಸ್ಯೆ ಇರುವವರು ಕಪ್‍ಗಳನ್ನು ಬಳಸುವುದರಿಂದ ಸಮಸ್ಯೆಗಳು ಹೆಚ್ಚಬಹುದು. ಹಾಗಾಗಿ ಅಂಥವರು ವೈದ್ಯರ ಸಲಹೆ ಪಡೆದು ಇದನ್ನು ಬಳಸಿದರೆ ಒಳ್ಳೆಯದು.

ಮುಟ್ಟಿನ ಕಪ್‍ಗಳು ಯಾರಿಗೆ ಒಳ್ಳೆಯದು?

*ಮುಟ್ಟಿನ ಕಪ್ ಮರುಬಳಕೆ ಮಾಡಬಹುದಾಗಿದ್ದರಿಂದ ಹಣವನ್ನು ಉಳಿಸಲು ಬಯಸುವವರಿಗೆ ಇದು ಪ್ರಯೋಜನಕಾರಿಯಾಗಿದೆ.

*ಮುಟ್ಟಿನ ಸಮಯದಲ್ಲಿ ವಾಸನೆ ಬರುವುದನ್ನು ಕಡಿಮೆಮಾಡಲು ಬಯಸುವವರು ಕಪ್‍ಗಳನ್ನು ಬಳಸಬಹುದು.

ನಿಮಗೆ ಯಾವ ಕಪ್ ಸೂಕ್ತ ಎಂಬುದನ್ನು ತಿಳಿಯಿರಿ:

ಮುಟ್ಟಿನ ಕಪ್‍ಗಳು ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರದಲ್ಲಿ ಇರುತ್ತದೆ. ಹಾಗಾಗಿ ನಿಮ್ಮ ವಯಸ್ಸು, ಗರ್ಭಕಂಠದ ಉದ್ದ, ಮುಟ್ಟಿನ ಸಮಯದಲ್ಲಿ ರಕ್ತಸ್ರಾವದ ಪ್ರಮಾಣವನ್ನು ನೋಡಿ ಕಪ್‍ ಅನ್ನು ಆರಿಸಿ.

ಇದನ್ನೂ ಓದಿ:ನಿಮ್ಮ ಹಿತ್ತಲಲ್ಲಿ ಇರುವ ಈ ಹೂವು ಮಧುಮೇಹ ಸಮಸ್ಯೆಗೆ ರಾಮಬಾಣ!

ಮುಟ್ಟಿನ ಕಪ್ ಬಳಸುವುದು ಮತ್ತು ತೆಗೆಯುವ ವಿಧಾನ ಹೇಗೆ?
ಕಪ್ ಧರಿಸುವಾಗ ಕಪ್‍ನ ಅಂಚಿಗೆ ನೀರು ಅಥವಾ ಲೂಬ್ರಿಕೆಂಟ್ ಹಚ್ಚಿ ಕಪ್‌ಅನ್ನು ಅರ್ಧದಷ್ಟು ಬಿಗಿಯಾಗಿ ಮಡಚಿ, ಒಂದು ಕೈಯಲ್ಲಿ ಕಪ್ ಅನ್ನು ಯೋನಿಯೊಳಗೆ ಸೇರಿಸಿ. ಅದರ ಕೆಲವು ಇಂಚುಗಳಷ್ಟು ಭಾಗ ಕೆಳಗೆ ಇರಬೇಕು. ಹಾಗೇ ಅದನ್ನು ಯೋನಿಯೊಳಗೆ ಹಾಕಿ ನಂತರ ನಿಧಾನವಾಗಿ ತಿರುಗಿಸಬೇಕು.  ಹಾಗೇ ಅದನ್ನು ಧರಿಸಿದ 12 ಗಂಟೆಗಳೊಳಗೆ ಹೊರಗೆ ತೆಗೆದು ಸ್ವಚ್ಛಮಾಡಬೇಕು.

ಹಾಗಾಗಿ ಮಹಿಳೆಯರು ಹೆಚ್ಚಾಗಿ ಮುಟ್ಟಿನ ಕಪ್‍ಗಳನ್ನು ಬಳಸಿ ಆರೋಗ್ಯವಾಗಿ, ಆರಾಮದಾಯಕವಾಗಿ ಮುಟ್ಟಿನ ದಿನಗಳನ್ನು ಕಳೆಯಿರಿ.