ಇಂದೋರ್ : ದೇಶದ ಕೆಲವು ಕಡೆಗಳಲ್ಲಿ ನವರಾತ್ರಿಯ ವೇಳೆ ಪೆಂಡಾಲ್ (Garba Pendal) ರಚಿಸಿ ಗರ್ಬಾ ನೃತ್ಯ ಮಾಡುತ್ತಾರೆ. ಈ ವೇಳೆ ಜನರು ವಿಶೇಷ ರೀತಿಯ ಉಡುಪು ಧರಿಸಿ ದಾಂಡಿಯಾ ಆಡುತ್ತಾ ತಮ್ಮ ಇಷ್ಟದ ದೇವಿ ಪೂಜಿಸುತ್ತಾರೆ. ಈ ಗರ್ಬಾ ಪೆಂಡಾಲ್ ಕಾರ್ಯಕ್ರಮಕ್ಕೆ ಹಿಂದೂಗಳು ಮಾತ್ರ ಪ್ರವೇಶ ಮಾಡಬಹುದಾಗಿದೆ. ಆದರೆ ಮುಸ್ಲಿಂ ಯುವಕನೊಬ್ಬ ಹಿಂದೂ ಎಂದು ಹೇಳಿಕೊಂಡು ಗರ್ಬಾ ಕಾರ್ಯಕ್ರಮಕ್ಕೆ ಪ್ರವೇಶಿಸಿದ ಘಟನೆಯೊಂದು ಇಂದೋರ್ನಲ್ಲಿ ಬೆಳಕಿಗೆ ಬಂದಿದೆ.
ಗುರುವಾರ (ಅಕ್ಟೋಬರ್ 10) ರಾತ್ರಿ, ಮುಸ್ಲಿಂ ಯುವಕನೊಬ್ಬ ತನ್ನ ನಿಜವಾದ ಗುರುತನ್ನು ಮರೆಮಾಚಿಕೊಂಡು ಅಪ್ರಾಪ್ತ ಬಾಲಕಿಯೊಂದಿಗೆ ಗರ್ಬಾ ಉತ್ಸವದಲ್ಲಿ ಭಾಗವಹಿಸಲು ಪ್ರಯತ್ನಿಸಿದ್ದು, ಆತನನ್ನು ಹಿಂದೂ ಜಾಗರಣ ಮಂಚ್ ಸದಸ್ಯರು ಸೆರೆ ಹಿಡಿದಿದ್ದಾರೆ. ಇಂದೋರ್ನ ಎಂಆರ್ 10 ಪ್ರದೇಶದ ವೈಭವ್ ಶ್ರೀ ಗಾರ್ಡ್ನಲ್ಲಿ ಈ ಘಟನೆ ನಡೆದಿದ್ದು, ಅಮೀರ್ ಖಾನ್ ಎಂಬ ಮುಸ್ಲಿಂ ಯುವಕ ಅಮನ್ ಎಂದು ಹಿಂದೂ ಹೆಸರು ಹೇಳಿಕೊಂಡು ಅಪ್ರಾಪ್ತ ಬಾಲಕಿಯೊಂದಿಗೆ ಗರ್ಬಾ ಪೆಂಡಾಲ್ಗೆ ಪ್ರವೇಶಿಸಿದ್ದಾನೆ.
ತನ್ನನ್ನು ‘ಅಮನ್’ ಎಂದು ಪರಿಚಯಿಸಿಕೊಂಡ ಯುವಕನ ಬಗ್ಗೆ ಜಾಗರಣ ಮಂಚ್ ಕಾರ್ಯಕರ್ತರು ಅನುಮಾನಗೊಂಡು ವಿಚಾರಿಸಿದಾಗ ಆತ ಸಿಕ್ಕಿಬಿದ್ದಿದ್ದಾನೆ. ಆತನಿಂದ ವಶಪಡಿಸಿಕೊಳ್ಳಲಾದ ಗುರುತಿನ ಚೀಟಿಯಲ್ಲಿ ಆತನ ನಿಜವಾದ ಹೆಸರು ಬಾಲಾಘಾಟ್ ನಿವಾಸಿ ಅಮೀರ್ ಖಾನ್ ಎಂದು ತಿಳಿದುಬಂದಿದೆ. ಈ ಮಾಹಿತಿಯಿಂದ ಗಾಬರಿಗೊಂಡ ಕಾರ್ಯಕರ್ತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಲ್ಲದೇ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಅಮೀರ್ ಖಾನ್ ಜೊತೆಗಿದ್ದ ಅಪ್ರಾಪ್ತ ಬಾಲಕಿ ಬಾಲಾಘಾಟ್ನಿಂದ ಕಾಣೆಯಾಗಿದ್ದಾಳೆ ಎಂದಬುದಾಗಿ ತಿಳಿದುಬಂದಿದೆ. ಪೊಲೀಸರು ಕೂಡಲೆ ಅಮೀರ್ ಖಾನ್ನನ್ನು ಬಂಧಿಸಿ ಅಪ್ರಾಪ್ತ ಬಾಲಕಿಯನ್ನು ಆಕೆಗೆ ಕುಟುಂಬಕ್ಕೆ ಒಪ್ಪಿಸಿ ವಿಚಾರಣೆ ನಡೆಸಿದ್ದಾರೆ.
ಗರ್ಬಾ ಕಾರ್ಯಕ್ರಮದಲ್ಲಿ ಅಮೀರ್ ಖಾನ್ ಅಪ್ರಾಪ್ತ ಬಾಲಕಿಯರು ಸೇರಿದಂತೆ ಅನೇಕ ಹುಡುಗಿಯರೊಂದಿಗೆ ಭಾಗವಹಿಸಿದ್ದಾನೆ ಎಂದು ಹಿಂದೂ ಸಂಘಟನೆಯ ಸದಸ್ಯರು ವರದಿ ಮಾಡಿದ್ದಾರೆ. ಅವನ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ, ಚಾಟ್ ಮೆಸೇಜ್ಗಳ ಜೊತೆಗೆ ಅಶ್ಲೀಲ ಫೋಟೊಗಳು ಕೂಡ ಕಂಡುಬಂದಿವೆ. ಹಾಗಾಗಿ ಆತ ಈ ಕಾರ್ಯಕ್ರಮಕ್ಕೆ ಬಂದಿರುವುದು ಹಾಗೂ ಆತನ ಉದ್ದೇಶದ ಬಗ್ಗೆ ಜನರಲ್ಲಿ ಕಳವಳವನ್ನು ಉಂಟುಮಾಡಿದೆ. ಹಾಗಾಗಿ ಅಲ್ಲಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಗರ್ಬಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೆಲವರು ಹಿಂದೂ ಎಂದು ಹೇಳಿಕೊಂಡು ತಮ್ಮ ನಿಜವಾದ ಗುರುತನ್ನು ಮರೆಮಾಚುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹಿಂದೂ ಜಾಗರಣ ಮಂಚ್ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ಮತ್ತೆ ಆಗದಂತೆ ತಡೆಗಟ್ಟಲು ಕಡ್ಡಾಯ ಗುರುತಿನ ಚೀಟಿ ತಪಾಸಣೆ ಸೇರಿದಂತೆ ಕಠಿಣ ಮೇಲ್ವಿಚಾರಣಾ ಕ್ರಮಗಳನ್ನು ಜಾರಿಗೆ ತರುವಂತೆ ಅವರು ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.