Wednesday, 30th October 2024

Insurance Claim: ಯಾವ ಕಾರಣಗಳಿಂದ ಮೃತಪಟ್ಟರೆ ವಿಮೆ ಹಣ ಸಿಗುವುದಿಲ್ಲ? ಅನುಮಾನಗಳಿಗೆ ಇಲ್ಲಿದೆ ಪರಿಹಾರ

Insurance Claim

ನಮ್ಮ ಮರಣದ (death reason) ಬಳಿಕ ನಮ್ಮನ್ನು ಅವಲಂಬಿಸಿರುವವರಿಗೆ ಆರ್ಥಿಕ ಹೊರೆ ಬೀಳದೇ ಇರಲಿ ಎಂದು ನಾವು ಖರೀದಿ ಮಾಡುವ ವಿಮಾ ಪಾಲಿಸಿಗಳು (Insurance Claim) ಅವರಿಗೆ ಸಿಗುತ್ತೋ, ಇಲ್ಲವೋ ಎಂಬುದು ನಮ್ಮ ಸಾವಿನ ಕಾರಣದಿಂದ (death claim) ತಿಳಿಯುತ್ತದೆ. ಕೆಲವೊಮ್ಮೆ ಈ ಹಣವನ್ನು ಪಡೆಯಲು ಸಾಕಷ್ಟು ಹೋರಾಟವನ್ನು ಮಾಡಬೇಕಾಗುತ್ತದೆ.

ಭಾರತದಲ್ಲಿನ ಹೆಚ್ಚಿನ ಅವಧಿಯ ವಿಮಾ ಯೋಜನೆಗಳು ಸಮಗ್ರ ರಕ್ಷಣೆ ಒದಗಿಸುವ ಗುರಿಯನ್ನು ಜೊತೆಗೆ ಡೆತ್ ಕ್ಲೈಮ್ ಪ್ರಯೋಜನ ಹೊಂದಿರುತ್ತದೆ. ಇದು ನಮ್ಮ ಅನೀರಿಕ್ಷಿತ ಮರಣದ ಬಳಿಕ ನಮ್ಮನ್ನು ಅವಲಂಬಿಸಿರುವವರಿಗೆ ಆರ್ಥಿಕ ಶಕ್ತಿಯನ್ನು ತುಂಬುತ್ತದೆ. ಆದರೆ ಇದು ಯಾವ ಪರಿಸ್ಥಿತಿಯಲ್ಲಿ ಸಿಗುತ್ತದೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಹೀಗಾಗಿ ವಿಮೆ ಹಣ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಇರುವವರು ಆಘಾತಕ್ಕೆ ಒಳಗಾಗುವ ಪ್ರಸಂಗವೂ ಇರುತ್ತದೆ.

ಯಾವ ಕಾರಣಕ್ಕೆ ವಿಮೆ ಹಣ ಸಿಗುತ್ತದೆ?

ಅವಧಿ ವಿಮೆಯಲ್ಲಿ ಡೆತ್ ಕ್ಲೈಮ್ ಸೇರಿದ್ದರೆ ಅದು ಕೆಲವೊಂದು ನಿರ್ಧಿಷ್ಟ ಕಾರಣಗಳಿಂದ ಉಂಟಾದ ಸಾವಿಗೆ ಮಾತ್ರ ನಾಮಿನಿ ಕೈಗೆ ಸಿಗುತ್ತದೆ ಎಂಬುದನ್ನು ನಾವು ತಿಳಿದುಕೊಂಡಿರಬೇಕು. ಅವುಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Insurance Claim

ನೈಸರ್ಗಿಕ ಕಾರಣಗಳು

ಸ್ವಾಭಾವಿಕ ಕಾರಣಗಳಿಂದ ಅಥವಾ ವೈದ್ಯಕೀಯ ಸ್ಥಿತಿಯಿಂದ ಸಂಭವಿಸುವ ಸಾವನ್ನು ವಿಮೆದಾರರ ಅಕಾಲಿಕ ಮರಣ ಎಂದು ಕರೆಯಲಾಗುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ನ ಕೆಲವು ವಿಧಗಳು ಮತ್ತು ಹಂತಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಪ್ರವಾಹ, ಭೂಕಂಪ ಮುಂತಾದ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಸಾವುಗಳು ಸಹ ಅವಧಿ ವಿಮೆಯ ಅಡಿಯಲ್ಲಿ ಸೇರಿದೆ.

ಆಕಸ್ಮಿಕ ಸಾವು

ಅಪಘಾತಗಳಿಂದಾಗುವ ಮರಣವನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಲಾಗಿದೆ. ಅವಧಿ ವಿಮೆಯ ಅಡಿಯಲ್ಲಿ ಇದು ಸೇರಿರುತ್ತದೆ. ನಮ್ಮ ಜೀವಕ್ಕೆ ಹೆಚ್ಚುವರಿ ರಕ್ಷಣೆ ನೀಡುವ ಸಲುವಾಗಿ ಆಕಸ್ಮಿಕ ಸಾವಿನ ಪ್ರಯೋಜನವನ್ನು ಖರೀದಿ ಮಾಡಲು ವಿಮೆಯಲ್ಲಿ ಶಿಫಾರಸು ಮಾಡಲಾಗುತ್ತದೆ.

ಯಾವುದೆಲ್ಲ ಕಾರಣಕ್ಕೆ ವಿಮೆ ಸಿಗುವುದಿಲ್ಲ

ಅವಧಿ ವಿಮೆಯ ಅಡಿಯಲ್ಲಿ ಕೆಲವೊಂದು ಕಾರಣಕ್ಕೆ ವಿಮೆ ಹಣ ಸಿಗುವುದಿಲ್ಲ. ಹೀಗಾಗಿ ಇದನ್ನು ಅರಿತುಕೊಳ್ಳುವುದು ವಿಮೆದಾರರು ಮತ್ತು ಅದರ ಪ್ರಯೋಜನ ಪಡೆಯುವವರು ತಿಳಿಯುವುದು ಒಳ್ಳೆಯದು.

ಕೊಲೆ

ಪಾಲಿಸಿದಾರನು ಕೊಲೆಯಾಗಿದ್ದರೆ ಮರಣದ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ. ನಾಮಿನಿಯು ಈ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂಬ ತನಿಖೆ ನಡೆಯುತ್ತದೆ. ಕೊಲೆ ಆರೋಪದಿಂದ ನಾಮಿನಿ ಹೊರಬಂದ ಬಳಿಕವೇ ಹಣ ಪಾವತಿಯಾಗುತ್ತದೆ.

ಒಂದು ವೇಳೆ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿರುವ ವಿಮೆದಾರನ ಮರಣ ಸಂಭವಿಸಿದರೆ ಡೆತ್ ಕ್ಲೈಮ್ ಪಡೆಯಲು ನಾಮಿನಿಗೆ ಸಾಧ್ಯವಿಲ್ಲ. ಆದರೆ ಪಾಲಿಸಿದಾರರು ಹಿಂದಿನ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೂ ನೈಸರ್ಗಿಕ ಕಾರಣಗಳಿಂದ ಮರಣಹೊಂದಿದರೆ ಮಾತ್ರ ನಾಮಿನಿಯು ಡೆತ್ ಕ್ಲೈಮ್ ಪಡೆಯಬಹುದು.

Insurance Claim

ಅಮಲು ಪದಾರ್ಥ ಸೇವನೆ

ಪಾಲಿಸಿದಾರನು ಮದ್ಯಪಾನ ಅಥವಾ ಮಾದಕದ್ರವ್ಯ ಸೇವಿಸಿ ವಾಹನ ಚಲಾಯಿಸುವಾಗ ಅಪಘಾತವಾಗಿ ಸಾವನ್ನಪ್ಪಿದರೆ ವಿಮಾ ಮೊತ್ತವನ್ನು ಫಲಾನುಭವಿಗೆ ಪಾವತಿಸಲಾಗುವುದಿಲ್ಲ. ಪಾಲಿಸಿದರೇನು ಯಾವುದಾದರೂ ದುರಭ್ಯಾಸ ಹೊಂದಿದ್ದರೆ ವಿಮೆ ಖರೀದಿ ಮಾಡುವಾಗಲೇ ಅದನ್ನು ಅರ್ಜಿಯಲ್ಲಿ ಉಲ್ಲೇಖಿಸಬೇಕಾಗುತ್ತದೆ.

ಹಲವಾರು ವಿಮಾ ಪಾಲಿಸಿದಾರರು ಖರೀದಿ ಮಾಡುವ ಅವಧಿ ವಿಮೆಯ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಧೂಮಪಾನದ ಅಭ್ಯಾಸವನ್ನು ಬಹಿರಂಗಪಡಿಸುವುದಿಲ್ಲ. ಕ್ಲೈಮ್ ಇತ್ಯರ್ಥದ ಸಮಯದಲ್ಲಿಯೂ ಇದು ಕೂಡ ತನಿಖೆ ಮಾಡಲಾಗುತ್ತದೆ. ಅವಧಿ ವಿಮೆ ಖರೀದಿ ಮಾಡುವಾಗ ಇದನ್ನು ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿದೆ. ಇದರಿಂದ ಕುಟುಂಬದ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು.

ಅಪಾಯಕಾರಿ ಚಟುವಟಿಕೆ

ವಿಮೆ ಕ್ಲೈಮ್ ಗಳು ಪಾಲಿಸಿದಾರರ ಪ್ರೊಫೈಲ್ ಆಧಾರದ ಮೇಲೂ ನಿರ್ಧರಿಸಲಾಗುತ್ತದೆ. ಇದಕ್ಕೆ ಅನುಗುಣವಾಗಿ ಪ್ರೀಮಿಯಂ ಮೊತ್ತವನ್ನು ನೀಡಲಾಗುತ್ತದೆ. ವಿವಿಧ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಕೂಡ ನಿರ್ದಿಷ್ಟ ಅಪಾಯಗಳಿಗೆ ಅಹ್ವಾನ ನೀಡುತ್ತದೆ. ಪರ್ವತಾರೋಹಣ, ಬೈಕ್, ಕಾರು ರೇಸ್ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಅಪಘಾತದ ಸಾಧ್ಯತೆಗಳು ಹೆಚ್ಚು. ಇದರಲ್ಲಿ ಉಂಟಾಗುವ ದುರ್ಘಟನೆಯಿಂದ ಸಾವು ಸಂಭವಿಸಿದರೆ ಅವಧಿ ವಿಮೆಯಲ್ಲಿ ಇದು ಸೇರುವುದಿಲ್ಲ.

ಇವುಗಳ ಹೊರತಾಗಿ ವಿಮಾದಾರರ ಜೀವಕ್ಕೆ ಅಪಾಯವನ್ನು ಉಂಟು ಮಾಡುವ ಮತ್ತು ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗಬಹುದಾದಾ ಸಾವಿಗೆ ವಿಮೆ ಕ್ಲೈಮ್ ಮಾಡಲು ಸಾಧ್ಯವಿಲ್ಲ.

ಆತ್ಮಹತ್ಯೆಯಿಂದ ಸಾವು

ಆತ್ಮಹತ್ಯೆಯಿಂದ ಸಾವಾದರೆ ಕೂಡ ವಿಮೆ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಮುಖ್ಯವಾಗಿ ಪಾಲಿಸಿ ಖರೀದಿಸಿ ಒಂದು ವರ್ಷದೊಳಗೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ವಿಮಾ ಪೂರೈಕೆದಾರರಿಂದ ಕ್ಲೈಮ್ ಪಡೆಯಲು ಸಾಧ್ಯವಿಲ್ಲ. ಬಳಿಕ ಪಾಲಿಸಿದಾರನ ಆತ್ಮಹತ್ಯೆಯ ಕಾರಣ ತಿಳಿದ ಬಳಿಕ ಪಾವತಿಸಿದ ಪ್ರೀಮಿಯಂಗಳ ಶೇ. 80ರಷ್ಟನ್ನು ನಾಮಿನಿಗೆ ನೀಡಲಾಗುತ್ತದೆ.

Tax Allocation: ಕೇಂದ್ರದಿಂದ ₹1,78,173 ಕೋಟಿ ತೆರಿಗೆ ಹಣ ಹಂಚಿಕೆ; ಕರ್ನಾಟಕಕ್ಕೆ ದಕ್ಕಿದ್ದೆಷ್ಟು?

ಮೊದಲೇ ತಿಳಿದಿರುವ ಕಾಯಿಲೆಗಳು

ಅವಧಿ ವಿಮೆಯಲ್ಲಿ ಹೆಚ್ ಐವಿ ಅಥವಾ ಏಡ್ಸ್ ನಂತಹ ಲೈಂಗಿಕವಾಗಿ ಹರಡುವ ಕಾಯಿಲೆಗಳಿಂದ ಮರಣ ಸಂಭವಿಸಿದರೆ ಡೆತ್ ಕ್ಲೈಮ್ ಮಾಡಲು ಸಾಧ್ಯವಿಲ್ಲ. ಮಾರಣಾಂತಿಕ ಕಾಯಿಲೆಗಳಿಂದ ಸಂಭವಿಸುವ ಸಾವು ಅವಧಿ ವಿಮೆಯ ಯೋಜನೆಯಡಿಯಲ್ಲಿ ಸೇರುವುದಿಲ್ಲ. ಇವುಗಳಲ್ಲಿ ನಾಲ್ಕನೇ ಹಂತದ ಕ್ಯಾನ್ಸರ್, ನಿರ್ದಿಷ್ಟ ರೀತಿಯ ಮಧುಮೇಹವೂ ಸೇರಿರುತ್ತದೆ. ಇದನ್ನು ವಿಮೆ ಖರೀದಿ ಮಾಡುವಾಗಲೇ ಪಾಲಿಸಿ ಪೂರೈಕೆದಾರರಿಗೆ ತಿಳಿಸಬೇಕಾಗುತ್ತದೆ.