Saturday, 26th October 2024

Natasa Stankovic: ಎಲ್ವಿಶ್ ಯಾದವ್ ಜತೆ ಡೇಟಿಂಗ್‌ ಆರಂಭಿಸಿದರೇ ಪಾಂಡ್ಯ ಮಾಜಿ ಪತ್ನಿ?

ಮುಂಬಯಿ: ಭಾರತ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್(Natasa Stankovic) ಯೂಟ್ಯೂಬರ್ ಹಾಗೂ ಬಿಗ್ ಬಾಸ್ ಒಟಿಟಿ ವಿನ್ನರ್ ಎಲ್ವಿಶ್ ಯಾದವ್ ಜತೆ ಸುತ್ತಾಟ ನಡೆಸಿದ ವಿಡಿಯೊವೊಂದು ವೈರಲ್‌ ಆಗಿದ್ದು, ಎಲ್ವಿಶ್ ಹಾಗೂ ನತಾಶಾ ಡೇಟಿಂಗ್ ಆರಂಭಿಸಿದರೇ ಎಂಬ ಅನುಮಾನ ಮೂಡಿದೆ.

ಜುಲೈನಲ್ಲಿ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ(Hardik Pandya) ಅವರು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ(Hardik-Natasa Divorce) ನೀಡುವ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಮುಂಬೈಯಲ್ಲಿ ನತಾಶ ಎಲ್ವಿಶ್ ಯಾದವ್ ಜತೆಯಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಒಂದೇ ಕಾರ್‌ನಲ್ಲಿ ಪ್ರಯಾಣ ಮತ್ತು ಬಹಳ ಆತ್ಮೀಯವಾಗಿ ರೀಲ್ಸ್‌ ಮಾಡಿದ ವಿಡಿಯೊಗಳು ವೈರಲ್‌ ಆಗಲಾರಂಭಿಸಿದೆ. ಈ ವಿಡಿಯೊ ಕಂಡ ಕೆಲ ನೆಟ್ಟಿಗರು ‘ಚೀಟರ್’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇಬ್ಬರೂ ಒಟ್ಟಾಗಿ ಹಾಡನ್ನು ಪ್ರಮೋಷನ್ ಮಾಡಲು ಜತೆಯಾಗಿ ಕಾಣಿಸಿಕೊಂಡಿದ್ದಾರೆ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ನತಾಶ ಅವರು ಅಲೆಕ್ಸಾಂಡರ್ ಅಲೆಕ್ಸ್(Aleksandar Alex) ಜತೆ ಗೋವಾದಲ್ಲಿ ಜಾಲಿ ಮೂಡ್‌ನಲ್ಲಿರುವ ವಿಡಿಯೊಗಳು ವೈರಲ್‌(Viral Video) ಆಗಿತ್ತು. ಅಲೆಕ್ಸಾಂಡರ್​ ಅಲೆಕ್ಸ್ ಗೋವಾದಲ್ಲಿ ನತಾಶಾ ಜತೆ ಸಮಯ ಕಳೆಯುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಜಿಮ್‌ನಲ್ಲಿ ಮತ್ತು ಈಜುಕೊಳದಲ್ಲಿ ಇಬ್ಬರೂ ಜತೆಯಾಗಿ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಪಾಂಡ್ಯ ಅವರಿಂದ ವಿಚ್ಛೇದನದ ಪಡೆಯುವ ಮುನ್ನವೇ ನತಾಶ ಲಂಡನ್‌ನಲ್ಲಿ ಅಲೆಕ್ಸಾಂಡರ್​ ಅಲೆಕ್ಸ್ ಜತೆ ಸುತ್ತಾಡುತ್ತಿರುವ ವಿಡಿಯೊಗಳು ಕೂಡ ವೈರಲ್‌ ಆಗಿತ್ತು.

ಇದನ್ನೂ ಓದಿ IND vs NZ: ಕಿವೀಸ್‌ ಸರಣಿಗೆ ಶಮಿ ಆಯ್ಕೆಯಾಗದಿರಲು ಕಾರಣವೇನು?

ವಿಚ್ಛೇದನ ಪಡೆದರೂ ಕೂಡ ಇಬ್ಬರೂ ಪುತ್ರ ಅಗಸ್ತ್ಯನನ್ನು(Agastya) ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ ಎಂದು ಈಗಾಗಲೇ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಯಲ್ಲಿ ಖಚಿತಪಡಿಸಿದ್ದರು. ಸದ್ಯ ಅಗಸ್ತ್ಯ ತಂದೆ ಹಾರ್ದಿಕ್‌ ಜತೆಗಿದ್ದರೆ.

2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದ ಹಾರ್ದಿಕ್‌ ಪಾಂಡ್ಯ ಮತ್ತು ನತಾಶ ಜೋಡಿ ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಹಾರ್ದಿಕ್​ ಮತ್ತು ನತಾಶಾ ನಡುವಿನ ಬ್ರೇಕಪ್​ಗೆ ಸಂವಹನ ಕೊರತೆಯೇ ಮುಖ್ಯ ಕಾರಣ ಎಂದು ಆಪ್ತ ಮೂಲಗಳು ಹೇಳಿದೆ.